ಎನ್‌ಟಿಆರ್‌ ಹಿಂದೆ ಹಲವರು ಪಿತೂರಿ ಮಾಡಿದರು: ಬಾಲಕೃಷ್ಣ ಶಾಕಿಂಗ್ ಹೇಳಿಕೆ

ಎನ್‌ಟಿಆರ್ ಕುಟುಂಬ ಮತ್ತು ಸ್ವತಃ ಎನ್‌ಟಿಆರ್ ಬಗ್ಗೆ ತೆಲುಗು ರಾಜ್ಯಗಳಲ್ಲಿ ವಿಪರೀತ ಗೌರವ. ಜೊತೆಗೆ ಅಷ್ಟೇ ಕುತೂಹಲ ಸಹ.

Recommended Video

ಅಣ್ಣನಂತೆ ಮುಂದೆ ನಿಂತು ಹೆಗಲು ಕೊಟ್ಟ ದರ್ಶನ್ | Chiranjeevi Sarja | Darshan | FILMIBEAT KANNADA

ತೆಲುಗು ಸಿನಿಮಾ ಇತಿಹಾಸವನ್ನು ನಂದಮೂರಿ ತಾರಕರಾಮಾ ರಾವ್ (ಎನ್‌ಟಿಆರ್) ಇಲ್ಲದೆ ಬರೆಯಲು ಸಾಧ್ಯವೇ ಇಲ್ಲ. ಅಂತೆಯೇ ಅವಿಭಜಿತ ಆಂಧ್ರಪ್ರದೇಶದ ರಾಜಕೀಯ ಇತಿಹಾಸವೂ ಸಹ ಎನ್‌ಟಿಆರ್ ಇಲ್ಲದೆ ಪೂರ್ಣವಾಗದು. ಹೊಸ ಪಕ್ಷ ಸ್ಥಾಪಿಸಿ ವರ್ಷ ಕಳೆಯುವ ಒಳಗೆ ಸಿಎಂ ಆದವರು ಎನ್‌ಟಿಆರ್.

ಅವರ ಸಿನಿಮಾ ಯಾನ ಯಾವುದೇ ಅಡೆ-ತಡೆಗಳಿಲ್ಲದೆ ಅದ್ಭುತವಾಗಿ ಸಾಗಿತು ಆದರೆ ರಾಜಕೀಯ ಜೀವನ ಹಾಗಲ್ಲ ಹಲವಾರು ಅಡೆ-ತಡೆಗಳು, ಜಗಳ, ಪ್ರೇಮ, ಮೋಸ, ಬೆನ್ನು ಇರಿತ ಹೀಗೆ ಹಲವಾರು ಅಂಶಗಳನ್ನು ಅದು ಒಳಗೊಂಡಿದೆ. ಹಾಗಾಗಿಯೇ ಎನ್‌ಟಿಆರ್ ರಾಜಕೀಯ ಜೀವನದ ಬಗ್ಗೆ ಹಲವು ಸಿನಿಮಾಗಳು ಆಗಿವೆ. ಆದರೂ ಜನರ ಕುತೂಹಲ ತಣಿದಿಲ್ಲ.

ಎನ್‌ಟಿಆರ್ ಅನ್ನು ಹತ್ತಿರದಿಂದ ಕಂಡ ಮಗ ಬಾಲಕೃಷ್ಣ ತಮ್ಮ ತಂದೆಯ ರಾಜಕೀಯ ಜೀವನದ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಪ್ಪನೊಂದಿಗೆ ಪ್ರಚಾರದಲ್ಲಿ ಭಾಗವಹಿಸಿದ್ದರು

ಅಪ್ಪನೊಂದಿಗೆ ಪ್ರಚಾರದಲ್ಲಿ ಭಾಗವಹಿಸಿದ್ದರು

ಎನ್‌ಟಿಆರ್ ಟಿಡಿಪಿ ಪಕ್ಷ ಸ್ಥಾಪಿಸಿದಾಗ ಬಾಲಕೃಷ್ಣ ನಟರಾಗಿ ಅದಾಗಲೇ ಹೆಸರು ಮಾಡಿದ್ದರು. ಅಪ್ಪನೊಂದಿಗೆ ಪ್ರಚಾರದಲ್ಲಿ ಸಹ ಭಾಗವಹಿಸಿದ್ದರು. ಚೈತನ್ಯ ಯಾತ್ರೆಯುದ್ದಕ್ಕೂ ಏನೇನಾಯಿತು. ಅಪ್ಪ ರಾಜಕೀಯಕ್ಕೆ ಬಂದದ್ದು ಹೇಗೆ? ಅವಸಾನ ಹೊಂದಿದ್ದು ಹೇಗೆ ಎಲ್ಲವೂ ಅವರಿಗೆ ಗೊತ್ತು.

