"ನಾನು ಆ ರೀತಿ ಹೇಳಿದ್ರೆ ತೋರ್ಸಿ, ವೈಜಾಗ್‌ನಲ್ಲಿ ಬಟ್ಟೆ ಬಿಚ್ಚಿ ಓಡಾಡ್ತೀನಿ"; ಮತ್ತೆ ಗುಡುಗಿದ ಶ್ರೀರೆಡ್ಡಿ

ಈ ಬಾರಿಯ ಆಂಧ್ರ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಭಾರೀ ಸಂಚಲನ ಸೃಷ್ಟಿಸಿದೆ. ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿಗೆ ಬಹುಮತ ಲಭಿಸಿದೆ. ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಫಲಿತಾಂಶದ ಬಳಿಕ ಆಯಾ ಪಕ್ಷಗಳ ಬೆಂಬಲಿಗರು ವಿಧ ವಿಧ ಹೇಳಿಕೆ ನೀಡುತ್ತಿದ್ದಾರೆ.

ಕೆಲವರು ಮೈತ್ರಿ ಕೂಟ ಗೆಲುವನ್ನು ಸಂಭ್ರಮಿಸಿ ವೈಎಸ್‌ಆರ್‌ಸಿ ಪಕ್ಷದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ, ಮತ್ತೆ ಕೆಲವರು ವೈಎಸ್‌ಆರ್‌ಸಿ ಪಕ್ಷ ಸೋಲಿನ ಬೇಸರದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಟ್ಟಾರೆ ಆರೋಪ ಪ್ರತ್ಯಾರೋಪಗಳು ಜೋರಾಗಿದೆ. ತೆಲುಗು ಕಿರುತೆರೆ ಕಲಾವಿದ, ಹಾಸ್ಯ ನಟ ಕಿರಾಕ್ ಆರ್‌ಪಿ ಜಗನ್ ಸರ್ಕಾರ, ಅಲ್ಲು ಅರ್ಜುನ್, ವೈಎಸ್‌ಆರ್‌ಸಿಪಿ ವಿರುದ್ಧ ಗರಂ ಆಗಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಆತನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

Sri Reddy Breaks Silence On Being Trolled after ysrcp defeat in 2024 election

5 ವರ್ಷಗಳ ಹಿಂದೆ ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ತೆಲುಗು ಚಲನಚಿತ್ರ ವಾಣಿಜ್ಯಮಂಡಳಿ ಮುಂದೆ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ವಿವಾದಾತ್ಮಕ ಹೇಳಿಕೆಗಳಿಂದ ಆಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವನ್ನು ಆಕೆ ಬೆಂಬಲಿಸುತ್ತಾ ಬರುತ್ತಿದ್ದಾರೆ. ತಮ್ಮ ಪಕ್ಷದ ಪರ ಸಾಕಷ್ಟು ಪೋಸ್ಟ್‌ಗಳನ್ನು ಮಾಡಿದ್ದರು. ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೇ ಎನ್ನುವ ಉತ್ಸಾಹದಲ್ಲಿದ್ದರು.

ಚುನಾವಣೆ ಫಲಿತಾಂಶದ ಬಳಿಕ ಕೂಡ ಆಕೆ ಸೈಲೆಂಟ್ ಆಗಿಲ್ಲ. ಹೌದು ನಮ್ಮ ಪಕ್ಷ ಸೋತಿದೆ ಏನೀಗ? ಹಾಗಂತ ನನ್ನ ಬಗ್ಗೆ ಕೆಟ್ಟ ಕೆಟ್ಟ ಟ್ರೋಲ್ ಮಾಡಿದರೆ ಸರಿಯಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. "ವೈಸಿಪಿ ಪಕ್ಷ ಸೋತರೆ ನಾನು ವೈಜಾಗ್ ಬೀಚ್‌ನಲ್ಲಿ ಬೆತ್ತಲಾಗಿ ಓಡಾಡುತ್ತೇನೆ ಎಂದು ಹೇಳಿದ್ದಾಗಿ ಟ್ರೋಲ್ ಮಾಡುತ್ತಿರುವ ಬಗ್ಗೆ ಶ್ರೀರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ನಾನು ಆ ರೀತಿ ಹೇಳಿರುವುದನ್ನು ಸಾಬೀತು ಮಾಡಿದರೆ ನಿಜವಾಗಿ ಬೀಚ್‌ನಲ್ಲಿ ಬೆತ್ತಲಾಗುತ್ತೇನೆ ಎಂದಿದ್ದಾರೆ.

