twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್, ಪವನ್ ಚಿತ್ರಗಳಿಂದ ನನಗಾದ ನಷ್ಟ ಬೇರೆಯವರಿಗೆ ಆಗಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರು: ದಿಲ್ ರಾಜು!

    |

    ದಿಲ್ ರಾಜು.. ತೆಲುಗಿನ ದೊಡ್ಡ ನಿರ್ಮಾಪಕರು ಹಾಗೂ ವಿತರಕರು ಯಾರು ಎಂದಾಗ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ನಿರ್ಮಾಪಕನಾಗಿ ಹಲವಾರು ದೊಡ್ಡ ಚಿತ್ರಗಳನ್ನು ನಿರ್ಮಿಸಿರುವ ದಿಲ್ ರಾಜು ತೆಲುಗು ಹಾಗೂ ಹಿಂದಿ ಚಿತ್ರಗಳನ್ನೂ ಸಹ ನಿರ್ಮಿಸಿದ್ದಾರೆ. ಇನ್ನು ದಿಲ್ ರಾಜು ತೆಲುಗಿನ ದೊಡ್ಡ ವಿತರಕರಾಗಿದ್ದು, ಸ್ಟಾರ್ ನಟರ ಚಿತ್ರಗಳನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುವುದರಲ್ಲಿ ನಿಸ್ಸೀಮರು.

    ಹೀಗೆ ತೆಲುಗಿನ ಜನಪ್ರಿಯ ನಿರ್ಮಾಪಕ ಹಾಗೂ ವಿತರಕನಾಗಿ ಗುರುತಿಸಿಕೊಂಡಿದ್ದ ದಿಲ್ ರಾಜು ಸದ್ಯ ಕಾಲಿವುಡ್ ಪ್ರವೇಶಿಸಿ ವಿವಾದಕ್ಕೀಡಾಗಿದ್ದಾರೆ. ಹೌದು, ತೆಲುಗಿನ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ವಾರಿಸು ಎಂಬ ತಮಿಳು ಚಿತ್ರಕ್ಕೆ ಬಂಡವಾಳ ಹೂಡಿರುವ ದಿಲ್ ರಾಜು ಆ ಚಿತ್ರವನ್ನು ವಾರಿಸುಡು ಎಂಬ ಶೀರ್ಷಿಕೆ ಅಡಿಯಲ್ಲಿ ತೆಲುಗಿನಲ್ಲೂ ಸಹ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ.

    ಇನ್ನು ಈ ಚಿತ್ರ ಸಂಕ್ರಾಂತಿಗೆ ಬಿಡಗಡೆಗೊಳ್ಳುತ್ತಿರುವ ಕಾರಣ ಅದೇ ಸಮಯಕ್ಕೆ ಬಿಡುಗಡೆಯಾಗಲಿರುವ ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ, ಬಾಲಕೃಷ್ಣ ಚಿತ್ರಗಳಿಗೆ ಚಿತ್ರಮಂದಿರದ ತೊಂದರೆಯಾಗುತ್ತದೆ ಎಂದು ದಿಲ್ ರಾಜು ವಿರುದ್ಧ ತೆಲುಗು ನಿರ್ಮಾಪಕರ ಸಂಘ ಕಿಡಿಕಾರಿತ್ತು. ಇದಾವುದಕ್ಕೂ ಆದ್ಯತೆ ನೀಡದ ದಿಲ್ ರಾಜು ವಾರಿಸು ತೆಲುಗು ಡಬ್ ವಾರಸುಡು ಚಿತ್ರವನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ವಿವಾದದ ಸಲುವಾಗಿ ದಿಲ್ ರಾಜು ಹಲವು ಮಾಧ್ಯಮಗಳ ಸಂದರ್ಶನದಲ್ಲಿ ಭಾಗವಹಿಸಿದ್ದು, ಹಲವು ವಿಷಯಗಳ ಬಗ್ಗೆ ಮಾತನಾಡಿ ತಮ್ಮ ನಿಲುವೇನು ಎಂಬುದನ್ನು ತಿಳಿಸಿದ್ದಾರೆ ಹಾಗೂ ಅದಕ್ಕೆ ಸಮರ್ಥನೆಯನ್ನೂ ಸಹ ನೀಡಿದ್ದಾರೆ. ಈ ಸಂದರ್ಶನದ ವೇಳೆಯೇ ತಮಗೆ ಸ್ಟಾರ್ ನಟರಾದ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಚಿತ್ರಗಳು ಉಂಟುಮಾಡಿದ್ದ ನಷ್ಟದ ಬಗ್ಗೆ ದಿಲ್ ರಾಜು ತಿಳಿಸಿದ್ದಾರೆ.

