For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಿನಿಮಾ ಆಗುತ್ತಿದೆ ಸಿಲ್ಕ್ ಸ್ಮಿತಾ ಜೀವನ: ನಾಯಕಿಯಾಗಿ ವಿವಾದಿತ ನಟಿ

  |

  ಸಿಲ್ಕ್ ಸ್ಮಿತಾ ಜೀವನ ಕುರಿತಂತೆ ಮತ್ತೊಂದು ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಪಾತ್ರಕ್ಕೆ ತೆಲುಗಿನ ವಿವಾದಿತ ನಟಿಯನ್ನು ಆಯ್ಕೆ ಮಾಡಲಾಗಿದೆ.

  ಸ್ಟಾರ್ ನಟರು, ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ಬೆತ್ತಲೆ ಪ್ರತಿಭಟನೆ ನಡೆಸಿ ಭಾರಿ ಸುದ್ದಿಯಾಗಿದ್ದ ನಟಿ ಶ್ರೀರೆಡ್ಡಿ, ಸಿಲ್ಸ್ ಸ್ಮಿತಾ ಪಾತ್ರ ನಿರ್ವಹಿಸಲಿದ್ದಾರೆ. ಈ ಸುದ್ದಿಯನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಸಿಲ್ಕ್ ಸ್ಮಿತಾ ಆಗಲಿದ್ದಾರೆ ಶ್ರೀರೆಡ್ಡಿ, ನಾನು ಸಿಲ್ಕ್ ಸ್ಮಿತಾ ಗೆ ಸರಿಸಮವಲ್ಲ ಆದರೆ ಅವರಂತೆ ಆಗಲು ಪ್ರಯತ್ನಿಸುತ್ತೇನೆ' ಎಂದಿದ್ದಾರೆ ಶ್ರೀರೆಡ್ಡಿ. ಜೊತೆಗೆ ತಮ್ಮ ಹಾಗೂ ಸಿಲ್ಕ್ ಸ್ಮಿತಾ ಚಿತ್ರಗಳನ್ನು ಒಟ್ಟಿಗೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

  ಶ್ರೀರೆಡ್ಡಿ ನಟಿಸಲಿರುವ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಒಟ್ಟಿಗೆ ನಿರ್ಮಾಣವಾಗಲಿದ್ದು, ಸಿನಿಮಾವನ್ನು ಮಧು ಎಂಬುವರು ನಿರ್ದೇಶಿಸಲಿದ್ದಾರೆ.

  ಈ ಹಿಂದೆ ಸಿಲ್ಕ್ ಸ್ಮಿತಾ ಜೀವನ ಆಧರಿಸಿ 'ದಿ ಡರ್ಟಿ ಪಿಕ್ಚರ್' ಎಂಬ ಸಿನಿಮಾ ಬಾಲಿವುಡ್ ನಲ್ಲಿ ನಿರ್ಮಾಣವಾಗಿತ್ತು. ಸಿನಿಮಾದಲ್ಲಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು.

  ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

  ಸಿಲ್ಕ್ ಸ್ಮಿತಾ ಪ್ರಖ್ಯಾತ ನಟಿ, ಐಟಂ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲಿ ಹಲವು ಏಳು-ಬೀಳು ಕಂಡ ಅವರು ಕುಡಿತದ ದಾಸಿಯಾಗಿದ್ದರು. ಕೊನೆಗೆ ತಮ್ಮ 35 ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾದರು.

  English summary
  Telugu actress Sri Reddy acting as Silk Smitha in her upcoming movie. This movie will be directed by Madhu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X