Sreeleela: ಮಲಯಾಳಂ ನಟನನ್ನು ನೋಡಿ ನೀವೇ ನನ್ನ ಕನಸಿನ ರಾಜಕುಮಾರ ಎಂದ ಕಿಸ್ ಬೆಡಗಿ

'ಕಿಸ್' ಬೆಡಗಿ ಶ್ರೀಲೀಲಾ ಟಾಲಿವುಡ್‌ನಲ್ಲೇ ಸೆಟ್ಲ್ ಆಗಿ ಬಿಟ್ಟಿದ್ದಾರೆ. ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡು ಕಮಾಲ್ ಮಾಡುತ್ತಿದ್ದಾರೆ. ಹೊಸಬರ ಸಿನಿಮಾಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ಇತ್ತೀಚೆಗೆ ಸಿನಿಮಾವೊಂದರ ಕಾರ್ಯಕ್ರಮದಲ್ಲಿ ತಮ್ಮ ಕನಸಿನ ರಾಜಕುಮಾರನ ಬಗ್ಗೆ ಹೇಳಿಕೊಂಡಿದ್ದಾರೆ. ಮಲಯಾಳಂ ನಟನನ್ನು ನೋಡಿ ಆ ರಾಜಕುಮಾರ ನೀವೇ ಎಂದುಬಿಟ್ಟಿದ್ದಾರೆ. ಶ್ರೀ ಹೇಳಿಕೆ ವೈರಲ್ ಆಗ್ತಿದೆ.

ಎ. ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದಲ್ಲಿ ಶ್ರೀಲೀಲಾ ಮೊದಲ ಬಾರಿಗೆ ನಟಿಸಿದ್ದರು. ಆ ಚಿತ್ರದಲ್ಲಿ ನಟನೆಯಲ್ಲಿ ಹಿಂದೆ ಬಿದ್ದರೂ ಪ್ರೇಕ್ಷಕರ ಗೆಲ್ಲುವಲ್ಲಿ ಸಕ್ಸಸ್ ಕಂಡಿದ್ದರು. ಬಳಿಕ 'ಬೈಟು ಲವ್' ಚಿತ್ರದಲ್ಲಿ ಮಿಂಚಿದ್ದರು. ಆ ಬಳಿಕ ಶ್ರೀಲೀಲಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟುಬಿಟ್ಟರು. ತೆಲುಗಿನಲ್ಲಿ ದೊಡ್ಡ ಸಕ್ಸಸ್ ಸಿಗದೇ ಇದ್ದರೂ ಕ್ರೇಜ್ ಮಾತ್ರ ಜೋರಾಗಿದೆ. ಅಂದ ಹಾಗೂ ಡ್ಯಾನ್ಸ್‌ನಿಂದ ಕಿಸ್‌ ಬೆಡಗಿ ತೆಲುಗು ಬಾಬುಗಳ ಮನಗೆದ್ದಿದ್ದಾರೆ. ಪವನ್ ಕಲ್ಯಾಣ್, ಮಹೇಶ್‌ ಬಾಬುರಂತಹ ಸ್ಟಾರ್ ನಟರೊಟ್ಟಿಗೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Sreeleela interesting comments about Dulquer Salmaan, video goes viral

ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ನಿರ್ಮಿಸಿರುವ 'ಮ್ಯಾಡ್' ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಶ್ರೀ ಲೀಲಾ ಅತಿಥಿಯಾಗಿ ಹೋಗಿದ್ದರು. ಮಲಯಾಳಂ ನಟ ದುಲ್ಕರ್ ಸಲ್ಮಾನ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಸಿನಿಮಾ ಬಗ್ಗೆ ಮಾತನಾಡಿದ್ದಕ್ಕಿಂತ ದುಲ್ಕರ್ ಗುಣಗಾನ ಮಾಡುವುದರಲ್ಲೇ ಶ್ರೀಲೀಲಾ ಮೈಮರೆತುಬಿಟ್ಟರು. ನನ್ನ ಕನಸಿನ ರಾಜಕುಮಾರ ಎನ್ನುವ ಅರ್ಥದಲ್ಲಿ ಶ್ರೀಲೀಲಾ ಪ್ರೇಮ ರಾಗ ಹಾಡಿದ್ದಾರೆ. ಹೆಚ್ಚು ಕಡಿಮೆ ಶ್ರೀ ಪರೋಕ್ಷವಾಗಿ ದುಲ್ಕರ್‌ಗೆ ಪ್ರಪೋಸ್ ಮಾಡಿಬಿಟ್ಟಂತಿತ್ತು.

