ಪ್ರಭಾಸ್ ಜೊತೆ ನಟಿಸೋ ಚಾನ್ಸ್ ಕೇಳಿದ ರಣ್‌ಬೀರ್: ಯಾವ ಸಿನಿಮಾ ಗೊತ್ತಾ?
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ರಾಜಾ ಡೀಲಕ್ಸ್' ಎನ್ನುವ ಮತ್ತೊಂದು ಚಿತ್ರದಲ್ಲಿ ಪ್ರಭಾಸ್ ಸದ್ದಿಲ್ಲದೇ ನಟಿಸುತ್ತಿದ್ದಾರೆ. 'ಕಲ್ಕಿ' ಚಿತ್ರ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. 200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಪ್ರಭಾಸ್ ಮುಂದಿನ ಸಿನಿಮಾಗಳು ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ ವಿದೇಶಕ್ಕೆ ತೆರಳಿ ಪ್ರಭಾಸ್ ಮೊಣಕಾಲಿನ ಸರ್ಜರಿ ಮಾಡಿಸಿಕೊಂಡು ಬಂದಿದ್ದಾರೆ ಎನ್ನಲಾಗ್ತಿದೆ. ಸದ್ಯ 'ಸಲಾರ್' ಪ್ರಮೋಷನ್‌ಗೆ ಸಿದ್ಧರಾಗುತ್ತಿದ್ದಾರೆ. ಡಿಸೆಂಬರ್ 1ಕ್ಕೆ ಟ್ರೈಲರ್ ರಿಲೀಸ್ ಮಾಡಿ ಹೊಂಬಾಳೆ ಸಂಸ್ಥೆ ಪ್ರಮೋಷನ್ ಆರಂಭಿಸಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಬೆಂಗಳೂರಿನಲ್ಲೇ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಡೆಯುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ವಿದೇಶದಿಂದ ಬಂದ ಕೂಡಲೇ ಪ್ರಭಾಸ್ 'ಸಲಾರ್' ಚಿತ್ರದ ಐಟಂ ಸಾಂಗ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಸಿಮ್ರನ್ ಕೌರ್ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿರುವ ಬಗ್ಗೆ ಊಹಾಪೋಹ ಇದೆ.

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದ್ದು ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಸ್ಟಾರ್ ಕಲಾವಿದರು ಚಿತ್ರದಲ್ಲಿದ್ದಾರೆ. ಇನ್ನು 'ಸಲಾರ್' ಚಿತ್ರ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಇದೆಲ್ಲದರ ನಡುವೆ ಬಹಳ ದಿನಗಳಿಂದ ಚರ್ಚೆಯಲ್ಲಿರುವ 'ಸ್ಪಿರಿಟ್' ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ.
'ಅರ್ಜುನ್ ರೆಡ್ಡಿ' ಸಿನಿಮಾ ಕಟ್ಟಿಕೊಟ್ಟ ಗೆದ್ದ ಸಂದೀಪ್ ರೆಡ್ಡಿ ವಂಗಾ, ಪ್ರಭಾಸ್ ಸಿನಿಮಾ ಮಾಡೋದಾಗಿ ಹೇಳಿದ್ದರು. ಆದರೆ ಬಳಿಕ 'ಅರ್ಜುನ್ ರೆಡ್ಡಿ' ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಿದರು. ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಮಾಡಿ ಮುಗಿಸಿದ್ದಾರೆ. ಡಿಸೆಂಬರ್ 1ಕ್ಕೆ 'ಅನಿಮಲ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಸಂದೀಪ್ ಟೇಕಿಂಗ್, ರಣ್‌ಬೀರ್ ಪರ್ಫಾರ್ಮನ್ಸ್ ನೋಡಿದವರು ದಂಗಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿಂಗಲ್ ಟ್ರೈಲರ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸಂದೀಪ್ ರೆಡ್ಡಿ ವಂಗಾ ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಬಾಲಕೃಷ್ಣ ನಿರೂಪಣೆಯ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಟಾಕ್ ಶೋನಲ್ಲಿ 'ಅನಿಮಲ್' ಭಾಗಿ ಆಗಿತ್ತು. ಅಹಾ ಓಟಿಟಿಯಲ್ಲಿ ಈ ಶೋ ಪ್ರಸಾರವಾಗಿದೆ.
ಟ್ರೈಲರ್‌ನಿಂದಲೇ 'ಅನಿಮಲ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸಂದೀಪ್ ಟ್ಯಾಲೆಂಟ್ ಬಗ್ಗೆ ಅಭಿಮಾನಿಗಳು ಮಾತನಾಡಲು ಆರಂಭಿಸಿದ್ದಾರೆ. 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಶೋನಲ್ಲಿ ಸಂದೀಪ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ಸ್ಪಿರಿಟ್' ಚಿತ್ರವನ್ನು ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ರಣ್‌ಬೀರ್ ಕಪೂರ್ ಆ ಚಿತ್ರದಲ್ಲಿ ನನಗೊಂದು ಛಾನ್ಸ್ ಕೊಡಿ ಎಂದು ನಿರ್ದೇಶಕರ ಬಳಿ ಕೇಳಿದ್ದಾರೆ.
ಹಿಂದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರನ್‌ಬೀರ್ ಕಪೂರ್, ಮುಂದೆ ಪ್ರಭಾಸ್ ಜೊತೆ 'ಸ್ಪಿರಿಟ್' ಸಿನಿಮಾ ಮಾಡ್ತೀರಾ ಅಥವಾ 'ಅನಿಮಲ್' ಮಾಡ್ತೀರಾ ನೋಡಿ ಎಂದಿದ್ದಾರೆ. ಸಂದೀಪ್ ರೆಡ್ಡಿ ನಿರ್ದೇಶನದಲ್ಲಿ ಪ್ರಭಾಸ್ ಸಿನಿಮಾ ಮಾಡ್ತಾರೆ ಅನ್ನೋ ಚರ್ಚೆ ಬಹಳ ದಿನಗಳಿಂದ ಇದೆ. ಆದರೆ ಅದು ಪಕ್ಕಾ ಆಗಿರಲಿಲ್ಲ. ಪ್ರಭಾಸ್ ದೊಡ್ಡ ದೊಡ್ಡ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನೋಡಿ 'ಸ್ಪಿರಿಟ್' ಸಿನಿಮಾ ಬರುತ್ತೋ ಇಲ್ವೋ ಅಂದುಕೊಂಡಿದ್ದರು. ಆದರೆ ನಿರ್ದೇಶಕರೇ ಈ ಕನ್ಫರ್ಮ್ ಮಾಡಿರೋದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











