ಜಾಕ್ವೆಲಿನ್, ಕಾಜಲ್ ನಂತರ ನಾಗಾರ್ಜುನ ಅಡ್ಡಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬೆಡಗಿ!
ಟಾಲಿವುಡ್‌ನ ಖ್ಯಾತ ನಟ ಕಿಂಗ್ ನಾಗಾರ್ಜುನ ಅಕ್ಕಿನೇನಿ ಸಿನಿಮಾ ಅಂದ್ರೆ ಅಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿ ಇರುತ್ತವೆ. ನಾಗಾರ್ಜುನ ಅಭಿನಯಿಸುತ್ತಿರುವ ಸಿನಿಮಾ ಅಂದ್ರೆ ಚಿತ್ರ ತಂಡ ಸರಿಯಾದ ತಯಾರಿಯನ್ನೆ ಮಾಡಿಕೊಂಡು ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ. ಆದರೇ ನಾಗರ್ಜುನ ಅಕ್ಕಿನೇನಿ ಅಭಿನಯಿಸಲಿರುವ, ಟೈಟಲ್ ಮೂಲಕವೇ ಭಾರಿ ಕುತೂಹಲ ಮೂಡಿಸಿರುವ ದಿ ಘೋಸ್ಟ್ ವಿಚಾರದಲ್ಲಿ ಒಂದಷ್ಟು ಎಡವಟ್ಟುಗಳು ನಡೆದಿದೆ. ಚಿತ್ರ ಆರಂಭದ ಸಮಯದಲ್ಲಿ ಒಬ್ಬರಲ್ಲ ಇಬ್ಬರು ನಾಯಕಿಯರು ಈ ಚಿತ್ರಕ್ಕೆ ಆಯ್ಕೆ ಆಗಿ ಚಿತ್ರತಂಡದಿಂದ ಹೊರನಡೆದಿದ್ದಾರೆ, ಇದೀಗ ಈ ಜಾಗಕ್ಕೆ ಮತ್ತೊಬ್ಬ ನಟಿಯ ಪ್ರವೇಶವಾಗಿದೆ.
ಹೌದು ನಾಗಾರ್ಜುನ ಅಕ್ಕಿನೇನಿ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಅದೆಷ್ಟೊ ನಾಯಕಿಯರು ಎಕ್ಸೈಟ್ ಆಗಿರುತ್ತಾರೆ. ಆದರೇ ದಿ ಘೋಸ್ಟ್ ಚಿತ್ರತಂಡ ಮಾತ್ರ ಅದ್ಯಾಕೋ ಗೊತ್ತಿಲ್ಲ ನಾಗಾರ್ಜುನ ಅವರಿಗೆ ಹೀರೋಯಿನ್ಸ್ ಆಯ್ಕೆ ವಿಚಾರದಲ್ಲಿ ಸಾಕಷ್ಟು ಎಡವಿದಂತೆ ಕಾಣುತ್ತೆ. ಸದ್ಯ ಚಿತ್ರತಂಡಕ್ಕೆ ಮೂರನೇ ನಾಯಕಿಯಾಗಿ ಸೋನಾಲ್ ಚೌಹಾಣ್ ಆಯ್ಕೆ ಆಗಿದ್ದಾರೆ. ಬಾಲಿವುಡ್ ಸಿನಿಮಾ ಮೂಲಕ ತನ್ನ ಸಿನಿ ಕೆರಿಯರ್ ಆರಂಭಿಸಿದ ಸೋನಾಲ್ ತದನಂತರದಲ್ಲಿ ಕನ್ನಡ, ತಮಿಳು, ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ತನ್ನ ಮೈಮಾಟದಿಂದಲೇ ನೋಡುಗರ ಗಮನ ಸೆಳೆಯುವ ಸೋನಾಲ್ ಇದೀಗ ನಾಗರ್ಜುನ ಅಕ್ಕಿನೇನಿ ಅಭಿನಯದ ದಿ ಘೋಸ್ಟ್ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
ದಿ ಘೋಸ್ಟ್ ಸಿನಿಮಾ ನಾಗಾರ್ಜುನ ಅವರ ಸಿನಿ ಕೆರಿಯರ್‌ನಲ್ಲೆ ಬಹಳ ವಿಭಿನ್ನ ಪ್ರಾಜೆಕ್ಟ್ ಎಂದು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ತಯರಾಗಲಿರುವ ಈ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ತುಂಬ ಸ್ಪೆಷಲ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ಚಿತ್ರದ ಸ್ಟಾರ್ ಕಾಸ್ಟ್ ಹುಡುಕಾಟದಲ್ಲಿ ನಿರತವಾಗಿದ್ದ ಚಿತ್ರತಂಡ ಮೊದಲಿಗೆ ನಾಯಕಿಯನ್ನು ಫೈನಲ್ ಮಾಡುವ ದಾವಂತದಲ್ಲಿತ್ತು. ಹೀಗಾಗಿ ದಿ ಘೋಸ್ಟ್ ಚಿತ್ರಕ್ಕೆ ನಟಿ ಕಾಜಲ್ ಅವರನ್ನು ಚಿತ್ರತಂಡ ಫೈನಲ್ ಮಾಡಿತ್ತು. ಆದರೇ ತದನಂತರದಲ್ಲಿ ಕಾಜಲ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಿದ್ದರಿಂದ ಅವರನ್ನು ಚಿತ್ರತಂಡ ಕೈ ಬಿಟ್ಟಿತ್ತು.





Click it and Unblock the Notifications











