ಮಧ್ಯದ ಬೆರಳು ತೋರಿಸಿದ ನಾಗಚೈತನ್ಯ ಹೊಸ ಗರ್ಲ್‌ಫ್ರೆಂಡ್: ಸಮಂತಾ ಮೇಲೆ ಸಿಟ್ಟೆ?
ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇಧನ ಘೋಷಿಸಿ 10 ತಿಂಗಳಾಗಿದೆ. ಆದರೆ ಇವರಿಬ್ಬರ ಬಗ್ಗೆ ಚರ್ಚೆಗಳು, ಸುದ್ದಿಗಳು ಮುಗಿಯುತ್ತಿಲ್ಲ. ವಾರಕ್ಕೊಮ್ಮೆಯಾದರೂ ಇವರ ಬಗ್ಗೆ ಒಂದಲ್ಲ ಒಂದು ಸುದ್ದಿ, ಗಾಸಿಪ್ ಹರಿದಾಡಲಾರಂಭಿಸುತ್ತದೆ.
ಸಮಂತಾ ಇಂದ ದೂರಾದ ಬಳಿಕ ನಟ ನಾಗಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಧುಲಿಪಾಡ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರೂ ಹೋಟೆಲ್ ಒಂದರಲ್ಲಿ ಒಟ್ಟಿಗೆ ಓಡಾಡುತ್ತಿರುವ ವಿಡಿಯೋ ಸಹ ವಿಡಿಯೋ ಸಹ ಬಿಡುಗಡೆ ಆಗಿದೆ.
ಆದರೆ ಶೋಭಿತಾ ಹಾಗೂ ನಾಗ ಚೈತನ್ಯ ಬಗ್ಗೆ ಗಾಳಿ ಸುದ್ದಿ ಹಬ್ಬಿಸುತ್ತಿರುವುದು ನಟಿ ಸಮಂತಾ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಇದಕ್ಕೆ ನಟಿ ಸಾಮಾಜಿಕ ಜಾಲತಾಣದ ಮೂಲಕ ಖಾರವಾಗಿಯೇ ಉತ್ತರ ನೀಡಿದ್ದರು. ಈಗ ನಟಿ ಶೋಭಿತಾರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಶೋಭಿತಾ ಸಿಟ್ಟಿನಿಂದ ಮಧ್ಯದ ಬೆರಳು ತೋರಿಸಿದ್ದಾರೆ.

ಶೋಭಿತಾರ ವಿಡಿಯೋ ಹರಿದಾಡುತ್ತಿದೆ
ಸೆಲ್ಫಿ ವಿಡಿಯೋ ಮಾಡಿರುವ ಶೋಭಿತಾ ಧುಲಿಪಾಡ, ಮೊದಲಿಗೆ ನಗುತ್ತಾ ಹಾಯ್ ಹೇಳುತ್ತಾರೆ ಹಾಗೆಯೇ ಸಿಟ್ಟು ಮಾಡಿಕೊಂಡು ಮಧ್ಯದ ಬೆರಳು ತೋರಿಸಿ ವಿಡಿಯೋ ಕಟ್ ಮಾಡುತ್ತಾರೆ. ಆದರೆ ಈ ವಿಡಿಯೋ ಬಗ್ಗೆ ತುಸು ಅನುಮಾನಗಳು ಸಹ ಇದೆ. ಇದು ಶೋಭಿತಾರ ಹೊಸ ವಿಡಿಯೋ ಅಲ್ಲ ಎನ್ನಲಾಗುತ್ತಿದೆ. ಇನ್ನು ಕೆಲವರು ಕಮೆಂಟ್ ಮಾಡಿರುವಂತೆ ಈ ವಿಡಿಯೋವನ್ನು ಅವರ ಗೆಳೆಯರಿಗೆ ಶೋಭಿತಾ ಕಳಿಸಿದ್ದರಂತೆ ಅದು ಈಗ ವೈರಲ್ ಆಗುತ್ತಿದೆ ಎನ್ನಲಾಗುತ್ತಿದೆ.

