ಕಾಂತಾರ ತೆಲುಗು ಬುಕಿಂಗ್‍ಗೆ ದಂಗಾದ ಟಾಲಿವುಡ್; ರಾತ್ರಿ 11 ಗಂಟೆ ನಂತರವೂ ಪ್ರದರ್ಶನ, ಭರ್ಜರಿ ಲಾಭ ಖಚಿತ!

ಕನ್ನಡದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಕಾಂತಾರ ಚಿತ್ರವನ್ನು ಇತರೆ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಹೀಗೆ ಏಕ ಭಾಷೆಯಲ್ಲಿಯೇ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದ ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರೇಕ್ಷಕರ ಒತ್ತಾಯದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿದೆ.

ನಿನ್ನೆಯಷ್ಟೆ ( ಅಕ್ಟೋಬರ್ 14 ) ಕಾಂತಾರ ಹಿಂದಿ ಚಿತ್ರ ಬಿಡುಗಡೆಗೊಂಡಿದ್ದು, ಇಂದು ( ಅಕ್ಟೋಬರ್ 15 ) ತೆಲುಗು ಹಾಗೂ ತಮಿಳು ಅವತರಣಿಕೆಗಳು ತೆರೆಕಂಡಿವೆ. ಚಿತ್ರ ಭರ್ಜರಿ ವಿಮರ್ಶೆ ಪಡೆದುಕೊಂಡು ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ದಾಖಲೆ ಬರೆದಿದೆ ಎಂಬುದನ್ನು ಕಂಡಿದ್ದ ತೆಲುಗು ಹಾಗೂ ತಮಿಳು ಪ್ರೇಕ್ಷಕರು ಕಾಂತಾರ ಚಿತ್ರವನ್ನು ತಮ್ಮ ಭಾಷೆಯಲ್ಲಿ ವೀಕ್ಷಿಸಲು ಕಾದಿದ್ದರು.

ಆದರೆ ಕಾಂತಾರ ತೆಲುಗು ಚಿತ್ರದ ಮುಂಗಡ ಬುಕ್ಕಿಂಗ್ ಸಾಧಾರಣವಾಗಿತ್ತು. ಇಂದಿನ ಹಲವು ಬೆಳಗಿನ ಪ್ರದರ್ಶನಗಳು 50ರಿಂದ 80% ಪ್ರೇಕ್ಷಕರನ್ನು ಹೊಂದಿದ್ದರೆ, ಇನ್ನೂ ಕೆಲವೆಡೆ ಹೌಸ್ ಫುಲ್ ಆಗಿತ್ತು. ಹೀಗೆ ಬೆಳಗಿನ ಪ್ರದರ್ಶನದ ಬುಕಿಂಗ್ ಮಿಶ್ರಪ್ರತಿಕ್ರಿಯೆ ಪಡೆದುಕೊಂಡರೆ, ಸಂಜೆ ವೇಳೆಗೆ ಬುಕಿಂಗ್ ವೇಗವೇ ಬದಲಾಗಿ ಹೋಯಿತು. ಬೆಳಗಿನ ಮತ್ತು ಮಧ್ಯಾಹ್ನದ ಪ್ರದರ್ಶನಗಳನ್ನು ವೀಕ್ಷಿಸಿ ಹೊರಬಂದ ಸಿನಿಪ್ರೇಕ್ಷಕರು 'ಅಬ್ಬಬ್ಬ ಏನ್ ಸಿನಿಮಾ ಇದು' ಎಂದು ಮಾಧ್ಯಮಗಳ ಮುಂದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದರು. ಹೀಗೆ ಚಿತ್ರದ ಬಗ್ಗೆ ಜನ ಮಾತನಾಡಲು ಆರಂಭಿಸಿದ ಬೆನ್ನಲ್ಲೇ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳು ಹೈದರಾಬಾದ್ ನಗರದಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗುವತ್ತ ಹೆಜ್ಜೆ ಇಟ್ಟಿವೆ.

 ಮಲ್ಟಿಪ್ಲೆಕ್ಸ್ ಸಿಂಗಲ್ ಸ್ಕ್ರೀನ್ ಎಲ್ಲವೂ ವೇಗದ ಫಿಲ್ಲಿಂಗ್, ಹೌಸ್ ಫುಲ್!

ಮಲ್ಟಿಪ್ಲೆಕ್ಸ್ ಸಿಂಗಲ್ ಸ್ಕ್ರೀನ್ ಎಲ್ಲವೂ ವೇಗದ ಫಿಲ್ಲಿಂಗ್, ಹೌಸ್ ಫುಲ್!

