twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್‌ ಹಣದ ಅತಿಯಾಸೆಯುಳ್ಳ ವ್ಯಕ್ತಿಯಾಗಿದ್ದರು: ನಿರ್ಮಾಪಕ ತಮ್ಮಾರೆಡ್ಡಿ

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡಿರುವ ಸಹಾಯ ಅವರನ್ನು ನಿಜ ಜೀವನದ ಹೀರೋ ಅನ್ನಾಗಿ ಮಾಡಿದೆ. ಸೋನು ಸೂದ್‌ಗೆ ಗುಡಿ ಕಟ್ಟಿ ಪೂಜಿಸಲಾಗುತ್ತಿದೆ.

    ಸೋನು ಸೂದ್ ತಮ್ಮ ಸ್ವಂತ ಹಣದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಈಗಲೂ ತಮ್ಮ ಸಹಾಯವನ್ನು ಮುಂದುವರೆಸಿದ್ದಾರೆ. ಆದರೆ ತೆಲುಗಿನ ನಿರ್ಮಾಪಕರೊಬ್ಬರು ಸೋನು ಸೂದ್ ವಿರುದ್ಧ ಋಣಾತ್ಮಕ ಹೇಳಿಕೆ ನೀಡಿದ್ದಾರೆ.

    ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತಮ್ಮಾರೆಡ್ಡಿ ಭಾರಧ್ವಜ ಎಂಬುವರು, 'ಕೆಲವು ವರ್ಷಗಳ ಹಿಂದೆ ಸೋನು ಸೂದ್‌ ಹಣದ ಆಸೆಯುಳ್ಳ ವ್ಯಕ್ತಿಯಾಗಿದ್ದರು' ಎಂದಿದ್ದಾರೆ. ತಮ್ಮ ಹೇಳಿಕೆಗೆ ಪೂರಕವಾಗಿ ಘಟನೆಯೊಂದನ್ನು ಉದಾಹರಣೆಯಾಗಿಯೂ ನೀಡಿದ್ದಾರೆ.

    'ಹಣ ಕೊಟ್ಟರೆ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದರು ಸೋನು ಸೋದ್'

    'ಹಣ ಕೊಟ್ಟರೆ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದರು ಸೋನು ಸೋದ್'

    ಕೆಲವು ವರ್ಷಗಳ ಹಿಂದೆ ಅಂಗವಿಕಲರಿಗಾಗಿ ನಾನು ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದೆ. ಆ ಕಾರ್ಯಕ್ರಮಕ್ಕೆ ಸೋನು ಸೂದ್ ಅತಿಥಿಯಾಗಿ ಬರಬೇಕೆಂಬ ಆಸೆಯಿಂದ ಅವರನ್ನು ಆಹ್ವಾನಿಸಿದೆ. ಆದರೆ 'ಹಣ ಕೊಟ್ಟರಷ್ಟೆ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ' ಎಂದಿದ್ದರು ಸೋನು ಸೂದ್. ಈತನೊಬ್ಬ ಮನಿ ಮೈಂಡೆಂಡ್ ಮನುಷ್ಯ ಎಂದು ತಿಳಿದುಕೊಂಡೆ' ಎಂದಿದ್ದಾರೆ ತಮ್ಮಾರೆಡ್ಡಿ.

    ಆದರೆ ಈಗ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ: ತಮ್ಮಾರೆಡ್ಡಿ

    ಆದರೆ ಈಗ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ: ತಮ್ಮಾರೆಡ್ಡಿ

    ಆದರೆ ಈಗ ಸೋನು ಸೂದ್ ಮಾಡುತ್ತಿರುವ ಸಮಾಜ ಸೇವೆ ನೋಡಿ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ ಎಂದಿರುವ ತಮ್ಮಾರೆಡ್ಡಿ, 'ತಮ್ಮ ಆಸ್ತಿಯನ್ನು ಗಿರವಿ ಇಟ್ಟು ಹಣ ಪಡೆದು ಅದರಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಸೋನು ಸೂದ್. ಹಲವರಿಗೆ ಸೋನು ಸೂದ್ ದೇವರೇ ಆಗಿದ್ದಾರೆ' ಎಂದಿದ್ದಾರೆ ತಮ್ಮಾರೆಡ್ಡಿ.

    ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್

    ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್

    ಸೋನು ಸೂದ್ ಹಲವಾರು ತೆಲುಗು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಲೂ ನಟಿಸುತ್ತಿದ್ದಾರೆ. ಹಿಂದಿ ಭಾಷೆಗಿಂತಲೂ ಹೆಚ್ಚಿನ ತೆಲುಗು, ತಮಿಳು ಸಿನಿಮಾಗಳಲ್ಲಿ ಸೋನು ಸೂದ್ ನಟಿಸಿರುವುದು ವಿಶೇಷ. ಹಿಂದಿಯಲ್ಲಿ ನಟಿಸುವುದಕ್ಕಿಂತಲೂ ಮುಂಚೆಯೇ ತಮಿಳು, ತೆಲುಗು ಸಿನಿಮಾಗಳಲ್ಲಿ ಸೋನು ಸೂದ್ ನಟಿಸಿದ್ದರು.

    Recommended Video

    ಸಿನಿ ಪಯಣದಲ್ಲಿ ಹೆಸರು ಮಾಡಿ ರಾಜಕೀಯ ಮಾಡಲು ಬಂದ ಸಿನಿತಾರೆಯರು | Filmibeat Kannada
    ಕೊರೊನಾ ಸಂಕಷ್ಟದಲ್ಲಿ ಸೋನು ಸೂದ್ ಸೇವೆ

    ಕೊರೊನಾ ಸಂಕಷ್ಟದಲ್ಲಿ ಸೋನು ಸೂದ್ ಸೇವೆ

    ಕೊರೊನಾ ಸಂಕಷ್ಟದ ಸಮಯದಲ್ಲಿ ಸೋನು ಸೂದ್ ಬಹಳ ದೊಡ್ಡ ನೆರವಿನ ಹಸ್ತ ಚಾಚಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ಸಾವಿರಾರು ಮಂದಿ ಕಾರ್ಮಿಕರನ್ನು ಸ್ವಸ್ಥಳಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದ ಸೋನು ಸೂದ್, ಈ ವರ್ಷ ಬೆಡ್ ವ್ಯವಸ್ಥೆ, ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ಆಮ್ಲಜನಕ ವ್ಯವಸ್ಥೆ ಮಾಡುತ್ತಿದ್ದಾರೆ.

    English summary
    Telugu producer Tammareddy Bharadwaja said Sonu Sood was a money minded fellow few years back.
    Tuesday, June 1, 2021, 21:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X