For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್‌ಗೆ ತೃಪ್ತಿಯಿಲ್ಲ, 'ರಾಧೆ-ಶ್ಯಾಮ್' ದೃಶ್ಯಗಳ ಮರುಚಿತ್ರೀಕರಣ

  |

  ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿದೆ. ಆದರೆಎ ಹೊಸ ಸುದ್ದಿಯೆಂದರೆ ಸಿನಿಮಾದ ಕೆಲವು ದೃಶ್ಯಗಳನ್ನು ಮರುಚಿತ್ರೀಕರಣ ಮಾಡಲಾಗುತ್ತಿದೆ.

  ಹೌದು, ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು ಚಿತ್ರತಂಡ. ಇದೀಗ ಹಾಡಿನ ಜೊತೆಗೆ ಸಿನಿಮಾದ ಕೆಲವು ದೃಶ್ಯಗಳನ್ನು ಸಹ ಮರುಚಿತ್ರೀಕರಣ ಮಾಡಲಾಗುತ್ತಿದೆ.

  ಕೊರೊನಾ ಸಮಯದಲ್ಲಿ ಯೂರೋಪ್ ದೇಶಗಳಲ್ಲಿ 'ರಾಧೆ-ಶ್ಯಾಮ್' ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ತರಾ-ತುರಿಯಲ್ಲಿ ಚಿತ್ರೀಕರಣ ಮುಗಿಸುವ ಒತ್ತಡ ಚಿತ್ರತಂಡದ ಮೇಲಿತ್ತು. ಹಾಗಾಗಿ ವಿದೇಶದಲ್ಲಿನ ಭಾಗಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲಾಗಿತ್ತು.

  ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವೇಳೆ ಸಿನಿಮಾದ ಕೆಲವು ದೃಶ್ಯಗಳ ಬದಲಾವಣೆ ಮಾಡುವ ಅವಶ್ಯಕತೆ ಕಂಡುಬಂದ ಕಾರಣ ಕೆಲವು ದೃಶ್ಯಗಳನ್ನು ಮರು ಚಿತ್ರೀಕರಣ ಮಾಡುವ ನಿರ್ಧಾರ ಕೈಗೊಂಡಿದೆ ಚಿತ್ರತಂಡ. ಈ ಮರುಚಿತ್ರೀಕರಣದ ಹಿಂದೆ ಪ್ರಭಾಸ್ ಅವರ ಒತ್ತಾಯ ಹೆಚ್ಚಿದೆ ಎನ್ನಲಾಗುತ್ತಿದೆ.

  'ರಾಧೆ-ಶ್ಯಾಮ್' ಸಿನಿಮಾವು ಅಪ್ಪಟ ಪ್ರೇಮಕತಾ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಯಾವುದೇ ಫೈಟ್‌ ದೃಶ್ಯಗಳು ಸಹ ಇರುವುದಿಲ್ಲ ಎನ್ನಲಾಗುತ್ತಿದೆ. ಅದರಲ್ಲಿಯೂ ಸಿನಿಮಾವು ಯೂರೋಪ್‌ನಲ್ಲಿ 60-70 ರ ದಶಕದಲ್ಲಿ ನಡೆವ ಕತೆಯನ್ನು ಹೊಂದಿರಲಿದೆ.

  ಪುನೀತ್ ನಟಿಸುವ ಹೊಸ ಸಿನಿಮಾದಲ್ಲಿ ನೀವು ಕೂಡ ನಟಿಸಬೇಕು ಅಂದ್ರೆ ಹೀಗ್ ಮಾಡಿ | Filmibeat Kannada

  'ರಾಧೆ-ಶ್ಯಾಮ್' ಸಿನಿಮಾದ ಟೀಸರ್ ಹಾಗೂ ಕೆಲವು ಪೋಸ್ಟರ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ. ಸಿನಿಮಾವು ಜುಲೈ 30 ರಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದು, ಪೂಜಾ ಹೆಗ್ಡೆ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Some scenes of Radhe Shyam movie will be re shoot soon. Prabhas and director not ok with some scenes so they planing to re-shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X