For Quick Alerts
  ALLOW NOTIFICATIONS  
  For Daily Alerts

  ಪವನ್‌ ಕಲ್ಯಾಣ್ ಬೆಡ್‌ ಪಕ್ಕ ಯಾರಿದು ಗ್ಲಾಮರಸ್ ಬಾಲೆ

  |

  ನಟ, ರಾಜಕಾರಣಿ ಪವನ್ ಕಲ್ಯಾಣ್‌ಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್ ಕಲ್ಯಾಣ್‌ ಮೂಗಿಗೆ ಆಮ್ಲಜನಕದ ನಳಿಕೆ ಏರಿಸಿಕೊಂಡು ಬೆಡ್‌ ಮೇಲೆ ಮಲಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ಆದರೆ ಇಂದು ಅದೇ ಚಿತ್ರದಲ್ಲಿ ಪವನ್ ಕಲ್ಯಾಣ್ ಬೆಡ್‌ ಪಕ್ಕ ಗ್ಲಾಮರಸ್ ಚೆಲುವೆಯೊಬ್ಬಳು ಸಿಗರೇಟು ಹಿಡಿದುಕೊಂಡು ಕೂತಿರುವ ಚಿತ್ರ ಹರಿದಾಡಲು ಆರಂಭಿಸಿದೆ. ಯಾರು ಆ ಬಾಲೆ, ಪವನ್ ಬೆಡ್‌ ಕೂತು ಏನು ಮಾಡುತ್ತಿದ್ದಾಳೆ ಎಂದು ಪವನ್ ಅಭಿಮಾನಿಗಳು ತಲೆ ಕರೆದುಕೊಳ್ಳುತ್ತಿದ್ದಾರೆ.

  ಆದರೆ ಅದು ಫೊಟೊಶಾಪ್ ಚಿತ್ರ, ಪವನ್ ಪಕ್ಕ ಕೂತಿರುವ ಚೆಲುವೆ ತೆಲುಗಿನ ವಿವಾದಾತ್ಮಕ ನಟಿ ಶ್ರೀರೆಡ್ಡಿ. ಹೀಗೆ ಫೊಟೊಶಾಪ್ ಮಾಡಿರುವ ಚಿತ್ರವನ್ನು ಹರಿಬಿಟ್ಟಿರುವುದು ಸ್ವತಃ ನಟಿ ಶ್ರೀರೆಡ್ಡಿಯೇ. ಈಗ ಈ ನಕಲಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಚಿತ್ರದ ಜೊತೆಗೆ ಪವನ್ ಬಗ್ಗೆ ವಿಡಿಯೋ ಒಂದನ್ನು ಸಹ ಅಪ್‌ಲೋಡ್ ಮಾಡಿದ್ದಾರೆ ಶ್ರೀರೆಡ್ಡಿ.

  ರಾಮ್ ಗೋಪಾಲ್ ವರ್ಮಾ ನನ್ನನ್ನು ನಿಯೋಜಿಸಿದ್ದಾರೆ: ಶ್ರೀರೆಡ್ಡಿ

  ರಾಮ್ ಗೋಪಾಲ್ ವರ್ಮಾ ನನ್ನನ್ನು ನಿಯೋಜಿಸಿದ್ದಾರೆ: ಶ್ರೀರೆಡ್ಡಿ

  ತಾನು ಪವನ್ ಬೆಡ್ ಪಕ್ಕ ಕೂತಿರುವಂತೆ ಫೊಟೊಶಾಪ್ ಮಾಡಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಶ್ರೀರೆಡ್ಡಿ, 'ರಾಮ್ ಗೋಪಾಲ್ ವರ್ಮಾ ಅವರು ನನ್ನನ್ನು ಇಲ್ಲಿ ಕೆಲಸಕ್ಕೆ ನಿಯೋಜಿಸಿದ್ದಾರೆ. ನಾನು ಪವನ್ ಕಲ್ಯಾಣ್ ಕಾಲು ಒತ್ತಿ ಋಣ ತೀರಿಸುತ್ತೇನೆ. ಆದರೆ ಮೂಗು ಮಾತ್ರ ಒತ್ತುವುದಿಲ್ಲ ಮೊದಲೇ ಉಸಿರಾಡಲು ಕಷ್ಟವಂತೆ' ಎಂದು ವ್ಯಂಗ್ಯ ಮಾಡಿದ್ದಾರೆ ಶ್ರೀರೆಡ್ಡಿ.

