Sreeleela: ಆತನೊಟ್ಟಿಗೆ ಮಾತ್ರ ಲಿಪ್‌ಲಾಕ್ ಮಾಡ್ತೀನಿ: ಶ್ರೀಲೀಲಾ ಕಾಮೆಂಟ್ಸ್ ವೈರಲ್
ಬೆಂಗಳೂರು ಬೆಡಗಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ಬಾಲಕೃಷ್ಣ ಜೊತೆ ನಟಿಸಿರುವ 'ಭಗವಂತ್ ಕೇಸರಿ' ಸಿನಿಮಾ ರಿಲೀಸ್ ಆಗಿದೆ. ಇನ್ನು ತೆರೆಮೇಲೆ ಲಿಪ್‌ಲಾಕ್ ಮಾಡುವ ಬಗ್ಗೆ ಶ್ರೀಲೀಲಾ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.
ಚಿತ್ರರಂಗದಲ್ಲೀಗ ಲಿಪ್‌ಲಾಕ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಬಹಳ ವರ್ಷಗಳಿಂದ ಲಿಪ್‌ಲಾಕ್‌ಗೆ ನೋ ಎನ್ನುತ್ತಿದ್ದ ತಮನ್ನಾ ಇತ್ತೀಚೆಗೆ ವಿಜಯ್ ವರ್ಮ ತುಟಿಗೆ ತುಟಿ ಬೆರೆಸಿದ್ದರು. ಇನ್ನು ನಟಿ ರಶ್ಮಿಕಾ 'ಅನಿಮಲ್' ಚಿತ್ರದಲ್ಲಿ ಲಿಪ್‌ಲಾಕ್ ಮಾಡಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಒಂದೇ ಹಾಡಿನಲ್ಲಿ ರಣ್‌ಬೀರ್ ಕಪೂರ್ ಜೊತೆ ಮೂರ್ನಾಲ್ಕು ಬಾರಿ ಕೊಡಗಿನ ಬೆಡಗಿ ತುಟಿಗೆ ತುಟಿ ಸೇರಿಸಿದ್ದರು.

ಟಾಲಿವುಡ್‌ನಲ್ಲಿ ಕಮಾಲ್ ಮಾಡುತ್ತಿರುವ ಶ್ರೀಲೀಲಾ ತೆರೆಮೇಲೆ ಲಿಪ್‌ಲಾಕ್ ಮಾಡೋಕೆ ಒಲ್ಲೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ತೆರೆಮೇಲೆ ಯಾರೊಟ್ಟಿಗೆ ಯಾವ ಹೀರೊ ಜೊತೆ ಲಿಪ್ ಕಿಸ್ ಮಾಡುತ್ತೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಕೆಲ ಹೊತ್ತು ಆಲೋಚಿಸಿದ ಚೆಲುವೆ ನಾನು ಯಾರೊಟ್ಟಿಗೂ ಲಿಪ್ ಲಾಕ್ ಮಾಡಲ್ಲ ಎಂದಿದ್ದಾರೆ.
ಒಂದು ವೇಳೆ ಅಂತಹ ಸೀನ್ ಮಾಡಬೇಕಾದರೆ ನನ್ನ ಭಾವಿ ಪತಿಯೊಂದಿಗೆ ಮಾಡುತ್ತೇನೆ ಎಂದು ಕಿಸ್ ಬೆಡಗಿ ಹೇಳಿದ್ದಾರೆ. ಲಿಪ್‌ಲಾಕ್ ಸೀನ್ ಬಗ್ಗೆ ಶ್ರೀಲೀಲಾ ಹೇಳಿಕೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಮಾತು ಕೇಳಿ ಖುಷಿಯಾಗಿದ್ದಾರೆ. ಮತ್ತೊಂದು ಸಂದರ್ಶನದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕುವ ಬಗ್ಗೆಯೂ ಬೆಂಗಳೂರು ಬೆಡಗಿ ಮಾತನಾಡಿದ್ದಾರೆ.
