ವಿಶ್ವದ ಬೆಸ್ಟ್ ವೆಜ್ ಬಿರಿಯಾನಿ ತಿನಿಸಿದ್ರಿ: KTR ಆತಿಥ್ಯಕ್ಕೆ ಸೋನು ಸೂದ್ ಫಿದಾ

"ವಿಶ್ವದ ಬೆಸ್ಟ್ ವೆಜ್ ಬಿರಿಯಾನಿ ತಿನಿಸಿದ್ರಿ" ಸೋನು ಸೂದ್ ಟ್ಟೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದಾ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಸೋನು ಸೂದ್ ಇತ್ತೀಚಿಗೆ ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮ ರಾವ್ ಜೊತೆ ನಡೆಸಿದ ಟ್ವಿಟ್ಟರ್ ಮಾತುಕತೆ ಎಲ್ಲರ ಗಮನ ಸೆಳೆಯುತ್ತಿದೆ.

ನಟ ಸೋನು ಸೂದ್ ಇತ್ತೀಚಿಗೆ ತೆಲಂಗಾಣಕ್ಕೆ ಭೇಟಿ ನೀಡಿದಾಗ ಸಚಿವ ಕೆಟಿ ರಾಮ ರಾವ್ ಅವರನ್ನು ಭೇಟಿಯಾಗಿದ್ದರು. ಟ್ವಿಟ್ಟರ್‌ನಲ್ಲಿ ಶುರುವಾದ ಇಬ್ಬರ ಮಾತುಕತೆ ಬಳಿಕ ಭೇಟಿಯಾಗಿ ವೆಜ್ ಬಿರಿಯಾನಿ ತಿನ್ನುವವರೆಗೂ ಮುಂದುವರೆದಿತ್ತು. ಇಬ್ಬರು ಭೇಟಿಗೆ ಕಾರಣವಾಗಿದ್ದು ಅಭಿಮಾನಿಯೊಬ್ಬ ಕಾಮೆಂಟ್. ಕೆಟಿಆರ್‌ಗೆ ಟ್ವಿಟ್ಟರ್‌ನಲ್ಲಿ "ಸರ್ ನೀವು ಸೂಪರ್ ಹೀರೋ ಎಂದು" ಎಂದು ಗುಣಗಾನ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಟಿಆರ್ "ಸೂಪರ್ ಹೀರೋ ನಾನಲ್ಲ, ಸೋನು ಸೂದ್" ಎಂದಿದ್ದರು. ಕೆಟಿಆರ್ ಟ್ವೀಟ್‌ಗೆ ಸೋನು ಸೂದ್ ಪ್ರತಿಕ್ರಿಯೆ ನೀಡಿ, ನಿಮ್ಮ ಒಳ್ಳೆಯ ಮಾತುಗಳಿಗೆ ಆಭಾರಿ ಎಂದಿದ್ದರು. ಮುಂದೆ ಓದಿ...

ಬಿರಿಯಾನಿ ತಿನ್ನೋಣ ಎಂದಿದ್ದ ಕೆಟಿಆರ್

ಬಿರಿಯಾನಿ ತಿನ್ನೋಣ ಎಂದಿದ್ದ ಕೆಟಿಆರ್

ಸನು ಸೂದ್ ಟ್ವೀಟ್‌ಗೆ ಪ್ರತಿಯಾಗಿ ಕೆಟಿಆರ್ "ತೆಲಂಗಾಣಕ್ಕೆ ಬಂದಾಗ ಭೇಟಿಯಾಗೋಣ, ಹೈದರಾಬಾದ್ ಬಿರಿಯಾನಿ ತಿನ್ನೋಣ" ಎಂದಿದ್ದರು. ಅದರಂತೆ ಸೋನು ಸೂದ್ ತೆಲಂಗಾಣಕ್ಕೆ ಭೇಟಿ ನೀಡಿದಾಗ ಕೆಟಿಆರ್ ಕಚೇರಿಗೆ ಹೋಗಿದ್ದಾರೆ. ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಕೆಟಿಆರ್, ರಿಯಲ್ ಹೀರೋಗೆ ವೆಬ್ ಬಿರಿಯಾನಿ ಊಟವನ್ನು ಉಣಬಡಿಸಿ, ಪ್ರೀತಿಯಿಂದ ಸತ್ಕರಿಸಿ ಕಳುಹಿಸಿದ್ದಾರೆ.

