''ಇನ್ಮೇಲೆ ನನಗೆ ಕಾಮೆಂಟ್ ಮಾಡಬೇಡಿ,ನೇರವಾಗಿ ನನ್ನ ಇನ್‌ ಬಾಕ್ಸ್‌ಗೆ ಮೆಸೇಜ್ ಮಾಡಿ''- ಜ್ಯೋತಿ ರೈ...!

'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದವರು ಜ್ಯೋತಿ ರೈ. ಆದರೆ, ಆ ನಂತರ ಅದೇನಾಯ್ತೋ, ಕನ್ನಡದ ಕಿರುತೆರೆ ಲೋಕವನ್ನು ಎಡಗಾಲಿನಲ್ಲಿ ಒದ್ದು ಆಂಧ್ರ ಪ್ರದೇಶಕ್ಕೆ ತೆರಳಿ ಮತ್ತೊಂದು ಮದುವೆಯಾಗಿ ಅಲ್ಲಿಯೇ ಜ್ಯೋತಿ ರೈ ಠಿಕಾಣಿಯನ್ನು ಹೂಡಿದರು.

ಇಂಥಾ ಜ್ಯೋತಿ ರೈ ಒಂದು ಹದಿನೈದು ದಿನದ ಹಿಂದೆ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು. ತೀರಾ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದ 1000ಕ್ಕೂ ಅಧಿಕ ಹೆಚ್ಚಿನ ಅಕೌಂಟ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದರು. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವುದು ನನಗೆ ಇಷ್ಟ ಇಲ್ಲ ಎಂದಿದ್ದ ಜ್ಯೋತಿ ರೈ ನೀವು ನಿಮ್ಮ ಸುತ್ತ ಮುತ್ತ ಒಳ್ಳೇಯ ಪರಿಸರ ವಾತಾವರಣ ಹೊಂದಬೇಕು ಎಂದು ಬಯಸಿದ್ದೇ ಆದಲ್ಲಿ ಈ ತಂತ್ರವನ್ನು ಅನುಸರಿಸಿ ಎಂದಿದ್ದಾರೆ. ಯಾರು ನನ್ನ ಹೊಸದಾಗಿ ಹಿಂಬಾಲಿಸುತ್ತಿದ್ದೀರಾ ಅವರಿಗೆ ಸ್ವಾಗತ ಎಂದಿದ್ದರು.

South actress Jyothi Rai has disabled Instagram comments and is requesting direct messages

ಆದರೆ ಈಗ 1000ಕ್ಕೂ ಅಧಿಕ ಜನರ ಖಾತೆಗಳನ್ನು ಬ್ಲಾಕ್ ಮಾಡಿದ ನಂತರವೂ, ನಿತ್ಯ ನಿರಂತರವಾಗಿ ನಡೆಯುವ ಸೈಬರ್ ದಾಳಿಯಿಂದ ಜ್ಯೋತಿ ರೈ ಬೇಸತ್ತಂತೆ ಇದೆ. ಹೀಗಾಗಿಯೇ ಏನೋ ಹೊಸ ಫೋಟೋವನ್ನು ಹಂಚಿಕೊಂಡಿರುವ ಜ್ಯೋತಿ ರೈ ಇನ್ನ ಮೇಲಿಂದ ಕಾಮೆಂಟ್ ಸೆಕ್ಷನ್ ಆಫ್ ಮಾಡುವ ನಿರ್ಧಾರಕ್ಕೆ ತಾವು ಬಂದಿರುವುದಾಗಿ ಹೇಳಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಇನ್ಮುಂದೆ ನೇರವಾಗಿ ಇನ್ ಬಾಕ್ಸ್‌ನಲ್ಲಿ ಮೆಸೇಜ್ ಮಾಡುವ ಮೂಲಕ ಹೇಳಿ ಎಂದಿದ್ದಾರೆ.

ಇನ್ನೂ ಜ್ಯೋತಿ ರೈ ಅವರ ಈ ನಿರ್ಧಾರದ ಹಿಂದೆ ಇರುವ ನಿಜವಾದ ಕಾರಣ ಅವರಿಗೆ ಗೊತ್ತಾದರೂ, ಕಾಮಾಂಧರು ಇನ್ಮುಂದೆ ಇನ್ನೂ ಧೈರ್ಯವಾಗಿ ಜ್ಯೋತಿ ರೈ ಅವರಿಗೆ ಕೆಟ್ಟಾ ಕೊಳಕಾಗಿ ಮೆಸೇಜ್‌ಗಳನ್ನು ಕಳುಹಿಸುವ ಸಾಧ್ಯತೆ ಇದೆ. ಯಾಕೆಂದರೆ, ಖುದ್ದು ಜ್ಯೋತಿ ರೈ ಅವರೇ ನನಗೆ ಅಶ್ಲೀಲ ಮೆಸೇಜ್‌ಗಳು ಬರುತ್ತವೆ ಅಂದಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಅನೇಕರು ಮಹಿಳೆಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ದರ್ಶನ್ ಪ್ರಕರಣ ಕಣ್ಮುಂದೆಯೇ ಇದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳುಹಿಸಿರುವುದು ದೃಡಪಟ್ಟಿದೆ. ಪೊಲೀಸರ ಮನವಿಯ ಮೇರೆಗೆ ಇನ್‌ಸ್ಟಾಗ್ರಾಮ್‌ ಖಚಿತ ಪಡಿಸಿದೆ. ಇಷ್ಟೆಲ್ಲ ಆಗಿದ್ದರೂ, ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಅರಿವು ಇದ್ದರು ಕೂಡ ಜ್ಯೋತಿ ರೈ ಕಾಮೆಂಟ್ ಬೇಡ ನೇರವಾಗಿಯೇ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಿ ಎಂದಿದ್ದಾರೆ. ಇದು ಅನೇಕರಿಗೆ ಈಗ ಅಚ್ಚರಿಯನ್ನುಂಟು ಮಾಡಿದೆ. ಜ್ಯೋತಿ ರೈ ಅವರಿಗೆ ಕಾಮುಕರ ಕಾಟ ಇನ್ಮುಂದೆ ಹಚ್ಚಾಗಲಿದೆಯಾ ಎಂಬ ಅನುಮಾನ ಈಗ ಹೈದ್ರಾಬಾದ್‌ನಲ್ಲಿ ಅನೇಕರನ್ನು ಕಾಡುತ್ತಿದೆ.

More from Filmibeat

English summary
After blocking more than 1,000 individual accounts on Instagram, South actress Jyothi Rai has turned off her comment section and is asking people to send her messages via direct inbox Instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X