For Quick Alerts
  ALLOW NOTIFICATIONS  
  For Daily Alerts

  'ಆತ ಹುಡುಗಿಯರ ಬ್ರೋಕರ್': ನೀಲಿತಾರೆ ಎಂದ ಸಂಸದನಿಗೆ ನಟಿಯ ತಿರುಗೇಟು

  |

  'ಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ' ಎಂದು ನಟಿ ಶ್ರೀರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘುರಾಮ ಕೃಷ್ಣಂರಾಜುಗೆ ವಿವಾದಾತ್ಮಕ ತಾರೆ ತಿರುಗೇಟು ನೀಡಿದ್ದಾರೆ.

  'ಆತ ರಾಜದ್ರೋಹಿ, ನಂಬಿಕೆ ದ್ರೋಹಿ, ಕಳ್ಳ, ಹುಡುಗಿಯರ ಬ್ರೋಕರ್' ಎಂದು ಫೇಸ್‌ಬುಕ್ ಪೋಸ್ಟ್ ಹಾಕುವ ಮೂಲಕ ಸಂಸದ ರಘುರಾಮ್ ಕೃಷ್ಣಂರಾಜು ವಿರುದ್ಧದ ಸಮರ ಮುಂದುವರಿಸಿದ್ದಾರೆ.

  ಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆ

  ಅಂದ್ಹಾಗೆ, ವೈಎಸ್‌ಆರ್ ಪಕ್ಷದ ಸಂಸದರಾಗಿರುವ ರಘುರಾಮ್ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದಾರೆ.

  ವೈಯಕ್ತಿಕವಾಗಿ ಜಗನ್ ವಿರುದ್ಧ ಹಾಗೂ ಅವರ ಸಮುದಾಯದ ವಿರುದ್ಧ ಟೀಕಿಸಿದ್ದಾರೆ. ಇದನ್ನ ಗಮನಿಸಿದ ನಟಿ ಶ್ರೀರೆಡ್ಡಿ, ಸಂಸದ ರಘುರಾಮ್ ಕೃಷ್ಣಂರಾಜು ವಿರುದ್ಧ ಮುಗಿಬಿದ್ದರು. ಜಗನ್ ಹಾಗೂ ಸಮುದಾಯವನ್ನು ನಿಂದಿಸಿದ್ದಕ್ಕೆ ಆಕ್ರೋಶ ಹೊರಹಾಕಿದರು. ವಿಡಿಯೋ ಮೂಲಕ ಸಂಸದರನ್ನು ತರಾಟೆಗೆ ತೆಗೆದುಕೊಂಡರು.

  ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದ ರಘುರಾಮ್ ಕೃಷ್ಣಂರಾಜು 'ಒಂದು ಸಮುದಾಯಕ್ಕೆ ಬೆಂಬಲ ನೀಡುತ್ತಾ ನನ್ನನ್ನು ನಿಂದಿಸುತ್ತಿರುವ ಬ್ಲೂಫಿಲಂ ನಟಿ ಶ್ರೀರೆಡ್ಡಿ ನೀನು ಎಂಥಹವಳು ಎಂಬುದು ಎಲ್ಲರಿಗೂ ಗೊತ್ತಿದೆ' ಎಂದಿದ್ದರು.

  ಇದಕ್ಕೆ ತಿರುಗೇಟು ನೀಡಿರುವ ಶ್ರೀರೆಡ್ಡಿ, ವೈಎಸ್‌ಆರ್ ಸಂಸದರ ವಿರುದ್ಧ ಸರಣಿ ಪೋಸ್ಟ್‌ಗಳ ಹಾಕುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ''ರಘುರಾಮ್ ಎಂಬ ಎಂಪಿ, ವಿದ್ರಾಹಕ ಶಕ್ತಿ, ರಾಜದ್ರೋಹಿ, ನಂಬಿಕೆ ದ್ರೋಹಿ, ಕುಲ ದ್ರೋಹಿ, ಕಳ್ಳ, ಹುಡುಗಿಯರ ಬ್ರೋಕರ್, ಜಗನ್ ಅಣ್ಣನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ, ನಿಮ್ಮ ಸರ್ವನಾಶವನ್ನ ನೀವೇ ಬರಮಾಡಿಕೊಂಡಿದ್ದೀರಾ'' ಎಂದು ಪೋಸ್ಟ್ ಹಾಕಿದ್ದಾರೆ.

  ಶ್ರೀರೆಡ್ಡಿ ಹಾಕಿರುವ ಪೋಸ್ಟ್‌ಗೆ ವೈಎಸ್‌ಆರ್ ಬೆಂಬಲಿಗರು ಸಪೋರ್ಟ್ ಮಾಡ್ತಿದ್ದಾರೆ.

  ಅಮಿತಾಬ್ ಬಚ್ಚನ್ ಎದುರು ರಘುವೀರ್ ಗೆದ್ದಿದ್ದು ಹೇಗೆ? | Filmibeat Kannada

  ಕೆಲವು ಸಮುದಾಯಗಳ ವಿರುದ್ಧ ದ್ವೇಷದ ಭಾಷಣ ಮತ್ತು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ರಘುರಾಮ್ ಕೃಷ್ಣಂರಾಜು ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

  English summary
  Tollywood Actress Sri Reddy Called 'Girls Broker' To YSR Party MP Raghu Rama Krishnam Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X