For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಜೊತೆ ಮತ್ತೆ ರಾಜಮೌಳಿ: ಇದು ಭಾರತದ ಅತಿ ದೊಡ್ಡ ಚಿತ್ರ!

  |

  'ಬಾಹುಬಲಿ ದಿ ಬಿಗಿನಿಂಗ್' ಮತ್ತು 'ಬಾಹುಬಲಿ ದಿ ಕನ್‌ಕ್ಲೂಷನ್' ನೋಡಿದ್ಮೇಲೆ ರಾಜಮೌಳಿಯ ಸಿನಿಮಾ ಮೇಕಿಂಗ್‌ಗೆ ಎಲ್ಲರೂ ಫಿದಾ ಆದರು. ರಾಜಮೌಳಿ ಪರಿಕಲ್ಪನೆ ಮುಂದೆ ಯಾವ ಹಾಲಿವುಡ್ ನಿರ್ದೇಶಕರು ಇಲ್ಲ ಬಿಡಿ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಲಾಜಿಕ್-ಮ್ಯಾಜಿಕ್‌ಗಳನ್ನು ನಂಬದ ರಾಜಮೌಳಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹಾಗಾಗಿ, ಸ್ಟಾರ್ ಹೀರೋಗಳನ್ನು ಮೀರಿಸುವ ಬ್ರ್ಯಾಂಡ್ ವ್ಯಾಲ್ಯೂ ಈಗ ರಾಜಮೌಳಿ ಹೆಸರಿಗಿದೆ.

  ಬಾಹುಬಲಿ ಮೂಲಕ ಇತಿಹಾಸ ಸೃಷ್ಟಿಸಿದ ರಾಜಮೌಳಿ ಮತ್ತು ಪ್ರಭಾಸ್ ಮತ್ತೊಮ್ಮೆ ಮೆಗಾ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಈ ಸುದ್ದಿ ಹೊರಬಿದ್ದರೂ ಅಚ್ಚರಿ ಇಲ್ಲ. ಪ್ರಭಾಸ್ ಮತ್ತು ರಾಜಮೌಳಿ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದರೂ, ಈ ಕಾಂಬಿನೇಷನ್ ಭಾರತದ ಅತಿ ದೊಡ್ಡ ಚಿತ್ರಕ್ಕಾಗಿ ಮತ್ತೊಮ್ಮೆ ಒಂದಾಗುತ್ತಿದೆ ಎನ್ನುವ ವಿಚಾರ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಮುಂದೆ ಓದಿ...

  ಮೈತ್ರಿ ಮೂವಿ ಮೇಕರ್ಸ್ ಯೋಜನೆ

  ಮೈತ್ರಿ ಮೂವಿ ಮೇಕರ್ಸ್ ಯೋಜನೆ

  ಶ್ರೀಮಂತಡು, ಜನತಾ ಗ್ಯಾರೇಜ್, ರಂಗಸ್ಥಲಂ, ಡಿಯರ್ ಕಾಮ್ರೇಡ್, ಉಪ್ಪೇನಾ ಅಂತಹ ಚಿತ್ರಗಳನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಈಗ ತೆಲುಗಿನ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ, ಅಲ್ಲು ಅರ್ಜುನ್ ಜೊತೆ 'ಪುಷ್ಪ', ಮಹೇಶ್ ಬಾಬು ಜೊತೆ 'ಸರ್ಕಾರು ವಾರಿ ಪಾಟ' ಚಿತ್ರ ಮಾಡ್ತಿದೆ. ಸ್ಟಾರ್ ನಟರಿಗೆ ಚಿತ್ರಗಳನ್ನು ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್ ವರ್ಷಗಳ ಹಿಂದೆಯೇ ಪ್ರಭಾಸ್‌ಗೆ ಕಾಲ್‌ಶೀಟ್ ಪಡೆದುಕೊಂಡಿದ್ದು, ಖಾಲಿ ಚೆಕ್ ಕೊಟ್ಟಿದೆಯಂತೆ.

  ಆರ್‌ಆರ್‌ಆರ್‌ ನಂತರ ಮತ್ತೊಂದು ಸೌತ್ ಚಿತ್ರದಲ್ಲಿ ಆಲಿಯಾ ಭಟ್‌?ಆರ್‌ಆರ್‌ಆರ್‌ ನಂತರ ಮತ್ತೊಂದು ಸೌತ್ ಚಿತ್ರದಲ್ಲಿ ಆಲಿಯಾ ಭಟ್‌?

  ಪ್ರಭಾಸ್-ರಾಜಮೌಳಿ ಕಾಂಬಿನೇಷನ್

  ಪ್ರಭಾಸ್-ರಾಜಮೌಳಿ ಕಾಂಬಿನೇಷನ್

  ಪ್ರಭಾಸ್ ಜೊತೆ ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಈ ಪ್ರಾಜೆಕ್ಟ್‌ಗೆ ಎಸ್ ಎಸ್ ರಾಜಮೌಳಿಯನ್ನು ನಿರ್ದೇಶಕರನ್ನಾಗಿಸಲು ನಿರ್ಮಾಣ ಸಂಸ್ಥೆ ಯೋಜಿಸಿದ್ದು, ಭಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಲು ಚಿಂತಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದು ಭಾರತದ ಅತಿ ದೊಡ್ಡ ಸಿನಿಮಾ ಆಗಲಿದೆಯಂತೆ.