ಮದುವೆಯಾಗಲಿದ್ದಾರೆ ಶೋಭಿತಾ-ನಾಗಚೈತನ್ಯ?
ಏನಾದರಾಗಲಿ, ಶೋಭಿತಾ ಈಗ ಸುದ್ದಿಯಲ್ಲಂತೂ ಇದ್ದಾರೆ. ನಾಗ ಚೈತನ್ಯ ಅನ್ನು ಶೋಭಿತಾ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಶೋಭಿತಾ ಹಾಗೂ ನಾಗ ಚೈತನ್ಯ ಪರಸ್ಪರ ಕೈ-ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಸಂಬಂಧಕ್ಕೆ, ವಿವಾಹಕ್ಕೆ ನಾಗ ಚೈತನ್ಯರ ಮನೆಯವರ ಒಪ್ಪಿಗೆಯೂ ಇದೆಯಂತೆ. ಆದರೆ ಈವರೆಗೆ ಶೋಭಿತಾ ಆಗಲಿ ನಾಗ ಚೈತನ್ಯ ಆಗಲಿ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಹೊರಗೆಲ್ಲೂ ಬಾಯಿ ಬಿಟ್ಟಿಲ್ಲ.

ನಾಗಚೈತನ್ಯ ಅಭಿಮಾನಿಗಳ ವಿರುದ್ಧ ಗರಂ ಆದ ಸಮಂತಾ
ಇನ್ನು ಶೋಭಿತಾ ಹಾಗೂ ನಾಗ ಚೈತನ್ಯ ಸಂಬಂಧದ ಬಗ್ಗೆ ಸಮಂತಾರೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಾಗ ಚೈತನ್ಯ ಅಭಿಮಾನಿಗಳು ಆರೋಪ ಮಾಡಿದ್ದರು. ಈ ಬಗ್ಗೆ ಪೋಸ್ಟ್ ಹಾಕಿದ್ದ ಸಮಂತಾ, ''ಹುಡುಗಿಯರ ಬಗ್ಗೆ ಗಾಸಿಪ್ ಅನ್ನು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್ ಹಬ್ಬಿದರೆ ಇದಕ್ಕೆ ಹುಡುಗಿಯೇ ಕಾರಣ ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ'' ಎಂದಿದ್ದರು.

ಹತ್ತು ವರ್ಷ ಒಟ್ಟಿಗಿದ್ದ ಸಮಂತಾ-ನಾಗಚೈತನ್ಯ
ಐದು ವರ್ಷ ಸತತ ಪ್ರೀತಿಸಿದ್ದ ನಾಗಚೈತನ್ಯ ಹಾಗೂ ನಟಿ ಸಮಂತಾ 2017 ರಲ್ಲಿ ವಿವಾಹವಾಗಿದ್ದರು. ಬಳಿಕ 2021 ರ ಅಕ್ಟೋಬರ್ 21 ರಂದು ವಿಚ್ಛೇಧನ ಪಡೆದುಕೊಂಡರು. ವಿಚ್ಛೇಧನದ ಬಳಿಕ ಸಮಂತಾ ತಮ್ಮ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ವಹಿಸಿದ್ದು, ಹಲವು ಹೊಸ ರೀತಿಯ ಪಾತ್ರಗಳನ್ನು ತೆಗೆದುಕೊಂಡು ನಟಿಸುತ್ತಿದ್ದಾರೆ. ಸಮಂತಾರ ಸಿನಿಮಾ ಆಯ್ಕೆಗಳು ಅವರ ಅಭಿಮಾನಿಗಳಿಗೆ ಹೆಮ್ಮೆ ತರುತ್ತಿವೆ. ಬಾಲಿವುಡ್‌ಗೂ ಹಾಡುತ್ತಿದ್ದಾರೆ ಸಮಂತಾ.


Click it and Unblock the Notifications











