ಶೋಭಿತಾ ಧುಲಿಪಾಲ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ? ಚರ್ಚೆ ಶುರುವಾಗಿದ್ದು ಹೀಗೆ!

By ಫಿಲ್ಮಿಬೀಟ್ ಕನ್ನಡ ಡೆಸ್ಕ್

ಶೋಭಿತಾ ಧುಲಿಪಾಲ ಈ ಹಿಂದೆ ನಟ ನಾಗಚೈತನ್ಯ ಹೆಸರಿನ ಜೊತೆಗೆ ತಳುಕು ಹಾಕಿಕೊಂಡಾಗ ಭಾರಿ ಸುದ್ದಿಯಾಗಿದ್ದ ನಟಿ. ಈಗ ಮತ್ತೆ ಹೊಸ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅದು ಅವರದ್ದೇ ಒಂದು ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ.

ಎಸ್.. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್, ದಿ ನೈಟ್ ಮ್ಯಾನೇಜರ್ ಮತ್ತು ಮೇಡ್ ಇನ್ ಹೆವೆನ್‌ನಲ್ಲಿ ತಮ್ಮ ಅದ್ಭುತ ಅಭಿನಯದಿಂದ ಹೆಸರುವಾಸಿಯಾಗಿರುವ ಶೋಭಿತಾ ಧುಲಿಪಾಲ, ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದಿದಾರೆ.

sobhita-dhulipalas-shocking-beauty-transformation

ಶೋಭಿತಾ ಹಳೇ ವಿಡಿಯೋ ವೈರಲ್!

ನಟಿ ಶೋಭಿತಾ ಧುಲಿಪಾಲ ಅವರ ಥ್ರೋಬ್ಯಾಕ್ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು, ಅವರ ಸೌಂದರ್ಯ ಮತ್ತು ಕಾಸ್ಮೆಟಿಕ್ ಸರ್ಜರಿಯ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದಾರೆ. ರೆಡ್ಡಿಟ್ ಚಾನೆಲ್‌ನಲ್ಲಿ ಶೋಭಿತಾ ಧುಲಿಪಾಲ ಅವರ ಮಿಸ್ ಇಂಡಿಯಾ ಅರ್ಥ್ 2013 ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿಡಿಯೋ ಪೋಸ್ಟ್ ಮಾಡಿದ್ದಾರೆ ಮತ್ತು ಇದು ಎಲ್ಲರ ಗಮನ ಸೆಳೆದಿದೆ.

ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾದ ಅಸಿನ್ ತೊಟ್ಟುಂಕಲ್ ಅವಎಉ ಶೋಭೀತಾಗೆ ಪ್ರಶ್ನೆ ಕೇಳುತ್ತಿದ್ದಾರೆ. "ನನ್ನ ಪ್ರಶ್ನೆ, ಇಂದಿನ ಸ್ವತಂತ್ರ ಯುವತಿಯಾಗಿರುವ ನಿಮಗೆ, ರಾಜ್ಯ ಸರ್ಕಾರ ಅಥವಾ ಕಾಲೇಜುಗಳಿಗೆ ಏನು ಧರಿಸಬೇಕು, ಧರಿಸಬಾರದು ಎಂದು ಡ್ರೆಸ್ ಕೋಡ್ ಹೇರುವ ಹಕ್ಕಿದೆ ಎಂದು ನೀವು ಭಾವಿಸುತ್ತೀರಾ??ನಿಮ್ಮ ಅಭಿಪ್ರಾಯವೇನು? "ಎಂದು ಕೇಳುತ್ತಾರೆ.