  ಆರ್‌ಆರ್‌ಆರ್ ನಂತರ ಏನು?

  ಆರ್‌ಆರ್‌ಆರ್ ನಂತರ ಏನು?

  ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ್ ಕಾಂಬಿನೇಷನ್‌ನಲ್ಲಿ ಆರ್‌ ಆರ್‌ ಆರ್ ಸಿನಿಮಾ ಮಾಡುತ್ತಿರುವ ರಾಜಮೌಳಿ ಶೂಟಿಂಗ್ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಕೊಟ್ಟಿದ್ದು, ಬಿಡುಗಡೆಗೂ ಸಜ್ಜಾಗುತ್ತಿದೆ. ಈ ಹಿಂದೆ ಅಕ್ಟೋಬರ್ 13ಕ್ಕೆ ಸಿನಿಮಾ ರಿಲೀಸ್ ಮಾಡಬೇಕಿತ್ತು. ಆದ್ರೀಗ, ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಮುಂದಿನ ದಿನಾಂಕ ಘೋಷಣೆ ಮಾಡಿಲ್ಲ. ಆರ್ ಆರ್ ಆರ್ ಚಿತ್ರದ ನಂತರ ರಾಜಮೌಳಿ ಯಾವ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ.

  ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್

  ಮಹೇಶ್ ಬಾಬು ಜೊತೆ ಮೌಳಿ?

  ಮಹೇಶ್ ಬಾಬು ಜೊತೆ ಮೌಳಿ?

  ಸದ್ಯದ ವರದಿಗಳ ಪ್ರಕಾರ ಪ್ರಿನ್ಸ್ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ತುಂಬಾ ವರ್ಷಗಳಿಂದಲೇ ಬರಬೇಕಿತ್ತು. ಆದರೆ ಅದಾಗಲೇ ಒಪ್ಪಿಕೊಂಡಿದ್ದ ಕಮಿಟ್‌ಮೆಂಟ್‌ಗಳ ಪರಿಣಾಮ ಮತ್ತಷ್ಟು ವಿಳಂಬ ಆಗಿದೆ. ಈಗ ಆರ್‌ಆರ್‌ಆರ್ ಸಿನಿಮಾ ಮುಗಿಸಿದ ಮೇಲೆ ರಾಜಮೌಳಿ, ಪ್ರಿನ್ಸ್ ಜೊತೆಗಿನ ಪ್ರಾಜೆಕ್ಟ್‌ಗೆ ಚಾಲನೆ ಕೊಡಲಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ಸಹ ರಾಜಮೌಳಿ ಚಿತ್ರಕ್ಕಾಗಿ ಬೇರೆ ಆಫರ್‌ಗಳನ್ನು ಕೈ ಬಿಟ್ಟಿದ್ದಾರೆ.

  ಮೂರು ವರ್ಷ ಪ್ರಭಾಸ್ ಬ್ಯುಸಿ

  ಮೂರು ವರ್ಷ ಪ್ರಭಾಸ್ ಬ್ಯುಸಿ

  ನಟ ಪ್ರಭಾಸ್ ಸಹ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಹೈದರಾಬಾದ್, ಮುಂಬೈ ಅಂತಹ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡ್ತಿದ್ದಾರೆ. ರಾಧೆಶ್ಯಾಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ಜೊತೆ ಸಲಾರ್ ಹಾಗೂ ಓಂ ರಾವತ್ ಜೊತೆಗಿನ ಆದಿಪುರುಷ್ ಸಿನಿಮಾಗಳ ಚಿತ್ರೀಕರಣ ಸಾಗ್ತಿದೆ. ನಾಗ್ ಅಶ್ವಿನ್ ಜೊತೆಗಿನ 21ನೇ ಸಿನಿಮಾ ಪೂರ್ವ ತಯಾರಿ ಮಾಡ್ತಿದ್ದು, ಶೀಘ್ರದಲ್ಲಿ ಈ ಚಿತ್ರವೂ ಶುರುವಾಗಲಿದೆ. ಹಾಗ್ನೋಡಿದ್ರೆ, ಎರಡು ವರ್ಷಕ್ಕೆ ಪ್ರಭಾಸ್ ಕಾಲ್‌ಶೀಟ್ ಬುಕ್ ಆಗಿದೆ. ರಾಜಮೌಳಿಗಾಗಿ ಪ್ರಭಾಸ್ ಮತ್ತೆ ಬಿಡುವು ಮಾಡಿಕೊಂಡರೂ ಅಚ್ಚರಿ ಇಲ್ಲ.

  English summary
  SS Rajamouli and Mythri Movie Makers are planning to launch their most ambitious project with Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X