ದೀಪಾವಳಿ ಹಬ್ಬಕ್ಕೆ ಶುಭಕೋರಿದ RRR ಚಿತ್ರದ ನಿರ್ದೇಶಕ-ನಟರು
ಕೊರೊನಾ ವೈರಸ್ ಕಾರಣದಿಂದ ಈ ವರ್ಷ ಚಿತ್ರರಂಗ ಕೆಲವು ತಿಂಗಳು ಸ್ತಬ್ದವಾಗಿತ್ತು. ನಿಧಾನವಾಗಿ ಚೇತರಿಕೆ ಕಾಣುತ್ತಿರುವ ಸಿನಿ ಜಗತ್ತು ಅರ್ಧಕ್ಕೆ ನಿಂತಿರುವ ಚಿತ್ರೀಕರಣವನ್ನು ಪುನರಾರಂಭಿಸಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಭರದಿಂದ ಶೂಟಿಂಗ್ ಮಾಡುತ್ತಿದೆ. ದೀಪಾವಳಿ ಹಬ್ಬಕ್ಕೂ ಬ್ರೇಕ್ ಕೊಡದ ಚಿತ್ರತಂಡ ಸೆಟ್‌ನಲ್ಲಿ ಹಬ್ಬ ಆಚರಿಸುತ್ತಿದೆ.
ದೀಪಾವಳಿ ಹಬ್ಬವನ್ನು ಆರ್ ಆರ್ ಆರ್ ತಂಡ ಬಹಳ ವಿಶೇಷವಾಗಿ ಆಚರಿಸುತ್ತಿದ್ದು, ಸೆಟ್‌ನಿಂದಲೇ ಎಲ್ಲರಿಗೂ ಬೆಳಕಿನ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಆರ್‌ಆರ್‌ಆರ್ ತಂಡ ದೀಪಾವಳಿ ಹಬ್ಬ ಸಂಭ್ರಮಿಸುತ್ತಿರುವ ಕೆಲವು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಮ್ ಚರಣ್ ತೇಜ, ಜೂನಿಯರ್ ಎನ್ ಟಿ ಆರ್ ಹಾಗೂ ನಿರ್ದೇಶಕ ರಾಜಮೌಳಿ ಸಂಪ್ರದಾಯ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
ಈ ಫೋಟೋಗಳನ್ನು ಬಾಲಿವುಡ್ ವಿಶ್ಲೇಶಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಲಿಯಾ ಭಟ್, ಅಜಯ್ ದೇವಗನ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಈಗಾಗಲೇ ಎರಡು ಟೀಸರ್ ಭರ್ಜರಿ ಸದ್ದು ಮಾಡಿದೆ.
ಬಾಹುಬಲಿ ಸಿನಿಮಾದ ಬಳಿಕ ರಾಜಮೌಳಿ ಈ ಚಿತ್ರ ಮಾಡುತ್ತಿದ್ದು, ಇಡೀ ದೇಶ ಈ ಸಿನಿಮಾಗಾಗಿ ಕಾಯುತ್ತಿದೆ.


Click it and Unblock the Notifications











