ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಸೌಂದರ್ಯದ ಬಗ್ಗೆ ಖ್ಯಾತ ನಿರ್ದೇಶಕನ ಹೇಳಿಕೆ ವೈರಲ್

ಬೆಂಗಳೂರು ಬೆಡಗಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಎಷ್ಟೇ ಸಿನಿಮಾಗಳಲ್ಲಿ ನಟಿಸಿದ್ರು ಆಕೆಗೆ ಒಳ್ಳೆ ಬ್ರೇಕ್ ಸಿಕ್ತಿಲ್ಲ. ಆದರೂ ತನ್ನ ಡ್ಯಾನ್ಸ್ ಹಾಗೂ ಗ್ಲಾಮರ್ ಮೂಲಕ ಸೌತ್ ಸಿನಿದುನಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ತಾಯಿ ಡಾ. ಸ್ವರ್ಣಲತಾ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

ಅಂದಹಾಗೆ ಬೆಂಗಳೂರಿನ ಪ್ರಸಿದ್ಧ ಸ್ತ್ರೀರೋಗ ತಜ್ಞರ ಪೈಕಿ ಡಾ. ಸ್ವರ್ಣಲತಾ ಸಹ ಒಬ್ಬರು. ನಟಿ ರಾಧಿಕಾ ಪಂಡಿತ್ ಅವರ ಇಬ್ಬರ ಮಕ್ಕಳ ಹೆರಿಗೆಯನ್ನು ಸ್ವರ್ಣಲತಾ ಮಾಡಿದ್ದರು. ಯಶ್ ಕುಟುಂಬದ ಜೊತೆ ಶ್ರೀಲೀಲಾ ಅವರಿಗೆ ಆತ್ಮೀಯ ಒಡನಾಟವಿದೆ. ಯಶ್-ರಾಧಿಕಾ ದಂಪತಿಯನ್ನು ಅಣ್ಣ, ಅತ್ತಿಗೆ ಎಂದೇ ಕರೆಯುತ್ತಾರೆ. ಸದ್ಯ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಬಗ್ಗೆ ತೆಲುಗಿನ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಹೇಳಿಕೆ ವೈರಲ್ ಆಗ್ತಿದೆ.

Sreeleela s Mother Compared to Vyjayanthimala by K Raghavendra Rao Director s Comment Goes Viral

ಇತ್ತೀಚೆಗೆ ಕೆ. ರಾಘವೇಂದ್ರ ರಾವ್ ಹಾಗೂ ಶ್ರೀಲೀಲಾ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಇಬ್ಬರೂ ವೇದಿಕೆ ಮೇಲೆ ಇದ್ದರು. ಎದುರಿಗೆ ಆಕೆಯ ತಾಯಿ ಡಾ. ಸ್ವರ್ಣಲತಾ ಇದ್ದರು. ಶ್ರೀಲೀಲಾ ಬಗ್ಗೆ ಮಾತನಾಡುತ್ತಾ "ಮೊದಲ ಬಾರಿ ನಿಮ್ಮ ಅಮ್ಮನನ್ನು ನೋಡಿದಾಗ 20 ವರ್ಷ ಹಿಂದೆ ನಿಮ್ಮನ್ನು ನೋಡಿದ್ರೆ, ನಿಮ್ಮನ್ನು ಹೀರೊಯಿನ್ ಮಾಡಿಬಿಡ್ತಿದ್ದೆ ಎಂದೆ. ಆಕೆ ನೋಡಲು ಕೊಂಚ ವೈಜಯಂತಿಮಾಲಾ ರೀತಿ ಇದ್ದಾರೆ" ಎಂದಿದ್ದಾರೆ. ಕೂಡಲೇ ಶ್ರೀಲೀಲಾ ಹಾಗೂ ತಾಯಿ ಸ್ವರ್ಣಲತಾ ನಾಚಿಕೆಯಿಂದ ನಕ್ಕಿದ್ದಾರೆ.

ಕೆ. ರಾಘವೇಂದ್ರ ರಾವ್ ತೆಲುಗಿನ ಖ್ಯಾತ ನಿರ್ದೇಶಕರು. 100ಕ್ಕೂ ಅಧಿಕ ಸಿನಿಮಾಗಳಿಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಾಕಷ್ಟು ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ನಟಿಯರನ್ನು ತೆರೆಮೇಲೆ ಸೊಗಸಾಗಿ ತೋರಿಸುವುದು ಅವರ ಟ್ರೇಡ್‌ಮಾರ್ಕ್. ನಟಿಯರ ದೇಹದ ಹೊಕ್ಕಳು, ಸೊಂಟದ ಮೇಲೆ ಹೂವು, ಹಣ್ಣು ಹಾಕಿ ಸುಂದರವಾಗಿ ತೋರಿಸುತ್ತಾರೆ. ನಟಿ ಶ್ರೀಲೀಲಾ ಅವರನ್ನು ತೆಲುಗು ಚಿತ್ರರಂಗಕ್ಕೆ ಕೆ. ರಾಘವೇಂದ್ರ ರಾವ್ ಪರಿಚಯಿಸಿದ್ದರು.

ತೆಲುಗಿನಲ್ಲಿ ಕೆ. ರಾಘವೇಂದ್ರ ರಾವ್ ಪರಿಚಯಿಸಿದ ನಟ, ನಟಿಯರೆಲ್ಲಾ ಸಕ್ಸಸ್ ಕಂಡಿದ್ದಾರೆ. ಹಾಗಾಗಿ ಹೊಸ ಪ್ರತಿಭೆಗಳನ್ನು ಪರಿಚಯಿಸಲು ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ತೆಲುಗಿನ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಶ್ರೀಲೀಲಾ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು.

More from Filmibeat

Read more about: sreeleela tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X