ತಮಿಳಿಗೆ ರಿಮೇಕ್ ಆಗ್ತಿದೆ 'ಅಲಾ ವೈಕುಂಠಪುರಂಲೋ' ಸಿನಿಮಾ: ನಾಯಕ ಇವರೇ

ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ "ಅಲಾ ವೈಕುಂಠಪುರಂಲೋ" ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದಲ್ಲದೇ, ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿತ್ತು. ದೇಶ ವಿದೇಶದಲ್ಲಿ ಸದ್ದು ಮಾಡಿದ್ದ ಅಲಾ ವಕುಂಠಪುರಂಲೋ ಈ ವರ್ಷದ ತೆಲುಗು ಸೂಪರ್ ಹಿಟ್ ಸಿನಿಮಾ.

Recommended Video

ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

ಕೊರೊನಾ ಲಾಕ್ ಡೌನ್ ಆಗುವವರೆಗೂ ಅಲಾ ವೈಕುಂಠಪುರಂಲೋ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಅಲಾ ವೈಕುಂಠಪುರಂಲೋ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ. ಟಾಲಿವುಡ್ ವುಡ್ ನಲ್ಲಿ ಸಕ್ಸಸ್ ಕಂಡ ಸಿನಿಮಾದ ತಮಿಳು ರಿಮೇಕ್ ಗೆ ನಾಯಕ ಕೂಡ ಆಯ್ಕೆಯಾಗಿದ್ದಾರೆ. ಮುಂದೆ ಓದಿ..

ಅಲ್ಲು ಪಾತ್ರದಲ್ಲಿ ಶಿವಕಾರ್ತಿಕೇಯನ್

ಅಲ್ಲು ಪಾತ್ರದಲ್ಲಿ ಶಿವಕಾರ್ತಿಕೇಯನ್

ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅಭಿಮಾನಿಗಳ ಮನಗೆದ್ದಿದ್ದರು. ಈ ಸಿನಿಮಾದ ತಮಿಳು ರಿಮೇಕ್ ನಲ್ಲಿ ನಟ ಶಿವಕಾರ್ತಿಕೇಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕೇಯನ್ ನಾಯಕನಾಗಿ ಕಾಣಿಸಿಕೊಳ್ಳುವ ಅಲಾ ವೈಕುಂಠಪುರಂಲೋ ತಮಿಳಿನಲ್ಲಿ ಹೇಗೆ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

ರಿಮೇಕ್ ರೈಟ್ಸ್ ಕೊಂಡುಕೊಂಡ ಕಾರ್ತಿಕೇಯನ್

ರಿಮೇಕ್ ರೈಟ್ಸ್ ಕೊಂಡುಕೊಂಡ ಕಾರ್ತಿಕೇಯನ್

ಅಲಾ ವಕುಂಠಪುರಂಲೋ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಶಿವಕಾರ್ತಿಕೇಯನ್, ತೆಲುಗು ಚಿತ್ರದ ರಿಮೇಕ್ ರೈಟ್ಸ್ ಅನ್ನು ಅವರೆ ಕೊಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಶಿವಕಾರ್ತಿಕೇಯನ್ ಆಗಲಿ ಅಥವಾ ತೆಲುಗು ಸಿನಿಮಾತಂಡವಾಗಲಿ ಅಧಿಕೃತವಾಗಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

2020 ಜನವರಿಯಲ್ಲಿ ರಿಲೀಸ್ ಆದ ಸಿನಿಮಾ

2020 ಜನವರಿಯಲ್ಲಿ ರಿಲೀಸ್ ಆದ ಸಿನಿಮಾ

ಅಲಾ ವೈಕುಂಠಪುರಂಲೋ ಈ ಪ್ರಾರಂಭದಲ್ಲಿ ತೆರೆಗೆ ಬಂದ ಸಿನಿಮಾ. ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಚಿತ್ರದಲ್ಲಿ ಅಲ್ಲುಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಮತ್ತು ಪೂಜಾ ಕಾಂಬಿನೇಷನ್ ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಜೊತೆಗೆ ಚಿತ್ರದ ಹಾಡುಗಳು ಸಹ ಪ್ರೇಕ್ಷಕರ ಮನಗೆದ್ದಿತ್ತು.

ಎರಡು ಸಿನಿಮಾಗಳಲ್ಲಿ ಶಿವರಾರ್ತಿಕೇಯನ್ ಬ್ಯುಸಿ

ಎರಡು ಸಿನಿಮಾಗಳಲ್ಲಿ ಶಿವರಾರ್ತಿಕೇಯನ್ ಬ್ಯುಸಿ

ಶಿವಕಾರ್ತಿಕೇಯನ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೈನ್ಸ್ ಫಿಕ್ಷನ್ "ಅಯಾಲಾನ್" ಮತ್ತು ಕಾಮಿಡಿ ಸಿನಿಮಾ "ಡಾಕ್ಟರ್" ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ರವಿ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಬಳಿಕ ಅಲಾ ವೈಕುಂಠಪುರಂಲೋ ಸಿನಿಮಾ ರಿಮೇಕ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Actor Sivakarthikeyan may star in Tamil remake of Allu Arjun starre Ala Vaikuntapuramlo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X