ಸೆಟ್‌ಗೆ ಬಂದ ಸೋನು ಸೂದ್ ಅನ್ನು ಸನ್ಮಾನಿಸಿದ ಪ್ರಕಾಶ್ ರೈ ಮತ್ತು ತಂಡ
ಕೊರೊನಾ ಕಾಲದಲ್ಲಿ ಸಹಸ್ರಾರು ಮಂದಿಗೆ ಸಹಾಯ ಮಾಡಿ ನಿಜ ಜೀವನದ ಹೀರೋ ಎನಿಸಿಕೊಂಡ ಸೋನು ಸೂದ್, ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಚಿತ್ರೀಕರಣ ಸೆಟ್‌ನಲ್ಲಿ ಸೋನು ಸೂದ್ ಗೆ ಭವ್ಯ ಸ್ವಾಗತ ನೀಡಿದೆ ಚಿತ್ರತಂಡ.
ನಟ ಸೂನು ಸೂದ್, ತೆಲುಗು ಸಿನಿಮಾ ಒಂದರಲ್ಲಿ ತೊಡಗಿಸಿಕೊಂಡಿದ್ದು, ಅದರ ಚಿತ್ರೀಕರಣಕ್ಕೆ ಎಂದು ಸೆಟ್ ಬಂದಾಗ ಇಡೀಯ ಸೆಟ್‌ನ ಜನ ಒಟ್ಟಾಗಿ ಚಪ್ಪಾಳೆ ತಟ್ಟಿ ಸೋನು ಸೂದ್ ಅನ್ನು ಸ್ವಾಗತಿಸಿದ್ದಾರೆ.
ಸೆಟ್‌ನಲ್ಲಿದ್ದ ಸಹನಟ ಪ್ರಕಾಶ್ ರೈ ಅವರು, ಸೋನು ಸೂದ್‌ಗೆ ರೇಶ್ಮೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಸೋನು ಸೂದ್ ಅವರು ವಿನಯದಿಂದ ಕೈಮುಗಿದು ಚಿತ್ರತಂಡದ ಸನ್ಮಾನ ಸ್ವೀಕರಿಸಿದ್ದಾರೆ.

ಕಂದಿರಿಗ 2 ಚಿತ್ರೀಕರಣ ಸೆಟ್‌ನಲ್ಲಿ ಸನ್ಮಾನ
ಸಂತೋಶ್ ಶ್ರೀನಿವಾಸ್ ನಿರ್ದೇಶಿಸುತ್ತಿರುವ 'ಕಂದಿರಿಗ 2' ತೆಲುಗು ಸಿನಿಮಾದ ಚಿತ್ರೀಕರಣಕ್ಕೆಂದು ಸೋನು ಸೂದ್ ಆಗಮಿಸಿದ್ದಾಗ ಹೀಗೆ ಚಿತ್ರತಂಡವು ಪ್ರೀತಿ ಪೂರ್ವಕ ಗೌರವನ್ನು ಸೋನು ಸೂದ್ ಗೆ ತೋರಿಸಿದೆ.

ಸಿನಿಮಾದ ವಿಲನ್ ಪಾತ್ರದ ಬದಲಾವಣೆ!
ಲಾಕ್‌ಡೌನ್ ಗೆ ಮುನ್ನವೇ ಕಂದಿರೀಗ 2 ಸಿನಿಮಾಕ್ಕೆ ಸೋನು ಸೂದ್ ಅವರ ಆಯ್ಕೆ ಆಗಿತ್ತಂತೆ. ಆದರೆ ಕೊರೊನಾ ಸಮಯದಲ್ಲಿ ಸೋನು ಸೂದ್ ರ ಇಮೇಜ್ ಬದಲಾಗಿರುವ ಕಾರಣ, ಸಿನಿಮಾದಲ್ಲಿ ಸಹ ಸೋನು ಸೂದ್‌ರ ಪಾತ್ರವನ್ನು ಬದಲಾಯಿಸಲಾಗಿದೆಯಂತೆ.

ಕಂದಿರಿಗ 2 ವಿಲನ್ ಆಗಿದ್ದ ಸೂನು ಸೂದ್
ಕಂದಿರಿಗ 2 ಸಿನಿಮಾದ ಮುಖ್ಯ ವಿಲನ್ ಆಗಿದ್ದ ಸೋನು ಸೂದ್ ಗೆ ಭಿನ್ನ ಮಾದರಿಯ ಪಾತ್ರ ಈಗ ನೀಡಲಾಗಿದೆಯಂತೆ. ಅವರ ಸಂಭಾಷಣೆಯನ್ನು ಬದಲು ಮಾಡಲಾಗಿದೆಯಂತೆ. ಒಳ್ಳೆಯ ಶೇಡ್ ಇರುವ ಪಾತ್ರವನ್ನಾಗಿ ಅವರ ಪಾತ್ರವನ್ನು ಬದಲಾಯಿಸಲಾಗಿದೆ ಎನ್ನಲಾಗುತ್ತಿದೆ.
Recommended Video

ಕೊರೊನಾ ಲಾಕ್‌ಡೌನ್ ಸಮಯದ ಹೀರೋ ಸೋನು ಸೂದ್
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿ ಕಾರ್ಮಿಕರನ್ನು ತಮ್ಮ ಸ್ವ-ಊರುಗಳಿಗೆ ತಲುಪಲು ಸೋನು ಸೂದ್ ನೆರವಾದರು. ರೈಲು, ವಿಶೇಷ ಬಸ್ಸು, ವಿಮಾನಗಳಲ್ಲಿ ಕಾರ್ಮಿಕರನ್ನು ವಾಪಸ್ ಮನೆಗೆ ಕಳಿಸಿದ್ದರು ಸೋನು. ಅಷ್ಟೇ ಅಲ್ಲದೆ, ಉಚಿತ ಆಹಾರ, ದಿನಸಿ ವಿತರಣೆಯನ್ನು ಪ್ರತಿದಿನವೂ ಮಾಡಿದ್ದರು.


Click it and Unblock the Notifications











