ನಾಯಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ನಟಿ ಸಮಂತಾ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ನಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಸುದ್ದಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಪತಿ ನಾಗ್ ಚೈತನ್ಯ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದ ಸಮಂತಾ ಈಗ ನಾಯಿಯ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.
ಸಮಂತಾ ನಾಯಿ ಹ್ಯಾಶ್ ಗೆ ಒಂದು ವರ್ಷ ತುಂಬಿದೆಯಂತೆ. ವರ್ಷದ ಸಂತಸವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಇನ್ನು ಹ್ಯಾಶ್ ಹುಟ್ಟುಹಬ್ಬಕ್ಕೆ ಸಮಂತಾ ಸ್ನೇಹಿತರ ಜೊತೆಗೆ ಹ್ಯಾಶ್ ಸ್ನೇಹಿತರು ಕೂಡ ಭಾಗಿಯಾಗಿದ್ದರು. ನಾಯಿಗೆ ಅಲಂಕಾರ ಮಾಡಿ ದೊಡ್ಡದಾದ ಕೇಕ್ ಕತ್ತರಿಸಿ ಎಲ್ಲರು ಸಂಭ್ರಮಿಸಿದ್ದಾರೆ.

ಸಮಂತಾ ಸ್ನೇಹಿತರೆಲ್ಲ ತನ್ನ ಮನೆಯಲ್ಲಿದ್ದ ನಾಯಿಗಳನ್ನು ಕರೆದುಕೊಂಡು ಬಂದಿದ್ದರು. ಎಲ್ಲರೂ ತಮ್ಮತಮ್ಮ ನಾಯಿಗಳ ಜೊತೆ ಕುಳಿತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ನಾಯಿಯ ಹುಟ್ಟುಹಬ್ಬದ ಜೊತೆಗೆ ಸಮಂತಾ ಭಾವುಕ ಪತ್ರವನ್ನು ಬರೆದಿದ್ದಾರೆ. ಕಳೆದ ವರ್ಷ ಸಮಂತಾ ಮನೆಯ ಮುದ್ದು ನಾಯಿ ಸತ್ತೋಗಿತ್ತಂತೆ. ಇದರಿಂದ ಸಮಂತಾ ಸಖತ್ ಕಣ್ಣೀರಾಗಿದ್ದರಂತೆ. ಆ ನಂತರ ಪತಿ ನಾಗ್ ಚೈತನ್ಯ ಹ್ಯಾಶ್ ಅನ್ನು ಮನೆಗೆ ಕರೆದುಕೊಂಡು ಬಂದಿದ್ದಾರಂತೆ. ಮುದ್ದು ನಾಯಿ ಸತ್ತೋದ ದುಃಖವನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ.
ಸಮಂತಾ ನಾಯಿ ಹುಟ್ಟುಹಬ್ಬವನ್ನು ಆಚರಿಸಿದ ಪರಿ ನೋಡಿ ಅನೇಕರು ಸಮಂತಾ ಕಾಳೆಯುತ್ತಿದ್ದಾರೆ. ನಾಯಿಗೂ ಇಷ್ಟು ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸುತ್ತಾರಾ ಎಂದು ಅಚ್ಚರಿ ಪಡುತ್ತಿದ್ದಾರೆ. ನಟ ನಾಗ ಚೈತನ್ಯ ಮದುವೆ ಆದಮೇಲೆ ಸಮಂತಾ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿವೆ. ಸದ್ಯ ಸಮಂತಾ '96' ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಒಂದು ಸಿನಿಮಾ ಬಿಟ್ಟರೆ ಸಮಂತಾ ಬಳಿ ಯಾವ ಸಿನಿಮಾಗಳು ಇಲ್ಲ.


Click it and Unblock the Notifications











