Don't Miss!
- News
ಬಿಹಾರ ರಾಜಕೀಯ ಬಿಕ್ಕಟ್ಟು: ಇಂದು ನಿತೀಶ್ ಕುಮಾರ್ ಮಹತ್ವದ ಸಭೆ, ಇಂದೇ ಮೈತ್ರಿ ಅಂತ್ಯ?
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಹಾಭಾರತದ ಕನಸು ಹೊತ್ತಿರುವ ರಾಜಮೌಳಿ!
ಎಸ್ಎಸ್ ರಾಜಮೌಳಿ ಭಾರತೀಯ ಸಿನಿಮಾರಂಗದಲ್ಲಿ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ರಾಜಮೌಳಿ ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿ ಉಳಿಯುವ ಪ್ರಮುಖ ಹೆಸರುಗಳಲ್ಲಿ ಒಂದು. ಸಾಕಷ್ಟು ಹಿಟ್ ಸಿನಿಮಾಗಳನ್ನು ರಾಜಮೌಳಿ ಮಾಡಿದ್ದರು, ಅಪಾರ ಖ್ಯಾತಿ ಕೊಟ್ಟಿದ್ದು ಮಾತ್ರ 'ಬಾಹುಬಲಿ' ಸಿನಿಮಾ.
'ಬಾಹುಬಲಿ' ಸರಣಿ ಸಿನಿಮಾಗಳ ನಂತರ, ರಾಜಮೌಳಿ ವಿಶ್ವವಿಖ್ಯಾತಿಯನ್ನು ಹೆಚ್ಚಿ ಮಟ್ಟದಲ್ಲಿ ಪಡೆದುಕೊಂಡಿದ್ದಾರೆ. ಹಾಗಾಗಿ ರಾಜಮೌಳಿ ಯಾವುದೇ ಸಿನಿಮಾ ಮಾಡುತ್ತಾರೆ ಎಂದರೆ ಸಾಕು, ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.
100
ದಿನ
ಪೂರೈಸಿದ
ರಾಜಮೌಳಿಯ
RRR:
ನೆಟ್ಫ್ಲಿಕ್ಸ್
ಸಿಇಓ
ಮನಗೆದ್ದ
ಭಾರತದ
ಸಿನಿಮಾ!
RRR ಬಳಿಕ ನಿರ್ದೇಶಕ ರಾಜಮೌಳಿ ಮಹೇಶ್ ಬಾಬುಗಾಗಿ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆ ಚಿತ್ರಕ್ಕಾಗಿ ಸಕಲ ತಯಾರಿಯೂ ನಡೆದಿದೆ. ಈ ನಡುವೆ ರಾಜಮೌಳಿ ಈಗ ಮತ್ತೊಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ.

ಮಹಾಭಾರತ ರಾಜಮೌಳಿಯ ಕನಸು!
ನಿರ್ದೇಶಕ ರಾಜಮೌಳಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಇವರಿಗಿಂತ ಅದ್ಭುತವಾಗಿ ಈ ರೀತಿ ಸಿನಿಮಾ ಮಾಡುವವರೋ ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟು ಅದ್ಭುತವಾಗಿ ರಾಜಮೌಳಿ ಪೌರಾಣಿಕ ಕಥೆಗಳನ್ನು ತೆರೆಮೇಲೆ ಕಟ್ಟಿಕೊಡುತ್ತಾರೆ. ಈ ಸಾಲಿಗೆ ಈಗ ಮಹಾ ಕಾವ್ಯ 'ಮಹಾಭಾರತ' ಸೇರಿಕೊಳ್ಳಲಿದೆ. 'ಮಹಾಭಾರತ'ವನ್ನು ಸಿನಿಮಾ ರೂಪದಲ್ಲಿ ತೆರೆಯ ಮೇಲೆ ತರಬೇಕು ಎನ್ನುವುದು ಜಕ್ಕಣ್ಣನ ಹಲವು ವರ್ಷದ ಕನಸು.
ಮಹೇಶ್
ಬಾಬು
ಸಿನಿಮಾ
ಮುಗಿಸಲು
ರಾಜಮೌಳಿಗೆ
ಬೇಕು
3
ವರ್ಷ:
ಫ್ರಾನ್ಸ್ನಲ್ಲಿ

'ಮಹಾಭಾರತ' ಸಿನಿಮಾ ಕನ್ಫರ್ಮ್!
ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ರಾಜಮೌಳಿ 'ಮಹಾಭಾರತ' ಸಿನಿಮಾ ಮಾಡುವುದು ಪಕ್ಕಾ ಎಂದಿದ್ದಾರೆ. 'ಮಹಾಭಾರತ'ವನ್ನು ಸಿನಿಮಾ ತೆರೆಯ ಮೇಲೆ ತರುವುದು ಅವರ ಕನಸಂತೆ. ಆದರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಆದರೆ ತೆರೆ ಮರೆಯಲ್ಲಿ ಅದರ ಕೆಲಸಗಳನ್ನು ಮಾಡುತ್ತಾ, ಇತ್ತ ಬೇರೆ ಸಿನಿಮಾಗಳನ್ನು ಮಾಡಲಿದ್ದಾರಂತೆ. 'ಮಹಾಭಾರತ' ಸಿನಿಮಾಗಿಂತಲೂ ಮೊದಲು ಅವರ 2 ಚಿತ್ರಗಳು ತೆರೆಗೆ ಬರುವ ಸಾಧ್ಯತೆ ಇದೆ.

ಮಹೇಶ್ ಜೊತೆಗೆ ಸಿನಿಮಾ!
ಸದ್ಯ ರಾಜಮೌಳಿ ಮುಂದಿನ ಸಿನಿಮಾ ಕಾವ್ಯಕ್ಕೆ ಮಹೇಶ್ ಬಾಬು ನಾಯಕ ನಟ. ಮಹೇಶ್ ಬಾಬುಗಾಗಿ ರಾಜಮೌಳಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚುತ್ತಲೇ ಇದೆ. ಸದ್ಯದಲ್ಲಿಯೇ ಸಿನಿಮಾ ಕೂಡ ಸೆಟ್ಟೇರಲಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆ ಮಾಡಿದ RRR ಸಿನಿಮಾ ಕೂಡ ಸಾವಿರ ಕೋಟಿ ಗಡಿ ದಾಟಿದೆ.
ಮಹೇಶ್
ಬಾಬುಗೆ
ಬಾಲಿವುಡ್
ನಟಿಯರು
ಬೇಡವಂತೆ,
ರಾಜಮೌಳಿಗೆ
ಷರತ್ತು!

ಮಹೇಶ್ ಬಾಬು ಒಲಿಯುತ್ತಾ ಅದೃಷ್ಟ?
ರಾಜಮೌಳಿ ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಇದ್ದೇ ಇರುತ್ತವೆ. ಈ ಬಾರಿ ನಟ ಮಹೇಶ್ ಬಾಬು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. RRR ಸಿನಿಮಾದಲ್ಲಿ ಅಬ್ಬರಿಸಿದ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಇಬ್ಬರೂ ತಮ್ಮ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದರು. ಇನ್ನು ಬಾಹುಬಲಿಯಾಗಿ ಕಾಣಿಕೊಂಡ ಪ್ರಭಾಸ್ ಈಗ ಸಾಲು, ಸಾಲು ಸಿನಿಮಾಗಳ ಜೊತೆಗೆ 100 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.