For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್‌ಗೆ 'ಕಿಸ್' ನಟಿ: ತೆಲುಗಿನ ಬಹುದೊಡ್ಡ ನಿರ್ದೇಶಕನ ಚಿತ್ರಕ್ಕೆ ಶ್ರೀಲೀಲಾ ನಾಯಕಿ

  |

  ಕಿಸ್, ಭರಾಟೆ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ನಟಿ ಶ್ರೀಲೀಲಾ ಈಗ ಟಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಶ್ರೀಲೀಲಾ ಅವರು ಭವಿಷ್ಯದಲ್ಲಿ ದೊಡ್ಡ ತಾರೆಯಾಗಿ ಮಿಂಚಬಲ್ಲರು ಎಂದು ಹಲವು ಭರವಸೆಯ ಮಾತುಗಳನ್ನಾಡುತ್ತಿದ್ದರು. ಅದು ನಿಜ ಎನ್ನುವಂತೆ ತೆಲುಗಿನ ದೊಡ್ಡ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.

  1996ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಬಾರಿಸಿದ್ದ ಚಿತ್ರವೊಂದರ ಮುಂದುವರಿದ ಭಾಗ ಘೋಷಣೆಯಾಗಿದ್ದು, ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಇಂಡಸ್ಟ್ರಿ ಕಂಡ ದೊಡ್ಡ ನಿರ್ದೇಶಕ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಸ್ಟಾರ್ ನಟರ ಮಗ ಹೀರೋ ಆಗಿ ನಟಿಸುತ್ತಿದ್ದಾರೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಯಾರು ಆ ನಿರ್ದೇಶಕ? ಮುಂದೆ ಓದಿ...

  ರಾಘವೇಂದ್ರ ರಾವ್ ಚಿತ್ರದಲ್ಲಿ ಶ್ರೀಲೀಲಾ

  ರಾಘವೇಂದ್ರ ರಾವ್ ಚಿತ್ರದಲ್ಲಿ ಶ್ರೀಲೀಲಾ

  ತೆಲುಗು ಇಂಡಸ್ಟ್ರಿಯ ದಿಗ್ಗಜ ನಿರ್ದೇಶಕ, ನಿರ್ಮಾಪಕ, ಬರಹಗಾರ, ನೃತ್ಯ ಸಂಯೋಜಕ ಕೆ ರಾಘವೇಂದ್ರ ರಾವ್ ನಿರ್ಮಾಣ ಮಾಡುತ್ತಿರುವ 'ಪೆಳ್ಳಿಸಂದಡಿ-2' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಶ್ರೀಲೀಲಾ ನಾಯಕಿ ಎಂದು ಪ್ರಕಟಿಸಿದ್ದಾರೆ.

  ಹರಿ ಸಂತು-ಧನ್ವೀರ್ ಜೋಡಿಯ 'ಬೈ 2 ಲವ್' ಆರಂಭಹರಿ ಸಂತು-ಧನ್ವೀರ್ ಜೋಡಿಯ 'ಬೈ 2 ಲವ್' ಆರಂಭ

  ಶ್ರೀಕಾಂತ್ ಮಗ ರೋಷನ್ ನಾಯಕ

  ಶ್ರೀಕಾಂತ್ ಮಗ ರೋಷನ್ ನಾಯಕ

  'ಪೆಳ್ಳಿಸಂದಡಿ-2' ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ನಾಯಕನಾಗಿ ನಟಿಸುತ್ತಿದ್ದಾರೆ. ರೋಷನ್‌ಗೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಗೌರಿ ರೋಣಂಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕೆ ರಾಘವೇಂದ್ರ ರಾವ್ ನಿರ್ಮಾಣ ಮಾಡುತ್ತಿದ್ದಾರೆ.

  1996ರ ಹಿಟ್ ಸಿನಿಮಾ 'ಪೆಳ್ಳಿಸಂದಡಿ-2'

  1996ರ ಹಿಟ್ ಸಿನಿಮಾ 'ಪೆಳ್ಳಿಸಂದಡಿ-2'

  1996 ಜನವರಿ 12 ರಂದು ಪೆಳ್ಳಿಸಂದಡಿ ಸಿನಿಮಾ ತೆರೆಕಂಡಿತ್ತು. ಕೆ ರಾಘವೇಂದ್ರ ರಾವ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಶ್ರೀಕಾಂತ್ ನಾಯಕರಾಗಿದ್ದರು. ರಾವಲಿ ಹಾಗೂ ದೀಪ್ತಿ ಭಟ್ನಾಗರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ 25 ವರ್ಷ ಪೂರೈಸಿದ ಹಿನ್ನೆಲೆ 'ಪೆಳ್ಳಿಸಂದಡಿ-2' ಸಿನಿಮಾ ಘೋಷಿಸಿದ್ದಾರೆ ಕೆ ರಾಘವೇಂದ್ರ ರಾವ್.

  'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?

  ಶ್ರೀಲೀಲಾ ಮೇಲೆ ನಿರೀಕ್ಷೆ ಹೆಚ್ಚಿದೆ

  ಶ್ರೀಲೀಲಾ ಮೇಲೆ ನಿರೀಕ್ಷೆ ಹೆಚ್ಚಿದೆ

  ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಅಂತ ನಾಯಕಿ ನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಲ್ಲಿ ಮಾಡುತ್ತಿದ್ದಾರೆ. ನಟಿ ಶ್ರೀಲೀಲಾ ಅವರ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಶ್ರೀಲೀಲಾ ಸಹ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆಯಬಹುದು ಎಂದು ಹೇಳಲಾಗುತ್ತಿದೆ. ಕಿಸ್, ಭರಾಟೆ ನಂತರ ಕನ್ನಡದಲ್ಲಿ ಧನ್ವೀರ್ ಜೊತೆ 'ಬೈ-2-ಲವ್' ಸಿನಿಮಾ ಮಾಡ್ತಿದ್ದಾರೆ. ಈಗ ತೆಲುಗಿನಲ್ಲಿ ಚೊಚ್ಚಲ ಸಿನಿಮಾ ಆರಂಭಿಸಿದ್ದಾರೆ.

  English summary
  Kannada actress Sreeleela making her telugu debut with filmmaker Ragavendra rao's upcoming project pelli sandadi 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X