For Quick Alerts
  ALLOW NOTIFICATIONS  
  For Daily Alerts

  RRR ತಂಡದ ವಿಶೇಷ ಹಾಡಿನಲ್ಲಿ ಪ್ರಭಾಸ್ ಸೇರಿ ಹಲವು ನಟರು!

  |

  'RRR' ಸಿನಿಮಾದ ಬಿಡುಗಡೆ ದಿನ ಹತ್ತಿರವಾಗುತ್ತಿದೆ. ಚಿತ್ರೀಕರಣ ಪೂರ್ಣ ಮಾಡುವ ಜೊತೆಗೆ ಪ್ರಚಾರ ಕಾರ್ಯವನ್ನು ಸಹ ನಿಧಾನಕ್ಕೆ ಆರಂಭ ಮಾಡಿದ್ದಾರೆ ನಿರ್ದೇಶಕ ರಾಜಮೌಳಿ.

  ಈಗಾಗಲೇ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್‌, ಅಜಯ್ ದೇವಗನ್‌ರ ಕ್ಯಾರೆಕ್ಟರ್ ಪ್ರೋಮೊ ಬಿಡುಗಡೆ ಮಾಡಿರುವ ಚಿತ್ರತಂಡ ಕೆಲವು ದಿನಗಳ ಹಿಂದಷ್ಟೆ ಅದ್ಧೂರಿ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದೆ.

  ಇದೀಗ 'ಆರ್‌ಆರ್‌ಆರ್' ಅಭಿಮಾನಿಗಳಿಗಾಗಿ ಮತ್ತೊಂದು ವಿಶೇಷ ಉಡುಗೊರೆಯನ್ನು ಚಿತ್ರತಂಡ ನೀಡಲು ಸಜ್ಜಾಗಿದೆ. 'ಆರ್‌ಆರ್‌ಆರ್' ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲು ಯೋಜಿಸಿದ್ದು, ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.

  ಸ್ನೇಹಿತರ ದಿನಕ್ಕೆ ವಿಶೇಷ ಹಾಡು

  ಸ್ನೇಹಿತರ ದಿನಕ್ಕೆ ವಿಶೇಷ ಹಾಡು

  ಸ್ನೇಹಿತರ ದಿನಾಚರಣೆಗೆ ಹಾಡು ಬಿಡುಗಡೆ ಆಗಲಿದ್ದು, ಆ ಹಾಡಿನಲ್ಲಿ 'ಆರ್‌ಆರ್‌ಆರ್' ಸಿನಿಮಾ ನಾಯಕರಾದ ಜೂ.ಎನ್‌ಟಿಆರ್, ರಾಮ್ ಚರಣ್ ಜೊತೆಗೆ ನಟ ಪ್ರಭಾಸ್, ರವಿತೇಜ, ನಾನಿ, ಸುನಿಲ್, ನಿತಿನ್ ಸಹ ಇರಲಿದ್ದಾರೆ.

  ರಾಜಮೌಳಿ ಸಿನಿಮಾದಲ್ಲಿ ನಟಿಸಿರುವ ನಟರು ಭಾಗಿ

  ರಾಜಮೌಳಿ ಸಿನಿಮಾದಲ್ಲಿ ನಟಿಸಿರುವ ನಟರು ಭಾಗಿ

  ರಾಜಮೌಳಿ ಸಿನಿಮಾಗಳಲ್ಲಿ ನಟಿಸಿರುವ ನಾಯಕ ನಟರು ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡಿಗೆ ಸಂಗೀತವನ್ನು ಎಂಎಂ ಕೀರವಾಣಿ ನೀಡಲಿದ್ದಾರೆ. ಹಾಡನ್ನು ಕೀರಣವಾಣಿ ಪುತ್ರ ಕಲಾ ಭೈರವ ಹಾಡಲಿದ್ದಾರೆ. ವಿಶೇಷ ಹಾಡಿನಲ್ಲಿ ಇನ್ನೂ ಕೆಲವು ಮುಖ್ಯ ವಿಷಯಗಳು ಇರಲಿವೆ.

  ಹಾಡಿಗಾಗಿ ದೊಡ್ಡ ಸೆಟ್ ಹಾಕಲಾಗಿದೆ

  ಹಾಡಿಗಾಗಿ ದೊಡ್ಡ ಸೆಟ್ ಹಾಕಲಾಗಿದೆ

  ವಿಶೇಷ ಹಾಡನ್ನು ಚಿತ್ರೀಕರಿಸಲೆಂದೇ ದೊಡ್ಡ ಸೆಟ್ ಅನ್ನು ಹೈದರಾಬಾದ್‌ನಲ್ಲಿ ಹಾಕಲಾಗಿದೆ. ಸ್ನೇಹದ ಮಹತ್ವ ಸಾರುವ ಹಾಡು ಇದಾಗಿರಲಿದೆ. ರಾಜಮೌಳಿ ಸಿನಿಮಾದಲ್ಲಿ ನಟರುಗಳು ತಾವು ನಿರ್ವಹಿಸಿದ ಪಾತ್ರಗಳ ವೇಷದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಪ್ರೊಮೋ ಹಾಡಿಗೆ ದೊಡ್ಡ ಮೊತ್ತದ ಹಣವನ್ನೇ ನಿರ್ಮಾಪಕರು ಖರ್ಚು ಮಾಡುತ್ತಿದ್ದಾರೆ.

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು
  ಅಕ್ಟೋಬರ್ 13ಕ್ಕೆ ಬಿಡುಗಡೆ

  ಅಕ್ಟೋಬರ್ 13ಕ್ಕೆ ಬಿಡುಗಡೆ

  ಇನ್ನುಳಿದಂತೆ 'ಆರ್‌ಆರ್‌ಆರ್' ಸಿನಿಮಾವು ಅಕ್ಟೋಬರ್ 13ರಂದು ಬಿಡುಗಡೆ ಆಗಲಿದೆ. ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಮ್ ಭೀಮ್ ಜೀವನ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಸಹ ನಟಿಸಿದ್ದಾರೆ.

  English summary
  RRR team planing to release a special song for friendship day. Prabhas, Ravi Teja, Nitin, Sunil will be there in the song along with Jr NTR and Ram Charan Teja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X