ರಾಣಾ ದಗ್ಗುಬಾಟಿ ಲವ್ ಸ್ಟೋರಿ ಬಗ್ಗೆ ಶ್ರೀ ರೆಡ್ಡಿ ಕಮೆಂಟ್‌

ನಟ ರಾಣಾ ದಗ್ಗುಬಾಟಿ ತಮ್ಮ ಪ್ರೀತಿಯ ಹುಡುಗಿ ಬಗ್ಗೆ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 'ಮಿಹಿಕಾ ಬಜಾಜ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ' ಎಂದು ರಾಣಾ ದಗ್ಗುಬಾಟಿ ಹೇಳಿದ್ದರು.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

ರಾಣಾ ದಗ್ಗುಬಾಟಿ ಅವರು ಮದುವೆ ಆಗುವ ನಿರ್ಧಾರ ಪ್ರಕಟಿಸಿದ್ದಕ್ಕೆ ತೆಲುಗು ಚಿತ್ರರಂಗದ ಗಣ್ಯರು, ಬೇರೆ ಭಾಷೆಯ ಚಿತ್ರ ನಟ-ನಟಿಯರೂ ಸಹ ರಾಣಾ ದಗ್ಗುಬಾಟಿಗೆ ಶುಭಾಶಯ ಹೇಳಿದ್ದರು.

ನಟ-ನಟಿಯರ ಬಗ್ಗೆ, ಅವರ ಸಂಬಂಧಗಳ ಬಗ್ಗೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಶ್ರೀರೆಡ್ಡಿ, ರಾಣಾ ದಗ್ಗುಬಾಟಿ ಮತ್ತು ಪ್ರೇಯಸಿ ವಿಹಿಕಾ ಬಜಾಬ್ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಎಲ್ಲರ ಹುಬ್ಬೇರಿಸಿದೆ.

ಪಾಸಿಟಿವ್ ಪೋಸ್ಟ್ ಹಾಕಿದ ಶ್ರೀ ರೆಡ್ಡಿ

ಪಾಸಿಟಿವ್ ಪೋಸ್ಟ್ ಹಾಕಿದ ಶ್ರೀ ರೆಡ್ಡಿ

ರಾಣಾ ದಗ್ಗುಬಾಟಿ ನಿಮಗೆ ಜೀವನದಲ್ಲಿ ಏನೇನು ಅನುಭವಿಸಿದ್ದೀರಿ ಎಂದು ನನಗೆ ಗೊತ್ತಿದೆ. ಈಕೆಯೊಂದಿಗಾದರೂ ಶಾಂತಿ-ನೆಮ್ಮಿದಯಿಂದ ಜೀವನ ಸಾಗಿಸಿ ಎಂದು ಶ್ರೀರೆಡ್ಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ರಾಮಾ ನಾಯ್ಡು ಸ್ಟುಡಿಯೋ ಬಗ್ಗೆ ಕಮೆಂಟ್‌

ರಾಮಾ ನಾಯ್ಡು ಸ್ಟುಡಿಯೋ ಬಗ್ಗೆ ಕಮೆಂಟ್‌

ಈ ಹಿಂದೆ ರಾಣಾ ದಗ್ಗುಬಾಟಿ ಕುಟುಂಬಕ್ಕೆ ಸೇರಿದವರ ಮೇಲೆಯೇ ಆರೋಪಗಳನ್ನು ಮಾಡಿದ್ದರು ಶ್ರೀ ರೆಡ್ಡಿ. 'ನನ್ನ ಮೊದಲ ರಾತ್ರಿ ನಡೆದಿದ್ದು ರಾಮಾ ನಾಯ್ಡು ಸ್ಟುಡಿಯೋದಲ್ಲಿ' ಎಂದು ಸಹ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ತ್ರಿಶಾ-ರಾಣಾ ದಗ್ಗುಬಾಟಿ ಬಗ್ಗೆ ಮಾತು

ತ್ರಿಶಾ-ರಾಣಾ ದಗ್ಗುಬಾಟಿ ಬಗ್ಗೆ ಮಾತು

ರಾಣಾ ದಗ್ಗುಬಾಟಿ ಬಗ್ಗೆ ಈ ಹಿಂದೆಯೂ ಶ್ರೀ ರೆಡ್ಡಿ ಮಾತನಾಡಿದ್ದರು. ತ್ರಿಶಾ ಮತ್ತು ರಾಣಾ ದಗ್ಗುಬಾಟಿ ತೀವ್ರವಾಗಿ ಪ್ರೀತಿಸುತ್ತಿದ್ದರು. ಆದರೆ ಆ ನಂತರ ತ್ರಿಶಾ, ದಗ್ಗುಬಾಟಿಗೆ ಕೈ ಕೊಟ್ಟರು ಎಂದೆಲ್ಲಾ ಶ್ರೀ ರೆಡ್ಡಿ ಆಗ ಹೇಳಿದ್ದರು.

ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ

ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಶ್ರೀ ರೆಡ್ಡಿ, ತಮಿಳು ನಟ ಧನುಶ್, ಅನಿರುದ್ಧ ಹಲವು ಸ್ಟಾರ್ ನಟ-ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಬೆತ್ತಲೆ ಪ್ರತಿಭಟನೆಯನ್ನೂ ಸಹ ಮಾಡಿದ್ದರು.

More from Filmibeat

English summary
Sri Reddy wrote post about Rana Daggubati and his girl friend on Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X