For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗದ ನಾಲ್ಕು ಆಧಾರ ಸ್ತಂಭಗಳು: ಶ್ರೀರೆಡ್ಡಿ ಹೆಸರಿಸಿದ ನಟರ್‍ಯಾರು?

  |

  ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಖ್ಯೆ ಬೆರಳೆಣಿಕೆಗೆ ಬರುವುದಿಲ್ಲ. ಅಷ್ಟೊಂದು ಮಾಸ್-ಕ್ಲಾಸ್ ಹೀರೋಗಳು ಅಲ್ಲಿದ್ದಾರೆ. ಆದರೆ ನಟಿ ಶ್ರೀರೆಡ್ಡಿ ಕೇವಲ ನಾಲ್ಕು ಮಂದಿ ನಟರು ಮಾತ್ರವೇ ತೆಲುಗು ಚಿತ್ರರಂಗದ ಪಕ್ಕಾ ಸ್ಟಾರ್‌ಗಳು ಎಂದಿದ್ದಾರೆ.

  ವಿವಾದಗಳಿಂದಲೇ ಖ್ಯಾತಿಯಲ್ಲಿರುವ ನಟಿ ಶ್ರೀರೆಡ್ಡಿ ಮಾತುಗಳಿಗೆ ಹೆಚ್ಚೇನು ಮೌಲ್ಯ ಕೊಡಲಾಗುತ್ತಿರಲಿಲ್ಲ. ಆದರೆ ಈ ಬಾರಿ ಏಕೋ ಶ್ರೀರೆಡ್ಡಿ ಮಾತಿಗೆ ತುಸು ಮೌಲ್ಯ ಸಿಕ್ಕಿಬಿಟ್ಟಿದೆ. ಅದಕ್ಕೆ ಕಾರಣ ಶ್ರೀರೆಡ್ಡಿ ಮಾತುಗಳು ತೆಲುಗಿನ ಕೆಲವು ಸ್ಟಾರ್‌ ನಟರ ಅಭಿಮಾನಿಗಳ ನಡುವೆ ಚರ್ಚೆ ಹುಟ್ಟುಹಾಕಿದೆ.

  ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಶ್ರೀರೆಡ್ಡಿ, 'ಮಹೇಶ್ ಬಾಬು, ಜೂ.ಎನ್‌ಟಿಆರ್, ಪ್ರಭಾಸ್ ಮತ್ತು ವಿಜಯ್ ದೇವರಕೊಂಡ' ಮಾತ್ರವೇ ತೆಲುಗು ಸಿನಿಮಾರಂಗದ ಆಧಾರ ಸ್ತಂಭಗಳು. ಇನ್ನೆಲ್ಲ ನಟರು ಇನ್ನೂ ಬಚ್ಚಾಗಳು ಎಂದಿದ್ದಾರೆ.

  ಉಳಿದ ನಟರು ಪಕ್ಕಕ್ಕೆ ಹೋಗಿ ಆಡಿಕೊಳ್ಳಿ: ಶ್ರೀರೆಡ್ಡಿ

  ಉಳಿದ ನಟರು ಪಕ್ಕಕ್ಕೆ ಹೋಗಿ ಆಡಿಕೊಳ್ಳಿ: ಶ್ರೀರೆಡ್ಡಿ

  'ಮಹೇಶ್ ಬಾಬು, ಜೂ.ಎನ್‌ಟಿಆರ್, ಪ್ರಭಾಸ್, ವಿಜಯ್ ದೇವರಕೊಂಡ ಬಿಟ್ಟು ಇನ್ನೆಲ್ಲ ನಟರೂ ಪಕ್ಕಕ್ಕೆ ಓಡಿ ಆಡಿಕೊಳ್ಳಿ' ಎಂದಿದ್ದಾರೆ ಶ್ರೀರೆಡ್ಡಿ. ನಟಿಯ ಈ ಮಾತಿಗೆ ಉಳಿದ ನಾಯಕ ನಟರ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಶ್ರೀರೆಡ್ಡಿ ವಿಡಿಯೋಕ್ಕೆ ಕೆಟ್ಟ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಕೆಲವರು ಶ್ರೀರೆಡ್ಡಿ ಧೈರ್ಯಕ್ಕೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

