ಮತ್ತೆ ಬಾಹುಬಲಿ ಹಿಂದೆ ಬಿದ್ದ ರಾಜಮೌಳಿ; ಮಹೇಶ್ ಬಾಬು ಜೊತೆ ಸಿನಿಮಾಗೂ ಮುನ್ನ ಹೊಸ ಪ್ರಯತ್ನ
ಮೂವಿ ಮಾಂತ್ರಿಕ ಎಸ್ ಎಸ್ ರಾಜಮೌಳಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಕೊಟ್ಟ ಸಿನಿಮಾ 'ಬಾಹುಬಲಿ'. 2015 ಹಾಗೂ 2017ರಲ್ಲಿ ಬಾಹುಬಲಿಯ ಎರಡು ಸೀರಿಸ್ ಅನ್ನು ರಿಲೀಸ್ ಮಾಡಿದ್ದರು. 'ಬಾಹುಬಲಿ'ಯ ಎರಡೂ ಸೀರಿಸ್ ಕೂಡ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದು ಗೊತ್ತೇ ಇದೆ.
ಈಗ ರಾಜಮೌಳಿ ಹೊರ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮತ್ತೆ 'ಬಾಹುಬಲಿ'ಯ ಹಿಂದೆ ಬಿದ್ದಿದ್ದಾರೆ. ಈ ಬಾರಿ ಸಿನಿಮಾ ಮಾಡುತ್ತಿಲ್ಲ. ಬದಲಾಗಿ 'ಬಾಹುಬಲಿ'ಯ ಆನಿಮೆಟೆಡ್ ಸೀರಿಸ್ ಅನ್ನು ತರುತ್ತಿದ್ದಾರೆ. ಇದೇ ವಿಷಯವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಕ್ರೇಜಿ ಸುದ್ದಿ ಸಿನಿಪ್ರಿಯರಿಗೆ ಸಖತ್ ಕಿಕ್ ಕೊಡುತ್ತಿದೆ.

'ಬಾಹುಬಲಿ' ಹಾಗೂ 'ಬಾಹುಬಲಿ 2' ಎರಡೂ ಸಿನಿಮಾಗಳು ಇಂದಿಗೂ ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳು. ಆ ಕ್ರೇಜ್ ಅನ್ನು ಮುಂದುವರೆಸಲು ರಾಜಮೌಳಿ ನಿರ್ಧರಿಸಿದ್ದಾರೆ. ಅದಕ್ಕಾಗಿಯೇ 'ಬಾಹುಬಲಿ'ಯ ಅನಿಮೆಟೆಡ್ ಸೀರಿಸ್ ಅನ್ನು ಪ್ರೇಕ್ಷಕರ ಮುಂದೆ ಇಡುವುದಕ್ಕೆ ಮುಂದಾಗಿದ್ದಾರೆ. ಈ ಸೀರಿಸ್‌ಗೆ 'ಬಾಹುಬಲಿ: ಕ್ರೌನ್ ಆಫ್ ಬ್ಲಡ್' ಅಂತ ಟೈಟಲ್ ಇಡಲಾಗಿದೆ.
'ಬಾಹುಬಲಿ: ಕ್ರೌನ್ ಆಫ್ ಬ್ಲಡ್' ಅನಿಮೆಟೆಡ್ ಸೀರಿಸ್‌ನ ಟ್ರೈಲರ್ ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ ಎಂದು ರಾಜಮೌಳಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. " ಮಾಹಿಷ್ಮತಿಯ ಜನರು ಅವನ ಹೆಸರು ಯಾವಾಗ ಕರೆಯುತ್ತಾರೋ ಆಗ ಯಾವುದೇ ಬ್ರಹ್ಮಾಂಡಕ್ಕೂ ಅವನು ಹಿಂತಿರುಗುವುದನ್ನು ತಡೆಯುವುದಕ್ಕೆ ಸಾಧ್ಯವೇ ಇಲ್ಲ" ಎಂದು ರಾಜಮೌಳಿ ಟ್ವೀಟ್ (ಎಕ್ಸ್) ಮಾಡಿದ್ದಾರೆ.
2015ರಲ್ಲಿ ತೆರೆಕಂಡಿದ್ದ 'ಬಾಹುಬಲಿ' ಹಾಗೂ 2017ರ 'ಬಾಹುಬಲಿ 2' ಸಿನಿಮಾದಲ್ಲಿ ಮಾಹಿಷ್ಮತಿಯ ಸಾಮ್ರಾಜ್ಯದ ಬಗ್ಗೆ ಹೇಳಿದ್ದರು. ಇದರಲ್ಲಿ ಅಮರೇಂದ್ರ ಬಾಹುಬಲಿ ಹಾಗೂ ಮಹೇಂದ್ರ ಬಾಹುಬಲಿಯ ಕಥೆಯನ್ನು ರೋಚಕವಾಗಿ ಹೇಳಲಾಗಿತ್ತು. ಈ ಎರಡೂ ಸಿನಿಮಾಗಳು ಭಾರತೀಯ ಸಿನಿಮಾ ಮೇಕಿಂಗ್ ದಿಕ್ಕನ್ನೇ ಬದಲಿಸಿದ್ದವು.
'ಬಾಹುಬಲಿ'ಯ ಕಾಲ್ಪಿನಿಕ ಕಥೆಯಲ್ಲಿ ಬರುವ ಆಕ್ಷನ್, ರೊಮ್ಯಾನ್ಸ್ ಹಾಗೂ ದ್ವೇಷವನ್ನು ವಿಜೃಂಬಿಸಿ ತೋರಿಸಲಾಗಿತ್ತು. ಇಂತಹ ಅದ್ಭುತ ಸಿನಿಮ್ಯಾಟಿಕ್ ಎಕ್ಸ್‌ಪೀರಿಯನ್ಸ್ ಅನ್ನು ತೋರಿಸಿದ್ದ ರಾಜಮೌಳಿ ಈಗ ಅನಿಮೇಷನ್ ಮೂಲಕ ಏನನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಕುತೂಹಲವಿದೆ. ರಾಜಮೌಳಿ ಸಿನಿಪ್ರಿಯರಿಗೆ ಒಂದರ ಹಿಂದೊಂದು ಸರ್ಪ್ರೈಸ್ ಅನ್ನು ನೀಡುತ್ತಲೇ ಇದ್ದಾರೆ.
ಈಗಾಗಲೇ ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಮಹೇಶ್ ಬಾಬು ನಟಿಸುತ್ತಿರುವ 29ನೇ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ ಅಂದುಕೊಂಡಿರುವಾಗಲೇ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಮಹೇಶ್ ಬಾಬು ಜೊತೆ ಆಕ್ಷನ್ ಅಡ್ವೆಂಚರ್ ಸಿನಿಮಾ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಎಲ್ಲರೂ ಈ ಹೊಸ ಕಾಂಬಿನೇಷನ್ ಮೇಲೆ ಕಣ್ಣಿಟ್ಟಿತ್ತು. ಆದ್ರೀಗ ಅದಕ್ಕೂ ಮುನ್ನ ಮತ್ತೆ 'ಬಾಹುಬಲಿ' ಸದ್ದು ಮಾಡಲಿದೆ.


Click it and Unblock the Notifications