  ನಾಟಕ ಕಂಪೆನಿಯ ಹುಡುಗರು ತಪ್ಪಿಸಿಕೊಂಡಿದ್ದಾರೆ: ಶ್ರೀರೆಡ್ಡಿ

  ನಾಟಕ ಕಂಪೆನಿಯ ಹುಡುಗರು ತಪ್ಪಿಸಿಕೊಂಡಿದ್ದಾರೆ: ಶ್ರೀರೆಡ್ಡಿ

  ಚಿತ್ರವೇ ಅಲ್ಲದೆ ವಿಡಿಯೋ ಒಂದನ್ನು ಸಹ ಹರಿಬಿಟ್ಟಿದ್ದಾರೆ ಶ್ರೀರೆಡ್ಡಿ, 'ನಮ್ಮದು ನಾಟಕ ಕಂಪೆನಿ ಇದೆ ಅದರಲ್ಲಿ ಬಂಡೆದ್ದುಲ ಗಣೇಶ್ ಮತ್ತು ಪವನ್‌ ಎಂಬ ಇಬ್ಬರು ಕೆಲಸದವರಿದ್ದರು. ಅದರಲ್ಲಿ ಬಂಡೆದ್ದುಲ ಗಣೇಶ್‌ಗೆ ಮೊದಲು ಕೋವಿಡ್ ಜ್ವರ ಬಂತು. ಅವನೇ ಪವನ್‌ ಅನ್ನು ಹಾಳು ಮಾಡಿದ. ಈಗ ಇಬ್ಬರೂ ಎಲ್ಲಿಗೋ ಹೋಗಿಬಿಟ್ಟಿದ್ದಾರೆ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ' ಎಂದಿದ್ದಾರೆ ಶ್ರೀರೆಡ್ಡಿ.

  'ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಅವನಿಗಾಗಿ ಕಾಯುತ್ತಿದ್ದೇನೆ'

  'ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಅವನಿಗಾಗಿ ಕಾಯುತ್ತಿದ್ದೇನೆ'

  'ಪವನ್‌ಗೆ ಹುಡುಗೀರ ಹುಚ್ಚು ಬೇರೆ ಇದೆ ಈಗಾಗಲೇ ನಾಲ್ಕು ಮದುವೆ ಆಗಿದ್ದಾನೆ. ನನ್ನನ್ನೂ ಮದುವೆ ಆಗುವಂತೆ ಕೇಳಿದ್ದ. ಇವನಿಗೆ ಈ ಹುಡುಗೀರ ಹುಚ್ಚು ಹಿಡಿಯಲು ಆ ಬಂಡೆದ್ದುಲ ಗಣೇಶ್ ಕಾರಣ. ಪವನ್‌ ನಾಲ್ಕನೇ ಮದುವೆ ಮಾಡಿಸಿದ್ದೆ ಗಣೇಶ್. ನನ್ನನ್ನು ಐದನೇ ಮದುವೆ ಆಗುವುದಾಗಿ ಹೇಳಿದ್ದ ಆ ಪವನ್, ಈಗ ಅವನಿಗಾಗಿ ಕಾಯುತ್ತಿದ್ದೇನೆ, ನನಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ' ಎಂದು ನಾಟಕೀಯವಾಗಿ ಅಳುತ್ತಾ ಗೋಗರೆದಿದ್ದಾರೆ ಶ್ರೀರೆಡ್ಡಿ.

  ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ದರ್ಶನ್ ಸಫಾರಿ | Filmibeat Kannada
  ಪವನ್‌ಗೆ ರಾಜಕೀಯ ಹುಚ್ಚು ಬೇರೆ ಹಿಡಿದಿದೆ: ಶ್ರೀರೆಡ್ಡಿ

  ಪವನ್‌ಗೆ ರಾಜಕೀಯ ಹುಚ್ಚು ಬೇರೆ ಹಿಡಿದಿದೆ: ಶ್ರೀರೆಡ್ಡಿ

  'ಈ ಪವನ್‌ಗೆ ಇತ್ತೀಚೆಗೆ ರಾಜಕೀಯ ಹುಚ್ಚು ಬೇರೆ ಹಿಡಿದಿದೆ. ತಿರುಪತಿಯಲ್ಲಿ ಚುನಾವಣೆ ನಡೆಯುತ್ತಿದೆ ಅಲ್ಲಿ ಹೋಗಿ ಏನೇನೋ ನಾಟಕ ಮಾಡುತ್ತಿದ್ದಾನೆ. ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ಕೊರೊನಾ ಇಲ್ಲದಿದ್ದರೂ ನಕಲಿ ಫೋಟೊಶೂಟ್‌ಗಳನ್ನು ಮಾಡಿಸಿಕೊಂಡಿದ್ದಾನೆ. ಇವನಿಗೆ ದಯವಿಟ್ಟು ವೋಟು ಹಾಕಬೇಡಿ. ಈ ಪವನ್ ಹಾಗೂ ಗಣೇಶ್ ನಿಮಗೇನಾದರೂ ಸಿಕ್ಕರೆ ನನಗೆ ತಿಳಿಸಿ ಅವರನ್ನು ನಂಬಿಕೊಂಡೇ ಡ್ರಾಮಾ ಕಂಪೆನಿ ತೆರೆದಿದ್ದೇನೆ' ಎಂದು ನಾಟಕೀಯವಾಗಿ ಮನವಿ ಮಾಡಿದ್ದಾರೆ ಶ್ರೀರೆಡ್ಡಿ.

  English summary
  Actress Sri Reddy photoshopped photo Pawan Kalyan lying on bed. She placed her photo beside of Pawan Kalyan's bed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X