For Quick Alerts
  ALLOW NOTIFICATIONS  
  For Daily Alerts

  ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿದ್ದೀನಿ: ಮುಂದಿನ ಚಿತ್ರದಲ್ಲಿ ಪ್ರಪಂಚವೆಲ್ಲಾ ಸುತ್ತುವ ಕಥೆ!

  |

  'ಬಾಹುಬಲಿ' ಸರಣಿ, RRR ನಂತರ ರಾಜಮೌಳಿ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಅನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಇದೇ ಮೊದಲ ಬಾರಿಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಜಕ್ಕಣ್ಣ ಮೌನ ಮುರಿದಿದ್ದಾರೆ. ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ಮೌಳಿ ಫಿಲ್ಮ್ ಫೆಸ್ಟಿವಲ್‌ವೊಂದರಲ್ಲಿ ಮಾತನಾಡಿದ್ದಾರೆ.

  ಕ್ರಿಯೇಟಿವ್ ಡೈರೆಕ್ಟರ್ ರಾಜಮೌಳಿ ಸಿನಿಮಾ ಅಂದರೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತೆ. ಸೆನ್ಸೇಷನ್‌ನಲ್ ಸಿನಿಮಾಗಳಿಂದ ಜಕ್ಕಣ್ಣ ಧೂಳೆಬ್ಬಿಸ್ತಿದ್ದಾರೆ. ಲಾರ್ಜರ್‌ದೆನ್ ಲೈಫ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಮೌಳಿ ನಿಸ್ಸೀಮರು. ಈ ಬಾರಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಕೈ ಜೋಡಿಸುತ್ತಿದ್ದಾರೆ. ನಿನ್ನೆಯಷ್ಟೆ(ಸೆಪ್ಟೆಂಬರ್ 12) ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾ ಮುಗಿತ್ತಿದ್ದಂತೆ ಮೌಳಿ ಬಳಗ ಸೇರಿಕೊಳ್ಳಲಿದ್ದಾರೆ. ವಿಜಯೇಂದ್ರ ಪ್ರಸಾದ್‌ ಈಗಾಗಲೇ ಮೆಗಾ ಪ್ರಾಜೆಕ್ಟ್‌ಗಾಗಿ ಜಬರ್ದಸ್ತ್ ಕಥೆ ಸಿದ್ಧಪಡಿಸ್ತಿದ್ದು, ಪ್ರೀಪ್ರೊಡಕ್ಷನ್ ವರ್ಕ್ ಶುರುವಾಗಿದೆ.

  ಮಹೇಶ್ ಬಾಬು 28ನೇ ಚಿತ್ರದ ಶೂಟಿಂಗ್ ಆರಂಭ; ವಿಶೇಷ ಟೀಸರ್ ಹಂಚಿಕೊಂಡ ಚಿತ್ರತಂಡಮಹೇಶ್ ಬಾಬು 28ನೇ ಚಿತ್ರದ ಶೂಟಿಂಗ್ ಆರಂಭ; ವಿಶೇಷ ಟೀಸರ್ ಹಂಚಿಕೊಂಡ ಚಿತ್ರತಂಡ

  ಮೆಗಾ ಪವರ್ ಸ್ಟಾರ್ ರಾಜ್‌ಚರಣ್ ತೇಜಾ ಹಾಗೂ ಯಂಗ್‌ ಟೈಗರ್ ಎನ್‌ಟಿಆರ್ ನಟನೆಯ NTR ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಆದರೆ ಚಿತ್ರದಲ್ಲಿ ಯಾರ ಪಾತ್ರ ಹೆಚ್ಚು? ಯಾರ ಪಾತ್ರ ಕಡಿಮೆ? ಎನ್ನುವ ಚರ್ಚೆ ಇನ್ನು ನಡೀತಾನೆ ಇದೆ. ಈ ಬಗ್ಗೆ ಮತ್ತೊಂದು ಸಂದರ್ಶನದಲ್ಲಿ ರಾಜಮೌಳಿ ಉತ್ತರ ಕೊಟ್ಟಿದ್ದಾರೆ.

  ಮೌಳಿ ನೆಕ್ಸ್ಟ್ ಪ್ರಾಜೆಕ್ಟ್ ಕಥೆ ಏನು?

  ಮೌಳಿ ನೆಕ್ಸ್ಟ್ ಪ್ರಾಜೆಕ್ಟ್ ಕಥೆ ಏನು?

  ಬಹಳ ವರ್ಷಗಳಿಂದ ರಾಜಮೌಳಿ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸುವ ಬಗ್ಗೆ ಮಾತುಗಳು ಕೇಳಿ ಬರ್ತಾನೆ ಇದೆ. ಇದನ್ನು ಸ್ವತಃ ಜಕ್ಕಣ್ಣ ಕೂಡ ಹೇಳಿಕೊಂಡಿದ್ದಾರೆ. ಸಿನಿಮಾ ಕಥೆ ಬಗ್ಗೆ ಅವರ ತಂದೆ ಕಥೆಗಾರ ವಿಜಯೇಂದ್ರ ಪ್ರಸಾದ್ ಸುಳಿವು ಕೊಟ್ಟಿದ್ದರು. ಆಫ್ರಿಕಾ ಕಾಡಿನಲ್ಲಿ ನಡೆಯುವ ಕಥೆ ಎಂದು ಹೇಳಿದ್ದರು. ಸದ್ಯ ಟೊರೆಂಟೋ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೌಳಿ ಮಾತನಾಡಿದ್ದಾರೆ. ಮುಂದಿನ ಚಿತ್ರ ಪ್ರಪಂಚದಾದ್ಯಂತ ಟ್ರಾವೆಲ್ ಆಗುವಂತಹ ಅಡ್ವೆಂಚರ್ ಕಥೆ ಎಂದು ಕನ್ಫರ್ಮ್‌ ಮಾಡಿದ್ದಾರೆ.

  ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?

  800 ಕೋಟಿ ಬಜೆಟ್‌ನಲ್ಲಿ ಅದ್ಧೂರಿ ಸಿನಿಮಾ

  800 ಕೋಟಿ ಬಜೆಟ್‌ನಲ್ಲಿ ಅದ್ಧೂರಿ ಸಿನಿಮಾ

  400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ RRR ಸಿನಿಮಾ 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ ಚಿತ್ರ 800 ಕೋಟಿ ರೂ. ಬಜೆಟ್‌ನಲ್ಲಿ ಮೂಡಿ ಬರುತ್ತದೆ ಎನ್ನಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದಾಗಲಿದೆ. ಚಿತ್ರಕ್ಕೆ ಆಫ್ರಿಕಾ ಕಾಡಿನ ಸೆಟ್‌ ಅನ್ನು ನಿರ್ಮಿಸುವ ಪ್ರಯತ್ನ ನಡೀತಿದೆಯಂತೆ.

  ಜನವರಿ 26ಕ್ಕೆ ಸೆಟ್ಟೇರುತ್ತಾ ಮೌಳಿ ಸಿನಮಾ?

  ಜನವರಿ 26ಕ್ಕೆ ಸೆಟ್ಟೇರುತ್ತಾ ಮೌಳಿ ಸಿನಮಾ?

  ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ರಾಜಮೌಳಿ ಗ್ಯಾಪ್ ತಗೋತಾರೆ. ಪ್ರೀಪ್ರೊಡಕ್ಷನ್ ವರ್ಕ್ ಎಲ್ಲಾ ಕಂಪ್ಲೀಟ್ ಆದ ಮೇಲೆ ಶೂಟಿಂಗ್‌ಗೆ ಹೊರಡುತ್ತಾರೆ. ಒಮ್ಮೆ ಶೂಟಿಂಗ್ ಶುರುವಾದರೆ ಯಾವಾಗ ಮುಗಿಯುತ್ತೆ ಎನ್ನುವುದು ಅವರಿಗೂ ಗೊತ್ತಿರಲ್ಲ. ಜನವರಿ 26ಕ್ಕೆ ಗಣರಾಜ್ಯೋತ್ಸವದ ದಿನ ಜಕ್ಕಣ್ಣ ಮುಂದಿನ ಸಿನಿಮಾ ಸೆಟ್ಟೇರುತ್ತೆ ಅನ್ನುವ ಗುಸುಗುಸು ಶುರುವಾಗಿದೆ. ಅಷ್ಟೊತ್ತಿಗೆ ಮಹೇಶ್ ಬಾಬು ಸದ್ಯ ಆರಂಭಿಸಿರುವ ತ್ರಿಕ್ರಮ್ ನಿರ್ದೇಶನದ ಸಿನಿಮಾ ಶೂಟಿಂಗ್ ಮುಗಿಸಿರುತ್ತಾರೆ.

  ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ!

  ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ!

  RRR ಚಿತ್ರದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆ ಹೇಳಿ ಮೌಳಿ ಗೆದ್ದಿದ್ದರು. ಅಲ್ಲೂರಿ ಸೀತಾರಾಮ ರಾಜು ಆಗಿ ಚರಣ್‌, ಕೊಮುರಂ ಭೀಮ್ ಆಗಿ ತಾರಕ್ ಅಬ್ಬರಿಸಿದ್ದರು. ಆದರೆ ಚಿತ್ರದಲ್ಲಿ ತಾರಕ್ ಪಾತ್ರಕ್ಕೆ ಹೆಚ್ಚಿನ ನ್ಯಾಯ ಸಿಕ್ಕಿಲ್ಲ ಅನ್ನುವ ಆರೋಪ ಕೇಳಿಬಂದಿತ್ತು. ಇದೇ ಪ್ರಶ್ನೆಯನ್ನು ನಿರೂಪಕಿ ಸುಮಾ ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮದಲ್ಲಿ ಮೌಳಿ ಮುಂದೆ ಇಟ್ಟಿದ್ದರು. ಇದಕ್ಕೆ ಉತ್ತರಿಸಿದ ಮೌಳಿ "ಯಾರೋ ಒಬ್ಬರಿಗೆ ಹೆಚ್ಚು, ಮತ್ತೊಬ್ಬರಿಗೆ ಕಮ್ಮಿ ನ್ಯಾಯ ಒದಗಿಸಿದ್ದರೆ ಸಿನಿಮಾ ಅಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತಿರಲಿಲ್ಲ. ನಾನು ಇಬ್ಬರಿಗೂ ಸರಿಸಮವಾಗಿ ನ್ಯಾಯ ಒದಗಿಸಿದ್ದೇನೆ" ಎಂದಿದ್ದಾರೆ.

  English summary
  SS Rajamouli Breaks Silence on His Next Movie story theme. Know More.
  Tuesday, September 13, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X