    ಬೃಹತ್ ನಷ್ಟ ಉಂಟುಮಾಡಿದ ಚಿತ್ರಗಳಿವು

    ಬೃಹತ್ ನಷ್ಟ ಉಂಟುಮಾಡಿದ ಚಿತ್ರಗಳಿವು

    ದಿಲ್ ರಾಜು ಸಂದರ್ಶನದಲ್ಲಿ ಮಹೇಶ್ ಬಾಬು ನಟನೆಯ ಸ್ಪೈಡರ್ ಹಾಗೂ ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಚಿತ್ರಗಳು ತನ್ನ ಸಿನಿ ವೃತ್ರಿ ಜೀವನದಲ್ಲಿಯೇ ಅತಿದೊಡ್ಡ ಹಣಕಾಸಿನ ನಷ್ಟವನ್ನು ಉಂಟುಮಾಡಿದವು ಎಂದು ಹೇಳಿಕೊಂಡಿದ್ದಾರೆ. 2017ರಲ್ಲಿ ತೆರೆಕಂಡಿದ್ದ ಮಹೇಶ್ ಬಾಬು ನಟನೆಯ ಸ್ಪೈಡರ್ ಚಿತ್ರದ ತೆಲುಗು ರಾಜ್ಯಗಳ ವಿತರಣೆಯನ್ನು ಮಾಡಿದ್ದ ದಿಲ್ ರಾಜು ಚಿತ್ರ ಹೀನಾಯ ಸೋಲು ಕಂಡ ಕಾರಣ ನಷ್ಟ ಅನುಭವಿಸಿದ್ದರು. ಇನ್ನು ನಂತರದ ವರ್ಷದಲ್ಲಿ ಬಿಡುಗಡೆಗೊಂಡ ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷಿತ ಚಿತ್ರ ಅಜ್ಞಾತವಾಸಿ ಸಹ ಮಕಾಡೆ ಮಲಗಿತ್ತು.

    ನನ್ನನ್ನು ಹೊರತುಪಡಿಸಿ ಬೇರೆಯವರಾಗಿದ್ರೆ ಆತ್ಮಹತ್ಯೆ ಮಾಡಿಕೊಳ್ತಿದ್ರು

    ನನ್ನನ್ನು ಹೊರತುಪಡಿಸಿ ಬೇರೆಯವರಾಗಿದ್ರೆ ಆತ್ಮಹತ್ಯೆ ಮಾಡಿಕೊಳ್ತಿದ್ರು

    ಇನ್ನು ಈ ಚಿತ್ರಗಳಿಂದ ಉಂಟಾದ ನಷ್ಟ ತನಗಲ್ಲದೇ ಬೇರೆ ಯಾರಿಗಾದರೂ ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಅಥವಾ ಚಿತ್ರರಂಗ ಬಿಟ್ಟು ಓಡಿ ಹೋಗ್ತಾ ಇದ್ರು ಎಂದು ದಿಲ್ ರಾಜು ಹೇಳಿಕೊಂಡಿದ್ದಾರೆ. ಆ ವರ್ಷ ತಾನು ಆರು ಚಿತ್ರಗಳನ್ನು ನಿರ್ಮಿಸಿ ಲಾಭ ಪಡೆದ ಕಾರಣ ಉಳಿದುಕೊಂಡೆ ಎಂದೂ ಸಹ ದಿಲ್ ರಾಜು ಹೇಳಿಕೊಂಡಿದ್ದಾರೆ.

    ದಿಲ್ ರಾಜು ವಿರುದ್ಧ ಅಜಿತ್ ಫ್ಯಾನ್ಸ್ ಆಕ್ರೋಶ

    ದಿಲ್ ರಾಜು ವಿರುದ್ಧ ಅಜಿತ್ ಫ್ಯಾನ್ಸ್ ಆಕ್ರೋಶ

    ಇನ್ನು ದಿಲ್ ರಾಜು ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ತಮಿಳುನಾಡಿನಲ್ಲೂ ಸಹ ವಿರೋಧ ಹೊತ್ತುಕೊಂಡಿದ್ದಾರೆ. ಅಜಿತ್‌ಗಿಂತ ವಿಜಯ್ ದೊಡ್ಡ ನಟ ಎಂದು ದಿಲ್ ರಾಜು ನೀಡಿದ್ದ ಹೇಳಿಕೆ ಅಜಿತ್ ಅಭಿಮಾನಿಗಳ ಆಕ್ರೋಶವನ್ನು ಕೆರಳಿಸಿತ್ತು. ಅಷ್ಟೇ ಅಲ್ಲದೇ ವಿಜಯ್ ಅಭಿನಯದ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಕಾರಣ ಈ ಹೇಳಿಕೆ ಎರಡೂ ಅಭಿಮಾನಿ ಬಳಗಗಳ ನಡುವೆ ಫ್ಯಾನ್ ವಾರ್ ಉಂಟಾಗಲು ಕಾರಣವೂ ಆಗಿತ್ತು.

    English summary
    Spyder and agnathavaasi are biggest financial damages in my career says dil raju. Read on
    Thursday, December 29, 2022, 13:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X