Is this sobhita Dhulipala
by u/Smooth_Ad4219 in BollyBlindsNGossip

ಇದಕ್ಕೆ ಉತ್ತರಿಸಿರುವ ನಟಿ ಶೋಭಿತಾ, "ಕಾಲೇಜುಗಳು ಮತ್ತು ರಾಜ್ಯ ಸರ್ಕಾರಗಳು ಸಮವಸ್ತ್ರದ ಮೇಲಿನ ನಿರ್ಬಂಧಗಳನ್ನು ಬಲಪಡಿಸುವ ಅಧಿಕಾರವನ್ನು ಹೊಂದಿರಬಾರದು. "ನೈತಿಕ ಪೊಲೀಸ್‌ಗಿರಿಯಲ್ಲಿನ ಕೊರತೆಯನ್ನು ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅವಿವೇಕದ ನಿಯಮಗಳನ್ನು ಹೇರುವ ಮೂಲಕ ಸರಿದೂಗಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು "ಎಲ್ಲ ಶಸ್ತ್ರಚಿಕಿತ್ಸೆಗಳು ಆದಿಲ್‌ನ ಹಣದಿಂದ ನಡೆದಿವೆ. ಆಸಿನ್‌ನ ಪತಿ ಕೂಡ ಆದಿಲ್‌ನಂತೆ ಶ್ರೀಮಂತ" ಎಂದು ಬರೆದಿದ್ದಾರೆ. ಮತ್ತೊಬ್ಬರು ಓಮೈಗಾಡ್ ನಾನು ಅವರ ಧ್ವನಿ ಮತ್ತು ಮಾತನಾಡುವ ರೀತಿಯನ್ನು ಕೇಳಿದ ನಂತರ ಗುರುತಿಸಿದೆ" ಎಂದಿದ್ದಾರೆ.

sobhita-dhulipalas-shocking-beauty-transformation

"ಜೀವನಾಂಶವನ್ನು ಪಡೆಯುವ ಮೊದಲಿನ ತಾರಾ ಅವರು" ಎಂದು ನೆಟಿಜನ್‌ಯೊಬ್ಬರು ಮೆಡ್ ಇನ್ ಹೆವನ್ ಸೀರಿಸ್‌ನ ಪಾತ್ರವನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಹೌದು ಅವರು ಸರ್ಜರಿ ಮಾಡದೆಯೇ ಸುಂದರವಾಗಿ ಕಾಣುತ್ತಿದ್ದರು. ಆದರೆ, ಅವರು ಯಾವಾಗಲೂ ಮಾಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ತುಟಿಗಳಿಗೆ ಎಂದು ಹೇಳಿದ್ದಾರೆ.

ನೆಟಿಜನ್ ಸಹ ನಟಿ ಮಾಡಿಸಿದ್ದಾರೆ ಎನ್ನಲಾಗಿರು ಶಸ್ತ್ರಚಿಕಿತ್ಸೆಗಳನ್ನು ಪಟ್ಟಿ ಮಾಡಿದ್ದಾರೆ. "ಖಂಡಿತವಾಗಿ ಲಿಪ್-ಫಿಲ್ಲರ್‌ಗಳು, ರೈನೋಪ್ಲ್ಯಾಸ್ಟಿ ಮತ್ತು ದವಡೆಯ ಶೇಪ್ ಮಾಡಲಾಗಿದೆ. ಅವಳ ಹುಬ್ಬುಗಳಿಗೂ ಏನಾದರೂ ಮಾಡಿರಲೇಬೇಕು (ಖಂಡಿತವಾಗಿಯೂ ಮೈಕ್ರೊಬ್ಲೇಡಿಂಗ್ ಮಾಡಲಾಗಿದೆ ಆದರೆ ಅದನ್ನು ಶಸ್ತ್ರಚಿಕಿತ್ಸೆ ಎಂದು ಪರಿಗಣಿಸುವುದಿಲ್ಲ) . ಆದರೆ ಹುಬ್ಬು ಎತ್ತಿರುವ ಸಾಧ್ಯತೆಯಿದೆ. ಈಗ ಅವರು ತುಂಬಾ ಸುಂದರವಾಗಿ ಮತ್ತು ಸೂಪರ್ ಹಾಟ್ ಆಗಿದ್ದಾರೆ" ಎಂದಿದ್ದಾರೆ.

ವಿಶಾಖಪಟ್ಟಣಂನಲ್ಲಿ ಬೆಳೆದ ಶೋಭಿತಾ ಧುಲಿಪಾಲ ಅವರು 2013 ರಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದರು. 25 ವರ್ಷದವರಾಗಿದ್ದಾಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ತಮಿಳು, ಹಿಂದಿ, ಮಲಯಾಳಂ ಸೇರಿ 20ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Sobhita Dhulipala's shocking beauty transformation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X