ವೇದಿಕೆಯಲ್ಲಿ ರೀನಾಗೆ ಚಮಕ್ ಕೊಟ್ಟು ತಗ್ಲಾಕಿಕೊಂಡ ಭದ್ರ!
'KGF' ಸರಣಿ ಸಿನಿಮಾಗಳಲ್ಲಿ ರೀನಾ ನಟಿಸಿ ಗೆದ್ದ ಚೆಲುವೆ ಶ್ರೀನಿಧಿ ಶೆಟ್ಟಿ ಬಳಿಕ ಸೈಲೆಂಟ್ ಆಗಿದ್ದರು. ಸದ್ಯ ಆಕೆ ನಟಿಸಿರುವ ತೆಲುಗಿನ 'ಹಿಟ್- 3' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರವೇ ಸಿನಿಮಾ ತೆರೆಗೆ ಬರ್ತಿದ್ದು ಪ್ರಮೋಷನ್ ಜೋರಾಗಿದೆ. ಚಿತ್ರದ ಪ್ರೀ ರಿಲೀಸ್ ವೇಳೆ ಶ್ರೀನಿಧಿಗೆ ಅಡವಿ ಶೇಷ್ ಚಮಕ್ ಕೊಟ್ಟಿದ್ದಾರೆ.
ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಹಿಟ್- 3' ಚಿತ್ರದ ನಾನಿ ಹೀರೊ ಆಗಿ ಅಬ್ಬರಿಸಿದ್ದಾರೆ. IPS ಅರ್ಜುನ್ ಸರ್ಕಾರ್ ಪಾತ್ರದಲ್ಲಿ ಮಿಂಚಿದ್ದಾರೆ. ಆತನ ಪ್ರೇಯಸಿ ಮೃದುಲಾ ಆಗಿ ಶ್ರೀನಿಧಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೇಲೆ ಬಹಳ ಭರವಸೆ ಇಟ್ಟುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು.

'ಹಿಟ್' ಸರಣಿಯ ಹಿಂದಿನ ಎರಡು ಚಿತ್ರಗಳು ಗೆದ್ದಿವೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಮೂಡಿದೆ. ಲಾಂಗ್ ವೀಕೆಂಡ್ ನೋಡಿ ಈ ವಾರ ಸಿನಿಮಾ ತೆರೆಗೆ ತರಲಾಗುತ್ತಿದೆ. ಸಿಕ್ಕಾಪಟ್ಟೆ ಆಕ್ಷನ್ ವೈಲೆನ್ಸ್ 'ಹಿಟ್'-3 ಚಿತ್ರದಲ್ಲಿ ಇರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಇನ್ನು ಪ್ರೀ ರಿಲೀಸ್ ಈವೆಂಟ್ ವೇಳೆ ವೇದಿಕೆಯ ಸಣ್ಣ ಮೊಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
'ಹಿಟ್'-2 ಚಿತ್ರದಲ್ಲಿ ಅಡವಿ ಶೇಷ್ ಹೀರೊ ಆಗಿ ಅಬ್ಬರಿಸಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀ ರಿಲೀಸ್ ಈವೆಂಟ್ ವೇಳೆ ಅಡವಿ ಶೇಷ್ ಕೂಡ ವೇದಿಕೆ ಏರಿ ಶ್ರೀನಿಧಿ ಶೆಟ್ಟಿ ಪಕ್ಕ ನಿಂತಿದ್ದರು. ಈ ವೇಳೆ ಆಕೆಯೆ ಶೇಕ್ ಹ್ಯಾಂಡ್ ಮಾಡಲು ಕೈ ಚಾಚಿದ್ದಾರೆ. ಕೂಡಲೇ ಆಕೆ ಪ್ರತಿಕ್ರಿಯಿಸಿ ಶೇಡ್ ಹ್ಯಾಂಡ್ ಮಾಡಲು ಕೈ ಮುಂದೆ ಚಾಚಿದ್ದಾರೆ. ಈ ವೇಳೆ ಶೇಕ್ ಹ್ಯಾಂಡ್ ಮಾಡದೇ ಅಡವಿ ಶೇಷ್ ಕೈ ಹಿಂದಕ್ಕೆ ತೆಗೆದುಕೊಂಡು ಶಾಕ್ ಕೊಟ್ಟಿದ್ದಾರೆ.
