ಮೊನ್ನೆ ರಶ್ಮಿಕಾ ಈಗ ಶ್ರೀಲೀಲಾ; ಕೈಜೋಡಿಸಿ ಮುಗಿತ್ತೀನಿ, ದಯವಿಟ್ಟು ಹೀಗೆ ಮಾಡ್ಬೇಡಿ ಎಂದು ಅಳಲು
ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ. ಅದರಲ್ಲೂ AI ಹೊಸ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ಮಾನವ ಸಮಾಜಕ್ಕೆ ವರದಾನ ಆಗುವಂತೆ ಶಾಪ ಕೂಡ ಆಗಬಹುದು. ಎಐ ಬಳಸಿ ನಟ, ನಟಿಯರ ಫೋಟೋ, ವೀಡಿಯೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೇ ರೀತಿಯ ಕಹಿ ಅನುಭವ ನಟಿ ಶ್ರೀಲೀಲಾಗೂ ಆಗಿದೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ದನಿ ಎತ್ತಿದ್ದರು. ತಮ್ಮ ಫೋಟೊಗಳನ್ನು ಮಾರ್ಪ್ ಮಾಡಿ ವೈರಲ್ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ಇದೇ ರೀತಿ ನಟಿ ಶ್ರೀಲೀಲಾ ಈಗ ಮನವಿ ಮಾಡಿ ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಶ್ಮಿಕಾ ಪೋಸ್ಟ್ ಮಾಡಿ "ನಾನು ನನ್ನ ಕೈಗಳನ್ನು ಜೋಡಿಸಿ ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿನಂತಿಸುತ್ತೇನೆ, AI-ಜನರೇಟೆಡ್ ನಾನ್‌ಸೆನ್ಸ್ ಅನ್ನು ಬೆಂಬಲಿಸಬೇಡಿ. ತಂತ್ರಜ್ಞಾನವನ್ನು ಬಳಸುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದರ ನಡುವೆ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿನ ಪ್ರಗತಿಯು ಜೀವನವನ್ನು ಸರಳಗೊಳಿಸಲು ಉದ್ದೇಶಿಸಲಾಗಿದೆ, ನನ್ನ ಅಭಿಪ್ರಾಯದಲ್ಲಿ ಅದನ್ನು ಸಂಕೀರ್ಣಗೊಳಿಸಲು ಅಲ್ಲ" ಎಂದು ಶ್ರೀಲೀಲಾ ಬರೆದುಕೊಂಡಿದ್ದಾರೆ.
ನನ್ನ ಫೋಟೊಗಳನ್ನು ಹೀಗೆ ಮಾರ್ಪ್ ಮಾಡಿ ವೈರಲ್ ಮಾಡುತ್ತಿರುವ ಬಗ್ಗೆ ಗೊತ್ತಿರಲಿಲ್ಲ. ಇದನ್ನು ನನ್ನ ಗಮನಕ್ಕೆ ತಂದವರಿಗೆ ಧನ್ಯವಾದ ಎಂದು ಶ್ರೀಲೀಲಾ ತಿಳಿಸಿದ್ದಾರೆ. "ಪ್ರತಿಯೊಬ್ಬ ಹುಡುಗಿಯೂ ಮಗಳು, ಮೊಮ್ಮಗಳು, ಸಹೋದರಿ, ಸ್ನೇಹಿತೆ ಅಥವಾ ಸಹೋದ್ಯೋಗಿ ಇರುತ್ತಾಳೆ, ಅವಳು ಕಲೆಯನ್ನು ತನ್ನ ವೃತ್ತಿಗಳಲ್ಲಿ ಒಂದಾಗಿ ಆರಿಸಿಕೊಂಡಿದ್ದೇವೆ. ನಾವು ಒಳ್ಳೆ ವಾತಾವರಣದಲ್ಲಿದ್ದೇವೆ ಎಂಬ ವಿಶ್ವಾಸದೊಂದಿಗೆ ಸಂತೋಷವನ್ನು ಹರಡುವ ಉದ್ಯಮದ ಭಾಗವಾಗಲು ನಾವು ಬಯಸುತ್ತೇವೆ. ಬ್ಯುಸಿ ಇದ್ದಿದ್ದರಿಂದ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಗೊತ್ತಾಗಲಿಲ್ಲ.ಇದನ್ನು ನನ್ನ ಗಮನಕ್ಕೆ ತಂದಿದ್ದಕ್ಕಾಗಿ ನನ್ನ ಹಿತೈಷಿಗಳಿಗೆ ನಾನು ಧನ್ಯವಾದ" ಎಂದಿದ್ದಾರೆ.
"ನಾನು ನನ್ನದೇ ಆದ ಜಗತ್ತಿನಲ್ಲಿ ಬದುಕುತ್ತಿದ್ದೇನೆ. ಆದರೆ ಇದು ತುಂಬಾ ಸಮಸ್ಯೆ ಎನಿಸುತ್ತಿದೆ. ನನ್ನ ಸಹ ಸಹೋದ್ಯೋಗಿಗಳು ಅದೇ ರೀತಿ ಅನುಭವಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಅವರ ಪರ ನಿಲ್ಲುತ್ತೇನೆ. ದಯವಿಟ್ಟು ನಮ್ಮೊಂದಿಗೆ ನಿಲ್ಲುವಂತೆ ನಾನು ನಿಮ್ಮನ್ನು ಕೇಳುತ್ತೇನೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ" ಎಂದು ಶ್ರೀಲೀಲಾ ವಿವರಿಸಿದ್ದಾರೆ.
ಬೆಂಗಳೂರು ಬೆಡಗಿ ಶ್ರೀಲೀಲಾ ಕನ್ನಡ ಸಿನಿಮಾಗಳ ಬಳಿಕ ಈಗ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಚಿತ್ರಾಂಗದ' ಎಂಬ ತೆಲುಗು ಚಿತ್ರದಲ್ಲಿ ಶ್ರೀಲೀಲಾ ಬಾಲನಟಿಯಾಗಿ ಮಿಂಚಿದ್ದರು. ಬಳಿಕ ಕನ್ನಡದ 'ಕಿಸ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಭರಾಟೆ' ಎಂಬ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಶ್ರೀಲೀಲಾ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು.
ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಸಿಗಲಿಲ್ಲ. 'ಪುಷ್ಪ'-2 ಚಿತ್ರದಲ್ಲಿ 'ಕಿಸ್ಸಿಕ್' ಎಂದು ಕುಣಿದ ಬಳಿಕ ಬಾಲಿವುಡ್‌ನಿಂದ ಬುಲಾವ್ ಬಂದಿತ್ತು. ಸದ್ಯ ಅನುರಾಗ್ ಬಸು ನಿರ್ದೇಶದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.
ಬಾಲಿವುಡ್ ಅಂಗಳಕ್ಕೆ ಜಿಗಿದಿರುವ ಶ್ರೀಲೀಲಾ ಮುಂದೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸೋ ಸುಳಿವು ಸಿಕ್ತಿದೆ. ಈಗಾಗಲೇ ಬಾಲಕೃಷ್ಣ, ಮಹೇಶ್ ಬಾಬು, ರವಿತೇಜಾ ಜೊತೆಗೆ ತೆರೆ ಹಂಚಿಕೊಂಡು ಸಕ್ಸಸ್ ಕಂಡಿದ್ದಾರೆ.


Click it and Unblock the Notifications