ಬಾಲಕೃಷ್ಣ ಈ ಬಗ್ಗೆ ಮಾತನಾಡಿರುವುದು ಕಡಿಮೆ

ಬಾಲಕೃಷ್ಣ ಈ ಬಗ್ಗೆ ಮಾತನಾಡಿರುವುದು ಕಡಿಮೆ

ಆದರೆ ಬಾಲಕೃಷ್ಣ ಅವರು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಅವರು ಇತ್ತೀಚೆಗೊಂದು ಸಂದರ್ಶನ ನೀಡಿದ್ದಾರೆ. ದೀರ್ಘವಾದ ಈ ಸಂದರ್ಶನದಲ್ಲಿ ಕೆಲವು ಮಾತುಗಳನ್ನಷ್ಟೆ ಅವರು ತಂದೆಯ ರಾಜಕೀಯದ ಜರ್ನಿ ಕುರಿತು ಆಡಿದ್ದಾರೆ.

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅಡ್ಡ ಬಂದರು

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅಡ್ಡ ಬಂದರು

'ತಂದೆಗೆ ರಾಜ್ಯಸಭಾ ಸದಸ್ಯ ಸ್ಥಾನ ಕೊಡುತ್ತೇವೆಂದು ಪಕ್ಷವೊಂದು ಹೇಳಿದಾಗ ಕೆಲವರು ಅದಕ್ಕೆ ಅಡ್ಡ ಹಾಕಿದರು. ಅವರ ಹಿಂದೆ ಸಾಕಷ್ಟು ರಾಜಕೀಯ ಪಿತೂರಿಗಳು ನಡೆದವು. ಆಗಿನ ರಾಜಕೀಯ ಸಂದರ್ಭ ಸಹ ಅಷ್ಟೇನೂ ಜನಪರವಾಗಿರಲಿಲ್ಲ, ಹಾಗಾಗಿ ತಂದೆಯವರು ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾದರು' ಎಂದಿದ್ದಾರೆ ಬಾಲಕೃಷ್ಣ.

ತಂದೆಯ ನೆನಪು ಹಂಚಿಕೊಂಡ ಬಾಲಕೃಷ್ಣ

ತಂದೆಯ ನೆನಪು ಹಂಚಿಕೊಂಡ ಬಾಲಕೃಷ್ಣ

ತಂದೆಯ ಮತ್ತೊಂದು ನೆನಪು ಹಂಚಿಕೊಂಡಿರುವ ಬಾಲಕೃಷ್ಣ, 'ನಾನು ಗುರು, ಗೆಳೆಯ, ದೇವರು ಎಲ್ಲವನ್ನೂ ತಂದೆಯಲ್ಲಿಯೇ ನೋಡುತ್ತೇನೆ. ಅವರು ಪ್ರತಿದಿನ ಸಿಗರೇಟು ಸೇದುತ್ತಿದ್ದರು, ಬೆಳಿಗ್ಗೆ ಎದ್ದಕೂಡಲೇ ಒಂದು ರಾತ್ರಿ ಒಂದು. ಅವರು ಗಂಟಲ ಕಫ ಹೊರಗೆ ಬರಲೆಂದು ಹೀಗೆ ಮಾಡುತ್ತಿದ್ದರು, ನಾನೂ ಹೀಗೆಯೇ ಮಾಡುತ್ತೇನೆ' ಎಂದಿದ್ದಾರೆ. ಎನ್‌ಟಿಆರ್ ಸಿನಿಮಾ ನೋಡದೆ ನಾನು ಮಲುಗುವುದೇ ಇಲ್ಲ ಎಂದೂ ಸಹ ಬಾಲಕೃಷ್ಣ ಹೇಳಿದ್ದಾರೆ.

More from Filmibeat

English summary
Actor , politician Balakrishna said some people back stabbed NTR in politics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X