ಅಡವಿ ಶೇಷ್ ಹೀಗೆ ಮಾಡ್ತಾರೆ ಎಂದು ನಿರೀಕ್ಷಿಸದ ನಟಿ ಶ್ರೀನಿಧಿ ಶೆಟ್ಟಿ ಶಾಕ್ ಆಗಿದ್ದಾರೆ. ಒಂದು ಕ್ಷಣ ಅವಕ್ಕಾಗಿಬಿಟ್ಟಿದ್ದಾರೆ. ಈ ಕ್ಯೂಟ್ ಮೊಮೆಂಟ್ ವೀಡಿಯೋ ವೈರಲ್ ಆಗುತ್ತಿದೆ. ಯಶ್ ಅಭಿಮಾನಿಗಳಂತೂ ಮೀಮ್ಸ್ ಕ್ರಿಯೇಟ್ ಮಾಡಿ ಫನ್ನಿಯಾಗಿ ಟ್ರೋಲ್ ಮಾಡುತ್ತಿದ್ದಾರೆ. 'ಬಾಹುಬಲಿ'-2 ಚಿತ್ರದಲ್ಲಿ ಭದ್ರ(ಅಡವಿ ಶೇಷ್) ತನ್ನ ಕೈ ಮುಟ್ಟಿದ್ದಕ್ಕೆ ದೇವಸೇನಾ(ಅನುಷ್ಕಾ ಶೆಟ್ಟಿ) ಆತನ ಕೈ ಕತ್ತರಿಸಿದ್ದಳು. ಬಾಹುಬಲಿಯಂತೂ ತಲೆಯನ್ನೇ ಕಡೆದ. ಅದೇ ಭಯಕ್ಕೆ ಈಗ ಶ್ರೀನಿಧಿ ಕೈ ಮುಟ್ಟಲು ಅಡವಿ ಶೇಷ್ ಭಯಪಟ್ಟಿರಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ರಾಕಿ ಭಾಯ್ 'KGF'-2 ಕ್ಲೈಮ್ಯಾಕ್ಸ್‌ನಲ್ಲಿ ಕೈಗಳನ್ನು ಕತ್ತರಿಸುವ ದೃಶ್ಯ ಅಡವಿ ಶೇಷ್‌ಗೆ ನೆನಪಾಗಿರಬೇಕು. ಅದಕ್ಕೆ ರೀನಾ ಕೈ ಮುಟ್ಟಲು ಹೆದರಿಬಿಟ್ಟಿದ್ದಾರೆ ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ಫನ್ನಿ ಮೊಮೆಂಟ್ ವೀಡಿಯೋ ಸಖತ್ ಸದ್ದು ಮಾಡ್ತಿದೆ. 'KGF'-2 ಬಳಿಕ ಶ್ರದ್ಧಾ ತಮಿಳಿನ 'ಕೋಬ್ರಾ' ಚಿತ್ರದಲ್ಲಿ ಮಾತ್ರ ನಟಿಸಿದ್ದರು. ಆ ಸಿನಿಮಾ ಕೂಡ ಸೋತಿತ್ತು. ಇದೀಗ 'ಹಿಟ್- 3' ಬಳಿಕ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
'ತೆಲುಸು ಕದಾ' ಎಂಬ ತೆಲುಗು ಸಿನಿಮಾ ಮಂಗಳೂರು ಚೆಲುವೆ ಕೈಯಲ್ಲಿದೆ. ಸುದೀಪ್ ಜೋಡಿಯಾಗಿ ನಟಿಸೋ ಸಾಧ್ಯತೆ ಕೂಡ ಇದೆ. 2016ರಲ್ಲಿ ಮಿಸ್ ಸುಪ್ರಾನ್ಯಾಶನಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಚೆಲುವೆ ಬಳಿಕ 'KGF' ಚಿತ್ರಕ್ಕೆ ಆಯ್ಕೆ ಆಗಿದ್ದರು. 'ರಾಮಾಯಣ' ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದೆ. ಬಳಿಕ ಹಿಂದೆ ಸರಿದೆ ಎಂದು ಇತ್ತೀಚೆಗೆ ಆಕೆ ಹೇಳಿಕೊಂಡಿದ್ದಾರೆ.


Click it and Unblock the Notifications











