twitter
    For Quick Alerts
    ALLOW NOTIFICATIONS  
    For Daily Alerts

    ಎಸ್‌ಪಿಬಿ ಇಲ್ಲ ಎಂಬ ನೋವಿಗಿಂತ ಬಿಲ್ ಮುಖ್ಯ ಆಯಿತೇ? ಮಗ ಚರಣ್ ಬೇಸರ

    |

    ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಚೆನ್ನೈನ ಎಂಜಿಎಂ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಸೆಪ್ಟೆಂಬರ್ 25 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಐವತ್ತಕ್ಕೂ ಅಧಿಕ ದಿನಗಳ ಕಾಲ ಐಸಿಯು ಘಟಕದಲ್ಲಿದ್ದ ಎಸ್‌ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ಹಲವು ಚರ್ಚೆಗಳು ನಡೆದವು.

    ಆಸ್ಪತ್ರೆ ಕಡೆಯಿಂದ ಭಾರಿ ಮೊತ್ತದ ಬಿಲ್ ನೀಡಿದ್ದರು. ಹಣ ಪಾವತಿಸಲಾಗದೆ ಎಸ್‌ಪಿಬಿ ಕುಟುಂಬ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿದ್ದರು. ಸರ್ಕಾರದ ವತಿಯಿಂದ ಪ್ರತಿಕ್ರಿಯೆ ನೀಡಲು ವಿಳಂಬವಾಯಿತು. ಅಷ್ಟರಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬಳಿ ಮನವಿ ಮಾಡಲಾಯಿತು. ನಂತರ ಅವರ ಮಗಳು ಖುದ್ದು ಆಸ್ಪತ್ರೆ ಬಿಲ್ ಕಟ್ಟಿದರು ಎಂಬ ಸುದ್ದಿ ಹರಿದಾಡಿದವು. ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಎಸ್‌ಪಿಬಿ ಮಗ ಚರಣ್ ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    Recommended Video

    SPB Hospital Bill, ನಿಜಕ್ಕೂ SPB ಆಸ್ಪತ್ರೆ ಬಿಲ್ ಎಷ್ಟು | Filmibeat Kannada
    ಇದು ನಮ್ಮ ಸಂಸ್ಕೃತಿ ಅಲ್ಲ

    ಇದು ನಮ್ಮ ಸಂಸ್ಕೃತಿ ಅಲ್ಲ

    ''ಬಾಲಸುಬ್ರಹ್ಮಣ್ಯಂ ಅವರು ಒಂದು ದಿನ ಮುಂಚಿತವಾಗಿಯೇ ಮೃತಪಟ್ಟಿದ್ದರು. ಆಸ್ಪತ್ರೆ ಬಿಲ್ ಕಟ್ಟಲಾಗದೆ ಸರ್ಕಾರದ ಮೊರೆ ಹೋಗಿದ್ದರು. ಅದಕ್ಕಾಗಿಯೇ ಒಂದು ವಿಳಂಬವಾಗಿ ಸಾವಿನ ಸುದ್ದಿ ಘೋಷಿಸಿದರು ಎಂದೆಲ್ಲ ಕಥೆ ಕಟ್ಟಲಾಗಿದೆ. ಇದೆಲ್ಲ ಏಕೆ, ಇದು ನಮ್ಮ ಸಂಸ್ಕೃತಿ ಅಲ್ಲ, ನಿಮಗೂ ಅವರ ಮೇಲೆ ಅಭಿಮಾನ ಇದೆ, ಹಾಗಿದ್ದರೂ ಇಂತಹ ಸುದ್ದಿಗಳು ನೋವು ತಂದಿದೆ'' ಎಂದು ಚರಣ್ ಹೇಳಿದ್ದಾರೆ.

    ಇಳಯರಾಜ-ಎಸ್‌ಪಿಬಿ ಮುನಿಸು: ಅಸಲಿ ಕಾರಣ ತಿಳಿಯದೇ ಹೋದ ಬಾಲುಇಳಯರಾಜ-ಎಸ್‌ಪಿಬಿ ಮುನಿಸು: ಅಸಲಿ ಕಾರಣ ತಿಳಿಯದೇ ಹೋದ ಬಾಲು

    English summary
    SP Balasubrahmanyam Son Charan clarified About hospital Bills rumors.
    Tuesday, September 29, 2020, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X