"ಕೆಲವರು ಹೇಳುತ್ತಿದ್ದಾರೆ ವೈಎಸ್‌ಆರ್‌ಪಿ ಪಕ್ಷ ಸೋತರೆ ನಾನು ವೈಜಾಗ್‌ನಲ್ಲಿ ಬೆತ್ತಲಾಗುವುದಾಗಿ ಹೇಳಿದ್ದೀನಿ ಅಂತ. ಆ ರೀತಿ ಹೇಳುವವರಿಗೆ ನನ್ನ ಸವಾಲ್. ನನ್ನ ಸೋಶಿಯಲ್ ಮೀಡಿಯಾದಲ್ಲಿ ಆಗಲಿ, ಬೇರೆ ಎಲ್ಲಾದರೂ ಆಗಲಿ ನಾನು ಆ ರೀತಿ ಹೇಳಿಕೆ ನೀಡಿದ್ದರೆ ತೋರಿಸಿ ನೋಡೋಣ. ನಾವು ಸೋತಿದ್ದೀವಿ ಅಂತ ಹಳೇ ಪೋಸ್ಟ್‌ಗಳನ್ನು ಡಿಲೀಟ್ ಮಾಡಿಲ್ಲ. ಎಲ್ಲಾ ವೀಡಿಯೊಗಳು ಹಾಗೆಯೇ ಇದೆ. ಯಾವುದೇ ಪೋಸ್ಟ್‌ನಲ್ಲಿ ನಾನು ಬೀಚ್‌ನಲ್ಲಿ ಬೆತ್ತಲಾಗುತ್ತೇನೆ ಎಂದು ಹೇಳಿದ್ದರೆ ತೋರಿಸಿ, ನಾನು ನಿಜವಾಗಿಯೂ ಬೆತ್ತಲಾಗುತ್ತೇನೆ" ಎಂದಿದ್ದಾರೆ.

Sri Reddy Breaks Silence On Being Trolled after ysrcp defeat in 2024 election

ಫೇಸ್‌ಬುಕ್ ಲೈವ್ ಬಂದು ಮಾತನಾಡಿರುವದ ಶ್ರೀ ರೆಡ್ಡಿ ಟ್ರೋಲ್ಸ್ ಬಗ್ಗೆ ಕೆಂಡಕಾರಿದ್ದಾರೆ. "ನಾನು ಎಲ್ಲಿಯಾದರೂ ಅಂತಹ ಹೇಳಿಕೆ ನೀಡಿದ್ದರೆ ನನಗೆ ತೋರಿಸಿ. ನನ್ನ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ತೋರಿಸಿ. ಇಲ್ಲದಿರುವಾಗ ಏಕೆ ಮಾತನಾಡಬೇಕು? ನೀವು ಟ್ರೋಲ್ ಮಾಡಲು ನಾನು ನಿಮಗೆ ಸರಿಯಾದ ವ್ಯಕ್ತಿ ಅಲ್ಲ. ಯಾಕಂದರೆ ನನಗೆ ಭಯವಿಲ್ಲ. ಹಾಗೆ ಹೆದರಿದ್ದರೆ ನಿಮ್ಮ ಮುಂದೆ ಧೈರ್ಯವಾಗಿ ನಿಲ್ಲುತ್ತಿರಲಿಲ್ಲ. ಸೋತರೆ ನೋವಾಗುತ್ತದೆ. ನನಗೂ ನೋವಾಗಿದೆ, ನಾನೂ ಮನುಷ್ಯಳೇ ಅಲ್ಲವೇ?" ಎಂದು ಹೇಳಿದ್ದಾರೆ.

"ನಾವು ಚುನಾವಣೆ ಸೋಲಿನ ನೋವಿನಿಂದ ಹೊರ ಬಂದಿದ್ದೇನೆ. ವೈಎಸ್‌ಆರ್‌ ಕಾಂಗ್ರೆಸ್ ಏಕಾಂಗಿಯಾಗಿ ಬಂದು ಶೇ.40 ರಷ್ಟು ಮತಗಳನ್ನು ಪಡೆದಿದೆ. ಅದನ್ನು ಮರೆಯಬೇಡಿ" ಎಂದು ಶ್ರೀರೆಡ್ಡಿ ವಿವರಿಸಿದ್ದಾರೆ.

More from Filmibeat

English summary
Sri Reddy slams trolls after ysrcp defeat in 2024 election
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X