ಮದುವೆ ಆಲೋಚನೆ ಬಿಟ್ಟು ವೈಲ್ಡ್ ಲೈಫ್ ಫೋಟೊಗ್ರಫರ್ ಆಗಿಬಿಟ್ರು ಖ್ಯಾತ ನಟಿ

ಅದ್ಯಾಕೋ ಬರ್ತಾ ಬರ್ತಾ ಯುವ ಜನತೆ ಮದುವೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಮದುವೆ ಆಗದೆಯೇ ಒಬ್ಬೊಂಟಿಯಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ. ಚಿತ್ರರಂಗದಲ್ಲಿ ಕೂಡ ಕೆಲವರು ಇದೇ ಹಾದಿಯಲ್ಲಿದ್ದಾರೆ. ಸಲ್ಮಾನ್ ಖಾನ್, ತಬು, ಪ್ರಭಾಸ್, ಅನುಷ್ಕಾ ಶೆಟ್ಟಿ ಸೇರಿದಂತೆ ಹಲವರು ಮದುವೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಮದುವೆ ವಯಸ್ಸು ಮೀರಿದರೂ ಯಾಕೋ ಒಬ್ಬೊಂಟಿಯಾಗಿ ಇರುವುದೇ ಚೆಂದ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಹಾಗಂತ ಮದುವೆ ಬಗ್ಗೆ ನಂಬಿಕೆ ಇಲ್ಲ ಅಂತಲ್ಲ. ನೋಡೋಣ, ಒಂಟಿಯಾಗಿಯೇ ಜೀವನ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಮದುವೆ ಆಗುವ ಸಮಯ ಬಂದರೆ ಆಗೋಣ ಎನ್ನುತ್ತಿದ್ದಾರೆ. ಬಹುಭಾಷಾ ನಟಿ ಸದಾ ಕೂಡ ಇದೇ ರೀತಿ ಹೇಳುತ್ತಾ ಬರ್ತಿದ್ದಾರೆ.

South famous film actress become wildlife photographer

ಒಂದ್ಕಾಲದಲ್ಲಿ ನಟಿ ಸದಾಗೆ ಸೌತ್ ಸಿನಿದುನಿಯಾದಲ್ಲಿ ಭಾರೀ ಕ್ರೇಜ್ ಇತ್ತು. ತೆಲುಗು, ತಮಿಳಿನ ಹಿಟ್ ಸಿನಿಮಾಗಳಲ್ಲಿ ಆಕೆ ನಟಿಸಿ ಗೆದ್ದರು. ಕನ್ನಡದ ಒಂದೆರಡು ಚಿತ್ರಕ್ಕೂ ಬಣ್ಣ ಹಚ್ಚಿದ್ದರು. ಆಕೆಯ ವಯಸ್ಸು 40. ಆದರೆ ಮದುವೆ ಆಗುವ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎನ್ನುತ್ತಿದ್ದಾರೆ. ಕೆಲ ವರ್ಷಗಳಿಂದ ನಾಯಕಿಯಾಗಿ ಬಹಳ ಬ್ಯುಸಿಯಾಗಿದ್ದರು. ಇತ್ತೀಚೆಗೆ ಅವಕಾಶಗಳು ಕಮ್ಮಿ ಆಗಿದೆ. ಕೆಲ ದಿನಗಳ ಕಾಲ ಕಿರುತೆರೆ ಡ್ಯಾನ್ಸ್, ಕಾಮಿಡಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಮಿಂಚಿದ್ದರು.

ಸದಾ ಇತ್ತೀಚೆಗೆ ವೈಲ್ಡ್ ಲೈಫ್ ಫೋಟೊಗ್ರಫಿ ಬಗ್ಗೆ ಹೆಚ್ಚಿನ ಒಲವು ರೂಢಿಸಿಕೊಂಡಿದ್ದಾರೆ. ಕ್ಯಾಮರಾಗಳನ್ನು ಹೊತ್ತು ಕಾಡು ಮೇಡು ಅಲೆದಾಡುತ್ತಿದ್ದಾರೆ. ವನ್ಯಜೀವಿಗಳ ಸೊಗಸಾದ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ವೈಲ್ಡ್ ಲೈಫ್ ಫೋಟೊಗ್ರಫಿಯನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪೇಜ್ ಕ್ರಿಯೇಟ್ ಮಾಡಿ ಅದರಲ್ಲಿ ತಾವು ಕ್ಲಿಕ್ಕಿಸಿದ ಫೋಟೊಗಳನ್ನು ಪೋಸ್ಟ್ ಮಾಡುತ್ತಾ ಬರುತ್ತಿದ್ದಾರೆ.

ಆಕೆ ಪ್ರಾಣಿ ಹಕ್ಕುಗಳ ಬೆಂಬಲಿಗರಾಗಿದ್ದು, ಪ್ರಾಣಿ ಸಂರಕ್ಷಕರು ಹಾಗೂ ಸಸ್ಯಾಹಾರಿ ಆಗಿದ್ದಾರೆ. ಅವರು ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಶನ್ಸ್ (FIAPO) ಅನ್ನು ಬೆಂಬಲಿಸುವುದರ ಜೊತೆಗೆ ಸಸ್ಯಾಹಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇನ್ನು ಸದಾ ವೈಲ್ಡ್ ಲೈಫ್ ಫೋಟೊಗ್ರಫಿ ನೋಡಿ ಅಭಿಮಾನಿಗಳು ನಿಮ್ಮ ಪ್ಯಾಷನ್ ಸೂಪರ್ ಮೇಡಂ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮತ್ತೆ ತೆರೆಮೇಲೆ ಬರೋದು ಯಾವಾಗ? ಮದುವೆ ಯಾವಾಗ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಹುಲಿ, ಆನೆ, ಗೂಬೆ, ಗಿಳಿ, ಚಿರತೆ ಹೀಗೆ ಹತ್ತು ಹಲವು ಕಾಡು ಪ್ರಾಣಿಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ನಟಿ ಸದಾ ಸೆರೆಹಿಡಿದಿದ್ದಾರೆ. ಆಕೆಯ ಪೋಸ್ಟ್‌ಗಳಿಗೆ ಸಾವಿರಾರು ಲೈಕ್ಸ್ ಸಿಗುತ್ತಿದೆ. ಕಳೆದ ವರ್ಷ ತೆಲುಗಿನ 'ಅಹಿಂಸಾ' ಹಾಗೂ 'ಆದಿಕೇಶವ' ಸಿನಿಮಾಗಳಲ್ಲಿ ಸದಾ ಬಣ್ಣ ಹಚ್ಚಿದ್ದರು. ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸದಾಫ್ ಮೊಹಮ್ಮದ್ ಸೈಯದ್ ಜನಿಸಿದರು. ಸದಾ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು.

ತೆಲುಗಿನ 'ಜಯಂ' ಚಿತ್ರದಲ್ಲಿ ಸದಾ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ 'ಅನ್ನಿಯನ್' ಸೇರಿದಂತೆ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಆಕೆ ಮಿಂಚಿದರು. ಕನ್ನಡದ 'ಮೊನಾಲಿಸಾ' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ 'ಮೋಹಿನಿ 9886788888', 'ಹುಡುಗ ಹುಡುಗಿ', 'ಮೈಲಾರಿ', 'ಮಲ್ಲಿಕಾರ್ಜುನ' ಹಾಗೂ 'ಆರಕ್ಷಕ' ಸಿನಿಮಾಗಳಲ್ಲಿ ಸದಾ ಮಿಂಚಿದರು.

More from Filmibeat

English summary
This Star south actress turned as wildlife photographer
Read more about: sadha telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X