ಬೆಳಿಗ್ಗೆ ಮತ್ತು ಮಧ್ಯಾಹ್ನದ ಪ್ರದರ್ಶನ ವೀಕ್ಷಿಸಿ ಹೊರ ಬಂದು ಚಿತ್ರ ಸೂಪರ್ ಎಂಬ ಅಭಿಪ್ರಾಯವನ್ನು ತೆಲುಗು ಸಿನಿ ಪ್ರೇಕ್ಷಕ ವ್ಯಕ್ತಪಡಿಸುತ್ತಿದ್ದಂತೆ ಹೈದರಾಬಾದ್ ನಗರದ ಸಂಜೆ ಮತ್ತು ರಾತ್ರಿ ವೇಳೆಯ ಪ್ರದರ್ಶನಗಳ ಟಿಕೆಟ್ ಭರ್ಜರಿಯಾಗಿ ಸೋಲ್ಡ್ ಔಟ್ ಆಗಿವೆ. ಹೈದರಾಬಾದ್ ನಗರದ ಪಿವಿಆರ್, ಐನಾಕ್ಸ್ ಸಿನೆಪೊಲೀಸ್, ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕೂಡ ವೇಗವಾಗಿ ತುಂಬುತ್ತಿವೆ ಹಾಗೂ ಬಹುತೇಕ ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ. ಒಟ್ಟಿನಲ್ಲಿ ವೇಗವಾಗಿ ತುಂಬುತ್ತಿರುವ ಪ್ರದರ್ಶನಗಳೂ ಕೂಡ ಸಿನಿಮಾ ಆರಂಭದ ವೇಳೆಗೆ ಸೋಲ್ಡ್ ಔಟ್ ಆಗುವುದರಲ್ಲಿ ಎರಡು ಮಾತಿಲ್ಲ.

 ರಾತ್ರಿ 10.45, 11, 11.10 ಗಂಟೆಗೆ ಪ್ರದರ್ಶನ!

ರಾತ್ರಿ 10.45, 11, 11.10 ಗಂಟೆಗೆ ಪ್ರದರ್ಶನ!

ಇನ್ನು ಕಾಂತಾರ ಚಿತ್ರದ ತೆಲುಗು ಬುಕಿಂಗ್ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ ಹೈದರಾಬಾದ್ ನಗರದ ಹಲವು ಚಿತ್ರಮಂದಿರಗಳು ರಾತ್ರಿ 10.45, 10.50, 11 ಮತ್ತು 11.10 ಗಂಟೆಗಳಿಗೆ ಹೆಚ್ಚುವರಿ ಶೋಗಳನ್ನು ಸೇರಿಸಿವೆ. ಇಂದು ನಗರದ ಮಲ್ಕಾಜ್ ಗಿರಿ ಪ್ರದೇಶದಲ್ಲಿರುವ ಸಿನಿಪೊಲಿಸ್ ಚಿತ್ರಮಂದಿರದಲ್ಲಿ, ಪಂಜಾಗುಟ್ಟ ಪಿವಿಆರ್, ಮಲ್ಲಾಪುರ ಪಿವಿಆರ್ ಹಾಗೂ ಗಚ್ಚಿಬೌಲಿ ಪಿವಿಆರ್ ಪರದೆಗಳಲ್ಲಿ ರಾತ್ರಿ 11 ಗಂಟೆಗೆ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಆರ್ ಎಕ್ಸ್ ಸಿನಿಪ್ಲೆಕ್ಸ್ ಪಿವಿಆರ್ ಚಿತ್ರಮಂದಿರದಲ್ಲಿ ರಾತ್ರಿ 11.10ಕ್ಕೆ ಕಾಂತಾರ ಹೆಚ್ಚುವರಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಆಶ್ಚರ್ಯವೆಂದರೆ ಈ ಎಲ್ಲಾ ಹೆಚ್ಚುವರಿ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ.

 ಬುಕಿಂಗ್ ಕಂಡು ದಂಗಾದ ಟಾಲಿವುಡ್ ಮಂದಿ

ಬುಕಿಂಗ್ ಕಂಡು ದಂಗಾದ ಟಾಲಿವುಡ್ ಮಂದಿ

ಕಾಂತಾರ ಚಿತ್ರದ ರಾತ್ರಿ ಬುಕಿಂಗ್ ಕಂಡ ತೆಲುಗು ಸಿನಿ ಪ್ರೇಕ್ಷಕರು ನಿಜಕ್ಕೂ ದಂಗಾಗಿದ್ದಾರೆ. ಚಿತ್ರದ ಬುಕ್ಕಿಂಗ್ ಕುರಿತು ಟ್ವಿಟ್ಟರ್ ವೇದಿಕೆಯಲ್ಲಿ ಚರ್ಚಿಸುತ್ತಿರುವ ಟಾಲಿವುಡ್ ಸಿನಿರಸಿಕರು ವಿತರಕರು ಭರ್ಜರಿ ಲಾಭ ಪಡೆಯುವುದು ಖಚಿತ ಎಂದು ಬರೆದುಕೊಳ್ಳುತ್ತಿದ್ದಾರೆ.

More from Filmibeat

English summary
So many late night extra shows added for Kantara telugu movie in Hyderabad city on release day. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X