twitter
    For Quick Alerts
    ALLOW NOTIFICATIONS  
    For Daily Alerts

    ಇಳಯರಾಜ-ಎಸ್‌ಪಿಬಿ ಮುನಿಸು: ಅಸಲಿ ಕಾರಣ ತಿಳಿಯದೇ ಹೋದ ಬಾಲು

    |

    ಸಂಗೀತ ಮಾಂತ್ರಿಕ ಇಳಯರಾಜ ಮತ್ತು ಸ್ವರಮಾಂತ್ರಿಕ ಎಸ್‌ ಬಿ ಬಾಲಸುಬ್ರಹ್ಮಣ್ಯಂ ನಡುವೆ ಬಹಳ ಆತ್ಮೀಯ ಸಂಬಂಧ ಇದೆ. ಇಳಯರಾಜ ಯಶಸ್ಸಿಗೆ ಎಸ್‌ಪಿಬಿ ಪ್ರಮುಖ ಕಾರಣ ಅಂತ ಕೆಲವರು ಅಂದ್ರೆ, ಎಸ್‌ಪಿಬಿ ಯಶಸ್ಸಿಗೆ ಇಳಯರಾಜ ಮುಖ್ಯ ಕಾರಣ ಅಂದವರು ಇದ್ದಾರೆ. ಅಷ್ಟರ ಮಟ್ಟಿಗೆ ಇವರಿಬ್ಬರ ಜೋಡಿ ಸಕ್ಸಸ್ ಕಂಡಿದೆ.

    ಇಳಯರಾಜ ಮೊದಲ ಹಾಡಿನಿಂದಲೂ ಎಸ್‌ಪಿಬಿ ಜೊತೆಯಲ್ಲಿದ್ದರು. ದಶಕಗಳ ಕಾಲ ಈ ಇಬ್ಬರು ಕಾಂಬಿನೇಷನ್‌ನಲ್ಲಿ ಅದೇಷ್ಟೋ ಹಾಡುಗಳು ಬಂದಿವೆ. ಸಂಗೀತ ಕ್ಷೇತ್ರಕ್ಕೆ ಎರಡು ಕಣ್ಣುಗಳಂತಿದ್ದ ಈ ಇಬ್ಬರ ನಡುವೆ ಇದ್ದಕಿದ್ದಂತೆ ಬಿರುಕು ಮೂಡಿತು. ಇದರ ಪರಿಣಾಮ, 'ಯಾವುದೇ ವೇದಿಕೆಯಲ್ಲಿ ನನ್ನ ಹಾಡುಗಳನ್ನು ಹಾಡಬೇಡ' ಎಂದು ಎಸ್‌ಪಿಬಿ ಇಳಯರಾಜ ನೋಟಿಸ್ ಜಾರಿ ಮಾಡಿದರು.

    ಎಸ್‌ಪಿಬಿಗೆ 'ಭಾರತ ರತ್ನ' ಕೊಡಿ: ಮೋದಿಗೆ ಪತ್ರ ಬರೆದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಎಸ್‌ಪಿಬಿಗೆ 'ಭಾರತ ರತ್ನ' ಕೊಡಿ: ಮೋದಿಗೆ ಪತ್ರ ಬರೆದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

    ಈ ಮುನಿಸಿಗೆ ಹಾಗೂ ನೋಟಿಸ್ ಜಾರಿ ಮಾಡಿದ್ದೇಕೆ ಎನ್ನುವುದರ ಬಗ್ಗೆ ಕೊನೆಗೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕಾರಣ ಗೊತ್ತೇ ಆಗಲಿಲ್ಲವಂತೆ. ಈ ಕುರಿತು ತೆಲುಗಿನ ಸಂದರ್ಶನದಲ್ಲಿ ನಿರೂಪಕ-ನಟ ಆಲಿ ಜೊತೆ ಮುಕ್ತವಾಗಿ ಮಾತಾಡಿದ್ದಾರೆ. ಏನಿದು? ಮುಂದೆ ಓದಿ.....