"ಸದ್ಯಕ್ಕೆ ನಾನು ಐಟಂ ಸಾಂಗ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿಲ್ಲ. 'ಭಗವಂತ್ ಕೇಸರಿ' ಚಿತ್ರದಲ್ಲಿ ವಿಜ್ಜಿ ಪಾಪ ಪಾತ್ರ ಮಾಡುತ್ತಿದ್ದೇನೆ. ಇಂತಹ ಪಾತ್ರಗಳನ್ನು ಮಾಡುವಾಗ ಐಟಂ ಸಾಂಗ್ ಮಾಡಿದ್ರೆ ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ನನ್ನ ಪ್ರಕಾರ ಅದಕ್ಕೆಲ್ಲಾ ಇನ್ನು ಬಹಳ ಸಮಯ ಇದೆ. ಈಗ ಸಿಕ್ಕಿರುವ ಒಳ್ಳೆ ಒಳ್ಳೆ ಪಾತ್ರಗಳಲ್ಲಿ ನಟಿಸಬೇಕಿದೆ" ಎಂದಿದ್ದರು.
'ಭಗವಂತ್ ಕೇಸರಿ' ಶ್ರೀಲೀಲಾ ನಟನೆಯ 'ಆದಿಕೇಶವ' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ನವೆಂಬರ್ 10ಕ್ಕೆ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಚಿತ್ರದಲ್ಲಿ ವೈಷ್ಣವ್ ತೇಜ್ ಜೋಡಿಯಾಗಿ ಶ್ರೀಲೀಲಾ ಮಿಂಚಿದ್ದಾರೆ.
ಇನ್ನು ನಿತಿನ್ ನಟನೆಯ 'ಎಕ್ಸ್ಟ್ರಾಡಿನರಿಮ್ಯಾನ್' ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮೊದಲಿಗೆ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಕೆ ಚಿತ್ರದಿಂದ ಹೊರ ನಡೆದಿದ್ದರು. ಬಳಿಕ ಆ ಅವಕಾಶ ಶ್ರೀಲೀಲಾ ಪಾಲಗಿತ್ತು. ಇನ್ನು ಪವನ್ ಕಲ್ಯಾಣ್ ಜೋಡಿಯಾಗಿ 'ಉಸ್ತಾದ್ ಭಗತ್‌ಸಿಂಗ್' ಚಿತ್ರದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಶ್ರೀಲೀಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್‌ಗೆ ರೆಡಿಯಾಗ್ತಿದೆ. ವಿಜಯ್ ದೇವರಕೊಂಡ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಒಟ್ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಶ್ರೀಲೀಲಾ ಮೋಡಿ ಮಾಡುತ್ತಿದ್ದಾರೆ.
4 ವರ್ಷಗಳ ಹಿಂದೆ ಕನ್ನಡದ 'ಕಿಸ್' ಚಿತ್ರದಲ್ಲಿ ಶ್ರೀಲೀಲಾ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ 'ಭರಾಟೆ' ಶ್ರೀಮುರಳಿಗೆ ಜೋಡಿಯಾಗಿದ್ದರು. 'ಬೈಟು ಲವ್' ಚಿತ್ರದಲ್ಲಿ ಧನ್ವೀರ್ ಜೊತೆ ನಟಿಸಿದ್ದರು. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ನಟಿ ಅಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. 'ಧಮಾಕ' ಚಿತ್ರದಲ್ಲಿ ರವಿತೇಜಾ ಜೊತೆ ಶ್ರೀಲೀಲಾ ನಟಿಸಿ ಗೆದ್ದರು. ಆದರೂ ಚೆಲುವೆಗೆ ದೊಡ್ಡ ಬ್ರೇಕ್ ಮಾತ್ರ ಇನ್ನು ಸಿಕ್ಕಿಲ್ಲ.


Click it and Unblock the Notifications











