46ನೇ ವಯಸ್ಸಿಗೆ ತಾಯಿಯಾಗ್ತಿದ್ದಾರಾ ಈ ಗಾಯಕಿ? ಅಸಲಿಗೆ ಕಥೆ ಏನು?

By ಫಿಲ್ಮಿಬೀಟ್ ಡೆಸ್ಕ್

ಚಿತ್ರರಂಗದ ಅಂದ್ಮೇಲೆ ನೂರೆಂಟು ಸುದ್ದಿಗಳು ಒಡಾಡುತ್ತಲೇ ಇರುತ್ತವೆ. ಹೀರೋ, ಹೀರೋಯಿನ್ ಬಗ್ಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತವೆ. ಆದ್ರೀಗ ಗಾಯಕಿಯೊಬ್ಬರ ಪರ್ಸನಲ್ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರುವಾಗಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾಯಕಿ ಈಕೆ.

ಈ ನಟಿ ಖ್ಯಾತ ಗಾಯಕರು ಹಾಗೂ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಚಿತ್ರರಂಗದ ಇವರಿಗೆ ಒಳ್ಳೆಯ ಹೆಸರು ಇವರ ಧ್ವನಿಗೆ ಸಂಗೀತ ಪ್ರಿಯರು ಕೂಡ ಫಿದಾ ಆಗಿದ್ದಾರೆ. ಈ ಗಾಯಕಿ ಹಾಡಿರುವ ಹಾಡುಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ಬಂದಿವೆ. ಕನ್ನಡದಲ್ಲಿ ಈಕೆ ಹಾಡಿದ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಫೇವರಿಟ್.

South singer Sunitha reacted on getting pregnant at the age of 46

ದರ್ಶನ್ ನಟಿಸಿದ 'ಅಭಯ್' ಸಿನಿಮಾದ "ಬಾನು ಕೆಂಪಾದಂತೆ..", ಪುನೀತ್ ರಾಜ್‌ಕುಮಾರ್ ನಟನೆಯ 'ಹುಡುಗರು' ಸಿನಿಮಾದ "ನೀರಲ್ಲಿ ಸಣ್ಣ ಅಲೆಯೊಂದು ಮೂಡಿ.." ಹೀಗೆ ಕನ್ನಡದ ಹಲವು ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯನ್ನು ನೀಡಿದ್ದಾರೆ. ಅಂದ್ಹಾಗೆ ಈ ಗಾಯಕಿ ಮತ್ಯಾರೂ ಅಲ್ಲ ಸುನಿತಾ. ಈ ಗಾಯಕಿಗೀತ 46 ವರ್ಷ. ಈಗ ಮತ್ತೆ ಗರ್ಭಿಣಿಯಾಗಿದ್ದಾರೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಅದಕ್ಕೆ ಗಾಯಕಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಬಹುಭಾಷಾ ಗಾಯಕಿ ಸುನಿತಾ ಅವರ ಧ್ವನಿಗೆ ಮರುಳಾಗದವರೇ ಇಲ್ಲ. ಕನ್ನಡದಲ್ಲೇ ಹಲವು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಸುನಿತಾ ತೆಲುಗಿನ ಎವರ್‌ಗ್ರೀನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಗಾಯಕಿಯ ಧ್ವನಿಯಷ್ಟೇ ಸುಂದರವಾಗಿಲ್ಲ. ಬದಲಾಗಿ ಈಕೆ ನೋಡುವುದಕ್ಕೂ ಅಷ್ಟೇ ಸುಂದರಿ. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

South singer Sunitha reacted on getting pregnant at the age of 46

ಗಾಯಕಿ ಸುನಿತಾ ಚಿಕ್ಕ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಕುಮಾರ್ ಗೋಪಾಲರಾಜು ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ಆಕಾಶ್ ಹಾಗೂ ಶ್ರೇಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಸುನಿತಾ ಅವರ ಮೊದಲ ಮದುವೆ ಮುರಿದು ಬಿದ್ದಿದ್ದು, ಇಬ್ಬರೂ ವಿಚ್ಚೇದನವನ್ನು ಪಡೆದಿದ್ದಾರೆ. ಇತ್ತೀಚೆಗೆ ಸುನಿತಾ ಎರಡನೇ ಮದುವೆ ಕೂಡ ಆಗಿದ್ದಾರೆ.

2021ರಲ್ಲಿ ಸುನಿತಾ ತೆಲುಗಿನ ಉದ್ಯಮಿ ರಾಮ ಕೃಷ್ಣ ವೀರಪ್ಪನೇನಿ ಎಂಬುವವರನ್ನು ವಿವಾಹವಾಗಿದ್ದಾರೆ. ಎರಡನೇ ಮದುವೆ ಆದಲ್ಲಿಂದ ಅವರಿಗೆ ವಿಚಿತ್ರವಾದ ಕಷ್ಟವೊಂದು ಎದುರಾಗಿದೆ. ಸದ್ಯ ಸುನಿತಾ ಅವರಿಗೆ 46 ವರ್ಷ. ಇದನ್ನೇ ಮುಂದಿಟ್ಟುಕೊಂಡು 46ನೇ ವಯಸ್ಸಿನಲ್ಲಿ ಸುನಿತಾ ಗರ್ಣಿಣಿಯಾಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಉತ್ತರ ಕೊಟ್ಟು ಗಾಯಕಿ ಸುನಿತಾ ಕೂಡ ಸುಸ್ತಾಗಿದ್ದರು. ಈಗ ಮತ್ತೆ ಅಂತಹದ್ದೇ ಸುದ್ದಿ ಮತ್ತೆ ವೈರಲ್ ಆಗಿತ್ತು.

ಎರಡನೇ ಮದುವೆ ಬಳಿಕ ಸುಖಾಸುಮ್ಮನೆ ಹೀಗೆ ವದಂತಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಗಾಯಕಿ ಸುನಿತಾ ಕಿಡಿಕಾರಿದ್ದಾರೆ. ಇಂತಹ ಅದೆಷ್ಟೇ ವದಂತಿಗಳಿಗೆ ಬೆಂಕಿ ಹಚ್ಚಿದರೂ ತಲೆ ಕೆಡಿಸಿಕೊಳ್ಳದ ಗಾಯಕಿ ಸುನಿತಾ ಈಗ ಅತ್ತ ಗಮನ ಹರಿಸುವುದನ್ನೇ ನಿಲ್ಲಿಸಿದ್ದಾರೆ. ಸದ್ಯ ಪುತ್ರ ಆಕಾಶ್ ಕೂಡ ಸಿನಿಮಾರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ.

More from Filmibeat

English summary
South singer Sunitha reacted on getting pregnant at the age of 46;
Read more about: sunitha singer filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X