twitter
    For Quick Alerts
    ALLOW NOTIFICATIONS  
    For Daily Alerts

    ನಟಿ ನಯನತಾರಾ ಗೆ ಹಲವು ಅಕ್ರಮ ಸಂಬಂಧ ಇದೆ: ಶ್ರೀರೆಡ್ಡಿ ಆರೋಪ

    |

    ನಟಿಯರು ಮತ್ತೊಬ್ಬ ನಟಿಯ ಬಗ್ಗೆ ಅಸೂಯೆ ಪಟ್ಟುಕೊಳ್ಳುವುದು ಸಿನಿಮಾ ರಂಗದಲ್ಲಿ ಸಾಮಾನ್ಯ. ಆದರೆ ಹೀಗೆ ನಟಿಯೊಬ್ಬರ ಚಾರಿತ್ರ್ಯ ಹರಣ ಮಾಡುವ ಪ್ರಯತ್ನಗಳು ನಡೆದಿರುವುದು ಅಪರೂಪ.

    Recommended Video

    ಲೇಡಿ ಸೂಪರ್ ಸ್ಟಾರ್ ಹೆಸರಿನ ಬಗ್ಗೆ ಭಾರೀ ಚರ್ಚೆ | NAYANTARA | SUPERSTAR | ONEINDIA KANNADA

    ಆದರೆ ತೆಲುಗು ಸಿನಿರಂಗದಲ್ಲಿ ಇಂಥಹದ್ದೊಂದು ದುರ್ಘಟನೆ ನಡೆದಿದೆ. ವಿವಾದಿತ ನಟಿ ಶ್ರೀರೆಡ್ಡಿ, ದಕ್ಷಿಣದ ಟಾಪ್ ನಟಿಯರಲ್ಲೊಬ್ಬರು ಎಂದು ಗುರುತಿಸಿಕೊಂಡಿದ್ದ ನಯನತಾರಾ ಚಾರಿತ್ರ್ಯ ಹರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

    ಹಿಂದೆ ಹಲವು ಸ್ಟಾರ್ ನಟರ ಬಗ್ಗೆ ಅಸಭ್ಯವಾಗಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದ ನಟಿ ಶ್ರೀರೆಡ್ಡಿ ಈಗ ನಯನತಾರಾ ಬೆನ್ನು ಬಿದ್ದಿದ್ದಾರೆ. ನಯನತಾರಾ ಬಗ್ಗೆ ಶ್ರೀರೆಡ್ಡಿ ಏನು ಮಾತನಾಡಿದರು ತಿಳಿಯಲು ಮುಂದೆ ಓದಿ...

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗರುವ ಶ್ರಿರೆಡ್ಡಿ

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗರುವ ಶ್ರಿರೆಡ್ಡಿ

    ಶ್ರೀರೆಡ್ಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್, ಸಿನಿಮಾ, ರಾಜಕೀಯ, ಮಹಿಳೆ, ಪುರುಷರು ಇನ್ನಿತರ ವಿಷಯಗಳ ಬಗ್ಗೆ ಏನೇನೋ ಪೋಸ್ಟ್ ಹಾಕಿದ್ದರು. ಮಾಮೂಲಿನಂತೆ ಅವಕ್ಕೆ ಕೆಟ್ಟ ಕಮೆಂಟ್‌ಗಳು ಬಂದಿದ್ದವು.

    ನಯನತಾರಾ ಸಂಬಂಧಗಳ ಬಗ್ಗೆ ಶ್ರೀರೆಡ್ಡಿ ಮಾತು

    ನಯನತಾರಾ ಸಂಬಂಧಗಳ ಬಗ್ಗೆ ಶ್ರೀರೆಡ್ಡಿ ಮಾತು

    ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀರೆಡ್ಡಿ, ನಯನತಾರಾ ಸಹ ಮದುವೆಯಾದವರು, ಮದುವೆ ಆಗದವರ ಜೊತೆ ಸಂಬಂಧಗಳನ್ನು ಇಟ್ಟುಕೊಂಡಿದ್ದಾಳೆ, ಆಕೆಯ ಬಗ್ಗೆ ಮಾತನಾಡುವ ಧಮ್ಮು ನಿಮಗೆ ಇದೆಯಾ ಎಂದು ಕಮೆಂಟ್ ಮಾಡಿದ ಟ್ರೋಲ್‌ಗಳನ್ನು ಪ್ರಶ್ನೆ ಮಾಡಿದ್ದಾರೆ.

    ಖಡಕ್ ಉತ್ತರ ಕೊಟ್ಟ ಶ್ರೀರೆಡ್ಡಿ

    ಖಡಕ್ ಉತ್ತರ ಕೊಟ್ಟ ಶ್ರೀರೆಡ್ಡಿ

    ಅಷ್ಟೆ ಅಲ್ಲದೆ, ತನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೂ ಖಡಕ್ ಉತ್ತರ ಕೊಟ್ಟಿರುವ ಶ್ರೀರೆಡ್ಡಿ, 'ನನ್ನ ಲೈಂಗಿಕ ಜೀವನ ನನ್ನಿಷ್ಟ, ನನಗೆ ಬೇಕಾದಂತೆ ಬದುಕುತ್ತೇನೆ', ಬಿಲದಲ್ಲಿ ಕೂತಿರುವ ಇಲಿಗಳು ನೀವು, ದಮ್ಮಿದ್ದರೆ ನನ್ನೆದುರು ಬಂದು ಮಾತನಾಡಿ' ಎಂದು ಶ್ರೀರೆಡ್ಡಿ ಪೋಸ್ಟ್ ಹಾಕಿದ್ದಾರೆ.

    ವಿವಾದಗಳಿಂದಲೇ ಖ್ಯಾತರು ಶ್ರೀರೆಡ್ಡಿ

    ವಿವಾದಗಳಿಂದಲೇ ಖ್ಯಾತರು ಶ್ರೀರೆಡ್ಡಿ

    ಶ್ರೀರೆಡ್ಡಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಖ್ಯಾತರು. ಈ ಮುಂಚೆ ಧನುಶ್, ಅನಿರುದ್ಧ, ರವಿತೇಜ ಸೇರಿದಂತೆ ಹಲವು ಪ್ರಮುಖ ನಟರ ವಿರುದ್ಧ ಆರೋಪ ಮಾಡಿದ್ದರು. ಈಗ ನಯನತಾರಾ ವಿರುದ್ಧ ಕೀಳು ಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ.

    English summary
    Sri Reddy controversial comments on Nayanthara. She said Nayanthara had relations with many people.
    Tuesday, April 21, 2020, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X