  ಮತ್ತೊಬ್ಬ ಯುವನಟನನ್ನು ಹೆಸರಿಸಿದ ಶ್ರೀರೆಡ್ಡಿ

  ಮತ್ತೊಬ್ಬ ಯುವನಟನನ್ನು ಹೆಸರಿಸಿದ ಶ್ರೀರೆಡ್ಡಿ

  ವಿಡಿಯೋದಲ್ಲಿ ತೆಲುಗು ಸಿನಿಮಾರಂಗದ ನಾಲ್ವರು ಆಧಾರ ಸ್ತಂಭಗಳ ಹೆಸರು ಹೇಳಿದ ಶ್ರೀರೆಡ್ಡಿ ಕಮೆಂಟ್‌ನಲ್ಲಿ ಮತ್ತೊಬ್ಬ ಯುವನಟ ಸಹ ಆಧಾರ ಸ್ತಂಭವಾಗುವ ಹಾದಿಯಲ್ಲಿದ್ದಾರೆ ಎಂದಿದ್ದಾರೆ. ಅವರೇ ನವೀನ್ ಪೋಲಿಶೆಟ್ಟಿ. ಇತ್ತೀಚೆಗಷ್ಟೆ ನವೀನ್ ನಟನೆಯ 'ಜಾತಿರತ್ನಾಲು' ಸಿನಿಮಾ ಬಿಡುಗಡೆ ಆಗಿದ್ದು, ಸಖತ್ ಹಿಟ್ ಆಗಿದೆ.

  ಶ್ರೀರೆಡ್ಡಿಗೆ ವಿವಾದಗಳು ಹೊಸದಲ್ಲ

  ಶ್ರೀರೆಡ್ಡಿಗೆ ವಿವಾದಗಳು ಹೊಸದಲ್ಲ

  ಶ್ರೀರೆಡ್ಡಿಗೆ ವಿವಾದಗಳು ಹೊಸದಲ್ಲ. ತೆಲುಗು ಚಿತ್ರರಂಗದ ಕೆಲವರ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ ಹಿಂಸೆ ಆರೋಪ ಹೊರಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು ಶ್ರೀರೆಡ್ಡಿ. ತೆಲುಗು ಉದ್ಯಮದ ಹಲವು ನಟ-ನಟಿಯರ ವಿರುದ್ಧ ಗಂಭೀರ ಆರೋಪಗಳನ್ನು ಸಹ ಮಾಡಿದ್ದರು. ಶ್ರೀರೆಡ್ಡಿ ಮೇಲೆ ತೆಲುಗು ಸಿನಿಮಾ ನಟರ ಸಂಘವು ನಿಷೇಧ ಹೇರಿತ್ತು. ಆ ನಂತರ ಈ ನಿಷೇಧವನ್ನು ಹಿಂಪಡೆಯಲಾಯಿತು.

  ಸಮಂತಾ, ತ್ರಿಶಾ ವಿರುದ್ಧ ಕೀಳು ಕಮೆಂಟ್

  ಸಮಂತಾ, ತ್ರಿಶಾ ವಿರುದ್ಧ ಕೀಳು ಕಮೆಂಟ್

  ನಟಿ ಶ್ರೀರೆಡ್ಡಿಯು ಆಗಾಗ್ಗೆ ಚಿರಂಜೀವಿ ಕುಟುಂಬದ ನಟರು, ವಿಶೇಷವಾಗಿ ಪವನ್ ಕಲ್ಯಾಣ್ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ. ಸಮಂತಾ ಅಕ್ಕಿನೇನಿ, ತ್ರಿಶಾ ಇನ್ನಿತರ ನಟಿಯರ ವಿರುದ್ಧ ಕೀಳು ಕಮೆಂಟ್‌ಗಳನ್ನು ಸಹ ಶ್ರೀರೆಡ್ಡಿ ಈ ಹಿಂದೆ ಮಾಡಿದ್ದರು.

  English summary
  Actress Sri Reddy said Mahesh Babu, Prabhas, Jr NTR and Vijay Devarkonda are the pillars of Telugu movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X