ಪ್ರಭಾಸ್ ಮುಂದಿನ ಚಿತ್ರದಲ್ಲಿ ವಿಲನ್ ಆಗಿ ಕೊರಿಯನ್ ನಟ ಮಾ ಡಾಂಗ್ ಸಿಯೋಕ್?
'ಸಲಾರ್' ಹಾಗೂ 'ಕಲ್ಕಿ 2898 AD' ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ 'ಕಲ್ಕಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರಭಾಸ್ ಕ್ರೇಜ್ ಏನು ಎನ್ನುವುದು ಸಾಬೀತಾಗಿದೆ. ಈಗಾಗಲೇ ಸಿನಿಮಾ 900 ಕೋಟಿ ರೂ. ಗಳಿಕ ಕಂಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ಪ್ರಭಾಸ್ ಮುಂದಿನ ಸಿನಿಮಾಗಳ ಬಗ್ಗೆಯೂ ಭಾರೀ ಕುತೂಹಲ ಮೂಡಿದೆ. 'ದಿ ರಾಜಾಸಾಬ್' ಎನ್ನುವ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಆಗಸ್ಟ್ 10ರಿಂದ 'ಸಲಾರ್-2' ಶೂಟಿಂಗ್ ಎನ್ನಲಾಗ್ತಿದೆ. ಇನ್ನು ಹನು ರಾಘವ ಪುಡಿ ನಿರ್ದೇಶನದ ಚಿತ್ರಕ್ಕೂ ಡಾರ್ಲಿಂಗ್ ಸೈ ಎಂದಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಅತಿ ಸಂಭಾವನೆ ಪಡೆಯುವ ನಟ ಪ್ರಭಾಸ್ ಎನಿಸಿಕೊಂಡಿದ್ದಾರೆ. ಯಂಗ್ ರೆಬಲ್ ಸ್ಟಾರ್ ನಂಬಿ ಎಷ್ಟೇ ಬಂಡವಾಳ ಹಾಕಿದರೂ ಮರಳಿ ಪಡೆಯಬಹುದು ಎನ್ನುವ ಲೆಕ್ಕಾಚಾರ ಕೆಲವರದ್ದು. ಇದೇ ಕಾರಣಕ್ಕೆ ಕೇಳಿದಷ್ಟು ಸಂಭಾವನೆ ಕೊಡಲು ಸಿದ್ಧರಾಗಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.
'ಸಾಹೋ', 'ರಾಧೆಶ್ಯಾಮ್' ಹಾಗೂ 'ಆದಿಪುರುಷ್' ಸೋಲಿನ ಬಳಿಕ 'ಸಲಾರ್' ಸಿನಿಮಾ ಗೆದ್ದಿತ್ತು. ಇದೀಗ 'ಕಲ್ಕಿ 2898 AD' ಸರದಿ. ಇನ್ನು ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಳೆದ ವರ್ಷ 'ಅನಿಮಲ್' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಬಾಲಿವುಡ್ ಅಂಗಳದಲ್ಲಿ ಈ ಸಿನಿಮಾ ದಾಖಲೆ ಬರೆದಿತ್ತು. ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು.

ಸಂದೀಪ್ ಮುಂದೆ 'ಸ್ಪಿರಿಟ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಭಾಸ್‌ನ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕೃತವಾಗಿ ಸಿನಿಮಾ ಶುರುವಾಗಿಲ್ಲ. ಆದರೆ ಚಿತ್ರದ ವಿಲನ್ ಪಾತ್ರಕ್ಕೆ ಕೊರಿಯನ್ ನಟ ಮಾ ಡಾಂಗ್ ಸಿಯೋಕ್(ಡಾನ್ ಲೀ) ಹೆಸರು ಕೇಳಿಬರ್ತಿದೆ. ಇದೇ ನಿಜವಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಮಾ ಡಾಂಗ್ ನಟನೆಯ 'ದಿ ಔಟ್‌ಲಾಸ್', 'ದಿ ಗ್ಯಾಂಗ್‌ಸ್ಟರ್ ದಿ ಕಾಪ್ ದಿ ಡೆವಿಲ್', 'ಅನ್‌ಸ್ಟಾಪಬುಲ್', 'ಛಾಂಪಿಯನ್', 'ಟ್ರೈನ್ ಟೂ ಬೂಸನ್' ಸಿನಿಮಾಗಳು ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡಿವೆ.
ತಮ್ಮ ವಿಭಿನ್ನ ನಟನೆಯಿಂದ ಮಾ ಡಾಂಗ್ ಸಿಯೋಕ್ ಗಮನ ಸೆಳೆದಿದ್ದಾರೆ. ಪ್ರಭಾಸ್ ಎದುರು ಆತ ವಿಲನ್ ಆಗಿ ಅಬ್ಬರಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ ಎನ್ನುವ ಚರ್ಚೆ ಶುರುವಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಹುಟ್ಟಿದ ಮಾ ಡಾಂಗ್ ಸಿಯೋಕ್ 2004ರಲ್ಲಿ 'ಡ್ಯಾನ್ಸ್ ವಿತ್ ದಿ ವಿಂಡ್' ಎನ್ನುವ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಹಲವು ಕೊರಿಯನ್ ಸಿನಿಮಾಗಳಲ್ಲಿ ಮಿಂಚಿದ್ದರು. 2016ರಲ್ಲಿ ಬಂದ 'ಟ್ರೈನ್ ಟೂ ಬೂಸನ್' ದೊಡ್ಡ ಬ್ರೇಕ್ ಕೊಟ್ಟಿತ್ತು.
ಇನ್ನು ಮೃಣಾಲ್ ಠಾಕೂಲ್, ರಶ್ಮಿಕಾ ಮಂದಣ್ಣ ಹಾಗೂ ಕೀರ್ತಿ ಸುರೇಶ್ ಸಹ 'ಸ್ಪಿರಿಟ್' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಪ್ರಭಾಸ್ ಅವರನ್ನು ಪೊಲೀಸ್ ಆಫೀಸರ್ ಆಗಿ ಬಹಳ ವಿಭಿನ್ನವಾಗಿ ತೋರಿಸುವುದಾಗಿ ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ. ಅಂದಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ವರ್ಷಾಂತ್ಯಕ್ಕೆ 'ಸ್ಪಿರಿಟ್' ಚಿತ್ರ ಶುರು ಎನ್ನಲಾಗ್ತಿದೆ.


Click it and Unblock the Notifications











