ಶ್ರೀಲೀಲಾ ಮನೆಗೆ ಬಂದ ಈ ಮುದ್ದಾದ ಮಗು ಯಾರದ್ದು ? ಮೂರನೇ ಮಗುವಿಗೆ ತಾಯಿ ಸ್ಥಾನ ತುಂಬಿದ ಕಿಸ್ ಚೆಲುವೆ ?
ಸಾಮಾನ್ಯವಾಗಿ ಚಿತ್ರರಂಗದ ನಾಯಕಿಯರು ಅಂದರೆ ಸದಾ ಮೇಕಪ್ಪು ಮಾಡಿಕೊಂಡು ಪೋಸು ಕೊಡುತ್ತಾರೆ. ಬಿಂಕ ಬಿನ್ನಾಣದಿಂದ ನುಲಿದು ಖ್ಯಾತಿಯನ್ನು ಗಳಿಸುತ್ತಾರೆ ಎನ್ನುವ ಅಭಿಪ್ರಾಯ ಹಲವರದ್ದು. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಲವರು ಬಡವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ತೆರೆ ಮರೆಯಲ್ಲಿ ಮಾಡುತ್ತಾರೆ.ಇನ್ನು ಕೆಲವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ತಮ್ಮ ಈ ಕೆಲಸಗಳ ಮೂಲಕ ಗಮನ ಸೆಳೆಯುತ್ತಾರೆ. ಇದಕ್ಕೆ ಶ್ರೀಲೀಲಾ ಸದ್ಯದ ಉದಾಹರಣೆ.
ಹೌದು. ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿರುವ ಶ್ರೀಲೀಲಾ ಸದ್ಯ ಬಾಲಿವುಡ್‌ನಲ್ಲೊಂದು ಕಣ್ಣಿಟ್ಟಿದ್ದಾರೆ. ಕಾರ್ತಿಕ್ ಆರ್ಯನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶಿಸಿರುವ ಶ್ರೀಲೀಲಾ ಎರಡು ಮೂರು ವರ್ಷದ ಹಿಂದೆ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದಿದ್ದರು. ಈ ಮೂಲಕ ಅನೇಕರಿಗೆ ಮಾದರಿಯಾಗಿದ್ದರು.

ಇಂಥಾ ಶ್ರೀಲೀಲಾ ಇದೀಗ ಮತ್ತೊಂದು ಮಗುವನ್ನು ದತ್ತು ಪಡೆದಿದ್ದಾರಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಹೌದು, ಅಸಲಿಗೆ ಶ್ರೀಲೀಲಾ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುದ್ದು ಪಾಪು ಜೊತೆ ಫೋಟೊ ಹಂಚಿಕೊಂಡಿದ್ದಾರೆ. ಮನೆಗೆ ಮತ್ತೊಬ್ಬ ಸದಸ್ಯೆಯ ಆಗಮನ ಎಂದು ಬರೆದುಕೊಂಡಿದ್ದಾರೆ.
ಶ್ರೀಲೀಲಾ ಹಂಚಿಕೊಂಡ ಈ ಫೋಟೊ ಮತ್ತು ಬರೆದುಕೊಂಡ ಸಾಲುಗಳನ್ನು ನೋಡಿದ ಅನೇಕರು ಶ್ರೀಲೀಲಾ ಮತ್ತೊಂದು ಮಗುವನ್ನು ದತ್ತು ಪಡೆದಿದ್ದಾರೆ ಎಂದುಕೊಂಡಿದ್ದಾರೆ. ಶ್ರೀಲೀಲಾ ಅವರ ಈ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆಯೂ ಸೂಚಿಸುತ್ತಿದ್ದಾರೆ. ಮತ್ತೊಂದೆಡೆ ಇದು ಶ್ರೀಲೀಲಾ ದತ್ತು ತೆಗೆದುಕೊಂಡ ಮಗು ಅಲ್ಲ ಬದಲಿಗೆ ಅವರ ಕುಟುಂಬದಲ್ಲಿ/ಸಂಬಂಧಿಕರ ಮನೆಯಲ್ಲಿನ ಹುಟ್ಟಿದ ಮಗು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಮನೆಗೆ ಹೊಸ ಸದಸ್ಯ ಬಂದ ಹಿನ್ನೆಲೆ ಶ್ರೀಲೀಲಾ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಸದ್ಯ ಶ್ರೀಲೀಲಾ ಅವರ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನುಳಿದಂತೆ ಬಹುತೇಕರಿಗೆ ಗೊತ್ತಿರುವಂತೆ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ. ಇದರ ನಡುವೆ ಸಮಾಜಮುಖಿ ಕೆಲಸವನ್ನು ಕೂಡ ಮಾಡುತ್ತಾ ಎಲ್ಲರ ಗಮನ ಸೆಳೆಯುವ, ತಮ್ಮ ಈ ಕೆಲಸಗಳಿಂದ ಅನೇಕರ ಹೃದಯವನ್ನು ಗೆಲ್ಲುವ ಶ್ರೀಲೀಲಾ ಸದ್ಯ ಬಾಲಿವುಡ್‌ನಲ್ಲಿ ಕಾರ್ತಿಕ್ ಆರ್ಯನ್ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಈ ವರ್ಷದ ದೀಪಾವಳಿಗೆ ಈ ಚಿತ್ರ ತೆರೆಗೆ ಬರಲಿದ್ದು ಅನುರಾಗ್ ಬಸು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇನ್ನು ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಕಾರ್ತಿಕ್ ಆರ್ಯನ್ ಆಗಲಿ ಅಥವಾ ಶ್ರೀಲೀಲಾ ಆಗಲಿ ಈ ವಿಚಾರಕ್ಕೆ ಸ್ಪಷ್ಟನೆಯನ್ನು ನೀಡದಿದ್ದರೂ ಕೂಡ ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ಇತ್ತೀಚೆಗೆ ಮಾಧ್ಯಮದವರು ನಿಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು, ಅವರ ಮೇಲೆ ನಿಮಗೆ ಇರುವ ನಿರೀಕ್ಷೆಗಳೇನು ಎಂದು ಕೇಳಿದ ಪ್ರಶ್ನೆಗೆ ನನ್ನ ಮಗನ ಕೈ ಹಿಡಿಯುವ ಹುಡುಗಿ ಒಳ್ಳೆಯ ಡಾಕ್ಟರ್ ಆಗಿರಬೇಕು ಎಂದು ಹೇಳಿದ್ದಾರೆ. ಇದು ನನ್ನ ಬೇಡಿಕೆ ಮಾತ್ರವಲ್ಲ ನಮ್ಮ ಇಡೀ ಕುಟುಂಬದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದಾರೆ.ಹೀಗಾಗಿ ಅನೇಕರು ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಪ್ರೀತಿಯಲ್ಲಿ ಬಿದ್ದಿರುವ ಸುದ್ದಿಯನ್ನು ನಿಜಾ ಎಂದೇ ಅಂದುಕೊಂಡಿದ್ದಾರೆ.


Click it and Unblock the Notifications











