For Quick Alerts
  ALLOW NOTIFICATIONS  
  For Daily Alerts

  ಈ ನಿರ್ದೇಶಕನ ಜೊತೆ ಡೇಟಿಂಗ್ ಮಾಡಬೇಕಂತೆ ಶ್ರೀರೆಡ್ಡಿ

  |

  ಕಾಸ್ಟಿಂಗ್ ಕೌಚ್ ಅಭಿಯಾನದ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದ್ದ ನಟಿ ಶ್ರೀರೆಡ್ಡಿ ನಿರ್ದೇಶಕರೊಬ್ಬರಿಗೆ ಡೇಟಿಂಗ್ ಹೋಗೋಣ ಎಂದು ಆಫರ್ ನೀಡಿದ್ದಾರೆ.

  ತೆಲುಗು ಸ್ಟಾರ್ ನಟರು, ನಿರ್ಮಾಪಕರು, ನಿರ್ಮಾಪಕರ ಮಕ್ಕಳು ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ಇಂಡಸ್ಟ್ರಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ದಿನಕ್ಕೊಂದು ಟ್ವೀಟ್, ಪೋಸ್ಟ್ ಹಾಕುವ ಮೂಲಕ ಅವರ ಅಭಿಮಾನಿಗಳನ್ನು ಕೆಣಕುತ್ತಿದ್ದಾರೆ.

  ನಟ ಪವನ್ ಕಲ್ಯಾಣ್ ಕುರಿತು ಶ್ರೀರೆಡ್ಡಿ ಅಸಭ್ಯ ಪೋಸ್ಟ್ನಟ ಪವನ್ ಕಲ್ಯಾಣ್ ಕುರಿತು ಶ್ರೀರೆಡ್ಡಿ ಅಸಭ್ಯ ಪೋಸ್ಟ್

  ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆ ಡೇಟಿಂಗ್ ಮಾಡಬೇಕು ಎಂದು ಪೋಸ್ಟ್ ಹಾಕಿ ಚರ್ಚೆಗೆ ಕಾರಣವಾಗಿದ್ದಾರೆ. ಅಂದ್ಹಾಗೆ, ವರ್ಮಾ ಅವರಿಗೂ ಶ್ರೀರೆಡ್ಡಿ ಅಂದ್ರೆ ಸಾಫ್ಟ್ ಕಾರ್ನರ್. ಈ ಹಿಂದೆ ಶ್ರೀರೆಡ್ಡಿ ಮಾಡಿದ್ದ ಕಾಸ್ಟಿಂಗ್ ಕೌಚ್ ಆರೋಪಗಳ ಬಗ್ಗೆ ಆರ್.ಜಿ.ವಿ ಬೆಂಬಲ ನೀಡಿದ್ದರು.

  'ಕ್ರಿಕೆಟ್ ದೇವರ'ನ್ನು ಬಿಡಲಿಲ್ಲ ಶ್ರೀರೆಡ್ಡಿ: ರೊಚ್ಚಿಗೆದ್ದ ಸಚಿನ್ ಅಭಿಮಾನಿಗಳು'ಕ್ರಿಕೆಟ್ ದೇವರ'ನ್ನು ಬಿಡಲಿಲ್ಲ ಶ್ರೀರೆಡ್ಡಿ: ರೊಚ್ಚಿಗೆದ್ದ ಸಚಿನ್ ಅಭಿಮಾನಿಗಳು

  ಸದ್ಯ ರಾಮ್ ಗೋಪಾಲ್ ವರ್ಮಾ ಅವರು ಆಂಧ್ರಪ್ರದೇಶ ರಾಜಕೀಯವನ್ನು ಟಾರ್ಗೆಟ್ ಮಾಡಿದ್ದು, 'ಕಮ್ಮರಾಜ್ಯಂಲ್ಲೋ ಕಡಪ ರೆಡ್ಡಲು' ಸಿನಿಮಾ ಮಾಡಿದ್ದಾರೆ. ಚಂದ್ರಬಾಬು ನಾಯ್ಡು, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಹಲವರ ಬಗ್ಗೆ ಈ ಸಿನಿಮಾದಲ್ಲಿ ಅನೇಕ ವಿಷ್ಯಗಳನ್ನು ಪ್ರಸ್ತಾಪಪಿಸಿದ್ದಾರೆ.

  ಇದೀಗ, ಶ್ರೀರೆಡ್ಡಿ ಕೊಟ್ಟಿರುವ ಆಫರ್ ಸ್ವೀಕರಿಸಿ ಆ ನಟಿ ಜೊತೆ ಡೇಟಿಂಗ್ ಹೋಗ್ತಾರಾ? ಎಂಬುದು ಕುತೂಹಲ ಮೂಡಿಸಿದೆ. ಶ್ರೀರೆಡ್ಡಿ ಜೊತೆ ಆರ್.ಜಿ.ವಿ ಪಕ್ಕಾ ಡೇಟಿಂಗ್ ಹೋಗ್ತಾರೆ ಎನ್ನುವುದು ಅಭಿಮಾನಿಗಳು ನಿರೀಕ್ಷೆಯಾಗಿದೆ. ಏನಾಗುತ್ತೆ ಕಾದುನೋಡೋಣ.

  English summary
  Casting couch fame telugu actress Sri Reddy want to date with director ram gopal varma

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X