ದುಲ್ಕರ್ ಸಲ್ಮಾನ್ ಬಗ್ಗೆ ಮಾತನಾಡುತ್ತಾ "ಸರ್, ನೀವು ಕಾರ್ಯಕ್ರಮಕ್ಕೆ ಬರುತ್ತಿದ್ದೀರಿ ಎಂದು ತಿಳಿದಾಗ ನನಗಿಂತ ನನ್ನ ತಾಯಿ ಹೆಚ್ಚು ಖುಷಿಪಟ್ಟರು. ಆಕೆ ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನು ಕೇಳಿದೆ ಎಂದು ಹೇಳುವಂತೆ ಹೇಳಿದರು" ಎಂದಿದ್ದಾರೆ.

"ನನಗೆ ಬಾಲ್ಯದಿಂದಲೂ ಒಂದು ಕನಸು. ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳಿದಾಗ ರಾಜಕುಮಾರ ಕುದುರೆಯ ಮೇಲೆ ಬರುವುದನ್ನು ಕಲ್ಪಿಸಿಕೊಂಡಿದ್ದೆ. ಯಾವಾಗ ನೀವು ಮಾಡಿದ 'ಹೀರಿಯೆ' ಹಾಡು ನೋಡಿದಾಗಲೆಲ್ಲ ನೀವೆ ನನ್ನ ಕನಸಿನ ರಾಜಕುಮಾರ ಎಂದು ಫಿಕ್ಸ್ ಆಗಿದ್ದೆ ಎಂದು ಶ್ರೀಲೀಲಾ ಹೇಳಿದ್ದಾರೆ. ನೀವು ಈಗಲೂ ನನ್ನ ಕನಸಿನಲ್ಲಿ ಬರುತ್ತೀರಿ, ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು ಎಂದಿದ್ದು ನೋಡಿ ಅಲ್ಲಿದ್ದವರು ಅಚ್ಚರಿಗೊಂಡಿದ್ದಾರೆ.

ಶ್ರೀಲೀಲಾ ಮಾತುಗಳನ್ನು ಕೇಳಿದ ದುಲ್ಕರ್ ಸಲ್ಮಾನ್ ಮಾತ್ರ ವೇದಿಕೆಯಲ್ಲಿ ಮುಗುಳ್ನಗು ಬೀರುತ್ತಿದ್ದರು. ಈ ವಿಡಿಯೋ ಸಖತ್ ವೈರಲ್ ಆಗ್ತಿದೆ. ದುಲ್ಕರ್ ಸಲ್ಮಾನ್‌ಗೆ ಈಗಾಗಲೇ ಮದುವೆಯಾಗಿದೆ ಅನ್ನೋದು ನಿಮಗೆ ಗೊತ್ತು ತಾನೇ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಆಕೆಯ ಕಾಮೆಂಟ್ಸ್ ಕ್ಯೂಟ್ ಆಗಿದೆ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ.

ಕಳೆದ ವಾರ ಶ್ರೀಲೀಲಾ ನಟನೆಯ 'ಸ್ಕಂದ' ಸಿನಿಮಾ ರಿಲೀಸ್ ಆಗಿದೆ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡು ಸಿನಿಮಾ ಮುನ್ನುಗ್ಗುತ್ತಿದೆ. ದಸರಾ ಸಂಭ್ರಮದಲ್ಲಿ ಬಾಲಕೃಷ್ಣ ಜೊತೆ ನಟಿಸಿದರುವ 'ಭಗವಂತ್ ಕೇಸರಿ' ಸಿನಿಮಾ ರಿಲೀಸ್ ಆಗಲಿದೆ. 'ಆದಿಕೇಶವ' ಎನ್ನುವ ಮತ್ತೊಂದು ಸಿನಿಮಾ ಚಿತ್ರೀಕರಣ ಮುಗಿದಿದೆ.

ನಿತಿನ್ ಜೋಡಿಯಾಗಿ 'ಎಕ್ಸ್ಟ್ರಾಡಿನರಿಮ್ಯಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಉಸ್ತಾದ್ ಭಗತ್‌ ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿದ್ದಾರೆ. ಇನ್ನು 'ಅನಗನಗ ಒಕರೋಜು' ಸಿನಿಮಾ ಆಕೆಯ ಕೈಯಲ್ಲಿದೆ. ಇದೆಲ್ಲದರ ಜೊತೆ ವಿಜಯ್ ದೇವರಕೊಂಡ ಜೊತೆ ಒಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Sreeleela says Dulquer Salmaan is her dream boy;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X