''ಜ್ಯೋತಿ ರೈ'' ಅವರಿಂದ ''ದರ್ಶನ್'' ಚೂರು ಪಾರು ಕಲಿತಿದ್ದರೆ ಸಾಕಿತ್ತು, ಈ ದಿನ ಬರುತ್ತಿರಲಿಲ್ಲ..!

ಸಾಮಾಜಿಕ ಜಾಲತಾಣ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇನ್ನು ಈ ವೇದಿಕೆಯ ಮೂಲಕವೇ ಚಿತ್ರರಂಗದ ಅನೇಕರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವುದು ಅಲ್ಲದೇ ತಮ್ಮ ಅಭಿಮಾನಿಗಳ ಜೊತೆ ನಿತ್ಯ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಈಗೀಗ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಅನೇಕರು ಮಹಿಳೆಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ದರ್ಶನ್ ಪ್ರಕರಣ ಕಣ್ಮುಂದೆಯೇ ಇದೆ. ಹೀಗಿರುವಾಗ ಸೋಶಿಯಲ್ ಮೀಡಿಯಾ ಸ್ಟಾರ್ ಜ್ಯೋತಿ ರೈ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕೆಂಡವನ್ನೂ ಕಾರಿದ್ದಾರೆ.

South actress Jyothi Rai has blocked over 1 000 Instagram IDs due to abusive language

ಹೌದು, 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದು, ಸದ್ಯ ಆಂಧ್ರದಲ್ಲಿ ಪುರಸೊತ್ತಿಲ್ಲದ ಬದುಕಿನಲ್ಲಿ ಕಳೆದು ಹೋಗಿರುವ ಜ್ಯೋತಿ ರೈ ಸದ್ಯಕ್ಕೆ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ತೀರಾ ಅಶ್ಲೀಲವಾಗಿ ಸಂದೇಶ ಕಳಿಸುತ್ತಿದ್ದ 1000ಕ್ಕೂ ಹೆಚ್ಚಿನ ಅಕೌಂಟ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದಾರೆ.

ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜ್ಯೋತಿ ರೈ, ತುಂಬಾನೇ ಕೆಟ್ಟದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಒಂದು ಸಾವಿರಕ್ಕೂ ಅಧಿಕ ವ್ಯೆಯಕ್ತಿಕ ಖಾತೆಗಳನ್ನೂ ನಾನು ನನ್ನ ಇನ್ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದ್ದೇನೆ ಎಂದಿದ್ದಾರೆ.ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಜೊತೆ ಚರ್ಚೆ ಮಾಡುವುದು ನನಗೆ ಇಷ್ಟ ಇಲ್ಲ ಎಂದಿರುವ ಜ್ಯೋತಿ ರೈ ನೀವು ನಿಮ್ಮ ಸುತ್ತ ಮುತ್ತ ಒಳ್ಳೇಯ ಪರಿಸರ ವಾತಾವರಣ ಹೊಂದಬೇಕು ಎಂದು ಬಯಸಿದ್ದೇ ಆದಲ್ಲಿ ಈ ತಂತ್ರವನ್ನು ಅನುಸರಿಸಿ ಎಂದಿದ್ದಾರೆ. ಯಾರು ನನ್ನ ಹೊಸದಾಗಿ ಹಿಂಬಾಲಿಸುತ್ತಿದ್ದೀರಾ ಅವರಿಗೆ ಸ್ವಾಗತ ಎಂದಿದ್ದಾರೆ

South actress Jyothi Rai has blocked over 1 000 Instagram IDs due to abusive language

ಇನ್ನೂ ದರ್ಶನ್ ಜೈಲು ಪಾಲಾಗಿದ್ದು ಇದೇ ತರಹದ ಅಶ್ಲೀಲ ಸಂದೇಶದಿಂದ ಅನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಹೀಗಾಗಿಯೇ ಜ್ಯೋತಿ ರೈ ತಾವು 1000ಕ್ಕೂ ಅಧಿಕ ಜನರಿಗೆ ತಮ್ಮ ಪೇಜ್‌ನಿಂದ ಗೇಟ್ ಪಾಸ್‌ ನೀಡಿದ್ದಾಗಿ ಹೇಳಿದ ಬೆನ್ನಲ್ಲಿಯೇ ಅನೇಕರು ದರ್ಶನ್ ಅವರು ಕೂಡ ಇದೇ ರೀತಿ ರೇಣುಕಾಸ್ವಾಮಿಯನ್ನೂ ಬ್ಲಾಕ್ ಮಾಡಿದ್ದರೆ ಈ ಪ್ರಮೇಯ ಬರುತ್ತಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಬ್ಲಾಕ್ ಮಾಡಿದ ನಂತರವೂ ಬೇರೆ ಬೇರೆ ಅಕೌಂಟ್ ಸೃಷ್ಟಿಸಿ, ಪವಿತ್ರಾ ಗೌಡ ಅವರನ್ನು ರೇಣುಕಾ ಸ್ವಾಮಿ ಕಾಡಿದ್ದೇ ಆದಲ್ಲಿ ಪೊಲೀಸರ ಸಹಾಯವನ್ನೂ ದರ್ಶನ್ ಪಡೆಯಬಹುದಿತ್ತು ಎನ್ನುತ್ತಿದ್ದಾರೆ. ಮತ್ತೂ ಕೆಲವರು ಇನ್ಸ್‌ಟಾಗ್ರಾಮ್‌ನಲ್ಲಿ ಈ ತರಹದ ಬ್ಲಾಕ್ ಫೀಚರ್ ಎಂಬ ಆಯ್ಕೆ ಇದೆ ಅನ್ನುವ ವಿಚಾರ ದರ್ಶನ್ ಅವರಿಗಾಗಲಿ ಅಥವಾ ಪವಿತ್ರಾ ಗೌಡ ಅವರಿಗಾಗಲಿ ಗೊತ್ತಿದೆಯಾ ಅನ್ನುವ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆಯ ಕುರಿತು ಜ್ಯೋತಿ ರೈ ಅವರಿಂದ ಚೂರು ಪಾರು ದರ್ಶನ್ ಮತ್ತು ಪವಿತ್ರಾ ಗೌಡ ಕಲಿತಿದ್ದರೆ ಇವತ್ತು ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಇರುತ್ತಿರಲಿಲ್ಲ ಎನ್ನುವ ಮಾತನ್ನೂ ಹೇಳುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಪ್ರಕರಣವನ್ನು ಗಮನದಲ್ಲಿಟ್ಕೊಂಡೇ ಜ್ಯೋತಿ ರೈ ಈ ಫೋಸ್ಟ್ ಹಂಚಿಕೊಂಡರಾ ಅನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X