ಕೆಟಿಆರ್ ಆತಿಥ್ಯ ಹಾಡಿಹೊಗಳಿದ ಸೋನು ಸೂದ್

ಕೆಟಿಆರ್ ಆತಿಥ್ಯ ಹಾಡಿಹೊಗಳಿದ ಸೋನು ಸೂದ್

ಕೆಟಿಆರ್ ಆತಿಥ್ಯವನ್ನು ಸೋನು ಹಾಡಿಹೊಗಳಿದ್ದಾರೆ. ವೆಜ್ ಬಿರಿಯಾನಿಗೆ ಫಿದಾ ಆಗಿದ್ದಾರೆ. ಕೆಟಿಆರ್ ಭೇಟಿಯ ಫೋಟೋ ಶೇರ್ ಮಾಡಿ "ನಿಮ್ಮ ಆತಿಥ್ಯ ಹೇಳಲು ಪದಗಳೇ ಸಿಗುತ್ತಿಲ್ಲ" ಎಂದಿದ್ದಾರೆ. ಸೋನು ಸೂದ್ ಈ ಟ್ವೀಟ್‌ಗೆ ಪ್ರತಿಯಾಗಿ "ಭೇಟಿ ತುಂಬಾ ಖುಷಿಯಾಯಿತು ಸಹೋದರ" ಎಂದು ಕೆಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವದ ಬೆಸ್ಟ್ ವೆಜ್ ಬಿರಿಯಾನಿ ಎಂದ ಸೋನು

ವಿಶ್ವದ ಬೆಸ್ಟ್ ವೆಜ್ ಬಿರಿಯಾನಿ ಎಂದ ಸೋನು

ಮತ್ತೆ ಇದಕ್ಕೆ ಪ್ರತಿಯಾಗಿ ಸೋನು ಸೂದ್, "ವಿಶ್ವದ ಬೆಸ್ಟ್ ವೆಜ್ ಬಿರಿಯಾನಿ ಉಣಬಡಿಸಿದ್ದಕ್ಕೆ ಧನ್ಯವಾದಗಳು ಸಹೋದರ. ನಾನು ಈಗ ಅಧಿಕೃತವಾಗಿ ಹೇಳುತ್ತೇನೆ ಆತಿಥ್ಯ ನೀಡುವಲ್ಲಿ ನೀವು ತೆಲಂಗಾಣಕ್ಕೆ ಬೆಸ್ಟ್" ಎಂದು ಹೊಗಳಿದ್ದಾರೆ.

Recommended Video

ಡ್ಯಾನ್ಸರ್ ಗಳಿಗೆ ಫುಡ್ ಕಿಟ್ ಕೊಟ್ಟು ಮೆಚ್ಚುಗೆ ಪಡೆದ Nikhil Kumaraswamy | Oneindia Kannada
ಟ್ವಿಟ್ಟರ್ ಮಾತುಕತೆ ವೈರಲ್

ಟ್ವಿಟ್ಟರ್ ಮಾತುಕತೆ ವೈರಲ್

ಇಬ್ಬರ ಟ್ವಿಟ್ಟರ್ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದೆ. ತೆಲಂಗಾಣದ ಬೆಸ್ಟ್ ವೆಜ್ ಬಿರಿಯಾನಿ ಹೊಗಳಿದ ಸೋನು ಸೂದ್‌ಗೆ ತೆಲುಗು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಟ್ವೀಟ್ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

More from Filmibeat

English summary
Actor Sonu Sood Thanks Telangana Minister K Taraka Rama for treating him with the world's best veg biryani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X