    ಅಂದು ಅಮೆರಿಕದಲ್ಲಿದ್ದ ಎಸ್‌ಪಿಬಿ

    ಅಂದು ಅಮೆರಿಕದಲ್ಲಿದ್ದ ಎಸ್‌ಪಿಬಿ

    ''ಎಸ್‌ಪಿಬಿ 50ನೇ ವರ್ಷದ ಹೆಸರಿನಲ್ಲಿ ಮಗ ಚರಣ್ ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ. ನಾನು ಅಲ್ಲಿ ಕಾರ್ಯಕ್ರಮ ಕೊಡ್ತಿದ್ದೆ. ಆಗ ಇಳಯರಾಜ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ಬಂತು. ಎಷ್ಟು ವರ್ಷದಿಂದ ಅವನ ಜೊತೆಯಲ್ಲಿದ್ದೀನಿ, ಒಟ್ಟಿಗೆ ಎಷ್ಟು ವೇದಿಕೆಯಲ್ಲಿ ಶೋ ಮಾಡಿದ್ದೀವಿ. ಯಾವಾಗಲೂ ಅನುಮತಿ ತಗೊಂಡೇ ಇಲ್ಲ. ಆದ್ರೆ, ಅಮೆರಿಕ ಕಾರ್ಯಕ್ರಮಕ್ಕೆ ಹೋದ್ಮೇಲೆ ಈ ನೋಟಿಸ್ ಬಂದಿದ್ದು ಯಾಕೆ ಅಂತ ಈಗಲೂ ಗೊತ್ತಿಲ್ಲ'' ಎಂದು ಎಸ್‌ಪಿಬಿ ಹೇಳಿದ್ದರು.

    ಫೋನ್ ಮಾಡಿದ್ರೆ ಮುಗಿದೇ ಹೋಗಿತ್ತು

    ಫೋನ್ ಮಾಡಿದ್ರೆ ಮುಗಿದೇ ಹೋಗಿತ್ತು

    ''ನೋಟಿಸ್ ಬಂದ್ಮೇಲೂ, ಕೆಲವರು ಹೇಳಿದ್ರು. ಸರ್ ನೀವೊಂದು ಫೋನ್ ಮಾಡಿ ಹೇಳಿದ್ರೆ ಸರಿ ಹೋಗುತ್ತೆ ಅಲ್ವಾ ಅಂತ. ಆದ್ರೆ, ನನಗೆ ಮಾಡ್ಬೇಕು ಅನಿಸಿಲ್ಲ. ಎಷ್ಟು ವರ್ಷದ ಸ್ನೇಹ. ಏನಾದರೂ ಇದ್ರೆ ನನ್ನನ್ನು ಕರೆದು ಕೇಳಬಹುದಿತ್ತು. ಹೇ ಏನೋ,,,,ಅವನು ನಿನ್ನ ಬಗ್ಗೆ ಏನೋ ಹೇಳಿದ ಅಂತ ರೇಗಾಡಬಹುದಿತ್ತು. ನಾನು ಆಗ ಅದಕ್ಕೆ ಸ್ಪಷ್ಟನೆ ಕೊಡ್ತಿದ್ದೆ. ಆದ್ರೆ, ಸ್ನೇಹಿತನೊಬ್ಬನಿಗೆ ನೋಟಿಸ್ ಕಳುಹಿಸಿದ್ದನ್ನು ನಾನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದರು.

    'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು

    ಅಂಬಾರಿಯಂತೆ ಹೊರುತ್ತಿದೆ

    ಅಂಬಾರಿಯಂತೆ ಹೊರುತ್ತಿದೆ

    ''ತಮಿಳು, ತೆಲುಗು ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಇಳಯರಾಜ ಅವರನ್ನು ನಾನು ಅಂಬಾರಿಯಂತೆ ಹೊರುತ್ತಿದೆ. ಏಕಂದ್ರೆ, ಅದಕ್ಕೆ ಆತ ಅರ್ಹ ವ್ಯಕ್ತಿ. ಅಂತಹ ಅದ್ಭುತ ಸಂಗೀತಗಾರನನ್ನು ನಾನು ನೋಡಿಲ್ಲ. ಇಸೈಜ್ಞಾನಿ ಎಂಬ ಬಿರುದಿಗೆ ಸರಿಯಾದ ತೂಕ. ಭಗವಂತನ ಅದ್ಭುತವಾದ ಸೃಷ್ಟಿ'' ಎಂದು ಎಸ್‌ಪಿ ಸಂತಸ ಹಂಚಿಕೊಂಡಿದ್ದರು.

    ಏನಾದರೂ ಇದ್ದಿದ್ರೆ ನನ್ನನ್ನು ಕೇಳಬೇಕಿತ್ತು

    ಏನಾದರೂ ಇದ್ದಿದ್ರೆ ನನ್ನನ್ನು ಕೇಳಬೇಕಿತ್ತು

    ''ಶೇಕಡಾ 70 ರಷ್ಟು ಹಾಡುಗಳನ್ನು ನಾನು ಇಳಯರಾಜ ಜೊತೆ ಹಾಡಿದ್ದೇನೆ, ಒಳ್ಳೆಯ ಹಾಡುಗಳನ್ನು ಕೊಟ್ಟ. ಅದಕ್ಕೆ ತಕ್ಕಂತೆ ನಾನು ಹಾಡಿದ್ದೇನೆ ಎನ್ನುವುದು ಅವನಿಗೂ ಗೊತ್ತು, ಎಲ್ಲರಿಗೂ ಗೊತ್ತು. ಮನಸ್ಸಿನಲ್ಲಿ ಏನಾದರೂ ಇದ್ದಿದ್ರೆ ನನ್ನನ್ನು ಕೇಳಿದ್ರೆ ಮುಗಿದು ಹೋಗಿತ್ತು'' ಎಂದು ಅಸಮಾಧಾನಗೊಂಡಿದ್ದರು.

    Recommended Video

    DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada
    ಆಯೋಜಕರಿಗೆ ಹೋಗಿದ್ದು ನೋವು ತಂದಿತ್ತು

    ಆಯೋಜಕರಿಗೆ ಹೋಗಿದ್ದು ನೋವು ತಂದಿತ್ತು

    ''ನಮ್ಮಿಬ್ಬರ ನಡುವೆ ಏನಾದರೂ ಇದ್ದಿದ್ರೆ ನಾವುಗಳೇ ಕೂತು ಬಗೆಹರಿಸಿಕೊಳ್ಳಬೇಕಿತ್ತು. ನಮ್ಮಲ್ಲಿ ಅದಕ್ಕೆ ಪರಿಹಾರ ಹುಡುಕಬೇಕಿತ್ತು. ನಮ್ಮಿಬ್ಬರ ನಡುವಿನ ವಿಷಯವನ್ನು ಸಾರ್ವಜನಿಕರ ಮುಂದೆ ತಂದರು. ನನಗೆ ಮಾತ್ರವಲ್ಲ, ನಾನು ಕಾರ್ಯಕ್ರಮ ಕೊಡಬೇಕೆಂದು ನಿಗದಿಯಾಗಿದ್ದ ಎಲ್ಲ ಆಯೋಜಕರಿಗೂ, ಆಡಿಟೋರಿಯಂಗೂ ನೋಟಿಸ್ ತಲುಪಿದೆ. ಇದು ಬಹಳ ನೋವು ತಂದಿತ್ತು. ನನ್ನ ಸ್ವರದ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ ಇದಕ್ಕೆ ಕಾರಣ ಏನು ಅಂತ ಈಗಲೂ ಗೊತ್ತಿಲ್ಲ'' ಎಂದು ತಿಳಿಸಿದ್ದರು.

    'ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ' ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ'ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ' ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ

    English summary
    SP Balasubramaniam had spoken about the controversy with Ilayaraja in a Telugu interview.
    Tuesday, September 29, 2020, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X