For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ಗೆ ರಾಜಮೌಳಿ: ಸುದ್ದಿ ಖಚಿತಪಡಿಸಿದ ತಂದೆ, ಕತೆ ಏನು?

  |

  ಮಣಿರತ್ನಂ, ಶಂಕರ್ ನಂತರ ದಕ್ಷಿಣ ಭಾರತದ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯ ರಾಜಮೌಳಿಗೆ ಸೇರಬೇಕು. 'ಅಗಾಧ ಪ್ರತಿಭೆ ಹೊಂದಿರುವ ರಾಜಮೌಳಿ ಹಾಲಿವುಡ್‌ನಲ್ಲಿರಬೇಕಿತ್ತು, ಭಾರತೀಯ ಸಿನಿಪ್ರೇಮಿಗಳ ಅದೃಷ್ಟದಿಂದ ಅವರು ಇಲ್ಲಿಯೇ ಇದ್ದಾರೆ' ಎಂದು ಹಿಂದೊಮ್ಮೆ ನಿರ್ಮಾಪಕರೊಬ್ಬರು ತಮಾಷೆಗೆ ಹೇಳಿದ್ದರು. ಆದರೆ ಆ ಮಾತು ಈಗ ನಿಜವಾಗುತ್ತಿದೆ.

  ಮೊದಲ 'ಬಾಹುಬಲಿ' ಬಿಡುಗಡೆ ಆದಾಗಲೇ ರಾಜಮೌಳಿ ಹಾಲಿವುಡ್‌ಗೆ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಆ ಸುದ್ದಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

  ನಿರ್ದೇಶಕ ರಾಜಮೌಳಿ ಹಾಲಿವುಡ್‌ ಸಿನಿಮಾ ಮಾಡುತ್ತಿರುವುದು ಖಾತ್ರಿಯಾಗಿದ್ದು, ರಾಜಮೌಳಿ ತಂದೆ ಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರೇ ಸುದ್ದಿಯನ್ನು ಖಚಿತಪಡಿಸಿದ್ದಾರೆ. ರಾಜಮೌಳಿ ನಿರ್ದೇಶಿಸಲಿರುವ ಹಾಲಿವುಡ್‌ ಸಿನಿಮಾಕ್ಕೆ ಕತೆಯನ್ನು ವಿಜಯೇಂದ್ರ ಪ್ರಸಾದ್ ಅವರೇ ರಚಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶಿಸಿರುವ ಈವರೆಗಿನ ಬಹುತೇಕ ಸಿನಿಮಾಗಳಿಗೆ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್.

  ರಾಜಮೌಳಿ ಹಾಲಿವುಡ್ ಪಯಣ ಖಾತ್ರಿ ಪಡಿಸಿದ ವಿಜಯೇಂದ್ರ ಪ್ರಸಾದ್

  ರಾಜಮೌಳಿ ಹಾಲಿವುಡ್ ಪಯಣ ಖಾತ್ರಿ ಪಡಿಸಿದ ವಿಜಯೇಂದ್ರ ಪ್ರಸಾದ್

  'ಅಲಿ ತೋ ಸರದಾಗ' ಟಾಕ್‌ ಶೋಗೆ ಅತಿಥಿಯಾಗಿ ಆಗಮಿಸಿದ್ದ ಕೆ.ವಿ.ವಿಜಯೇಂದ್ರ ಪ್ರಸಾದ್, ರಾಜಮೌಳಿ ಹಾಲಿವುಡ್ ಸಿನಿಮಾ ತೆಗೆಯುತ್ತಿರುವುದು ಖಾತ್ರಿ. ಈಗಾಗಲೇ ಮಾತು-ಕತೆ ಪೂರ್ಣವಾಗಿದ್ದು ಕತೆಯ ಕೆಲಸ ನಡೆಯುತ್ತಿದೆ' ಎಂದಿದ್ದಾರೆ.

  ಅದೊಂದು ಅನಿಮೇಷನ್ ಸಿನಿಮಾ: ವಿಜಯೇಂದ್ರ ಪ್ರಸಾದ್

  ಅದೊಂದು ಅನಿಮೇಷನ್ ಸಿನಿಮಾ: ವಿಜಯೇಂದ್ರ ಪ್ರಸಾದ್

  ಆ ಸಿನಿಮಾದಲ್ಲಿ ಭಾರತದ ನಟರೇ ಇರುತ್ತಾರಾ? ಅಥವಾ ಹಾಲಿವುಡ್ ನಟರು ಇರುತ್ತಾರಾ? ಎಂಬ ಪ್ರಶ್ನೆಗೆ, 'ಯಾವ ನಟರೂ ಇರುವುದಿಲ್ಲ. ಅದೊಂದು ಅನಿಮೇಷನ್ ಸಿನಿಮಾ. ಸಿನಿಮಾದ ಕತೆ ಭಾರತದ್ದೇ ಆದರೆ ನಿರ್ಮಾಣ ಮಾಡುತ್ತಿರುವುದು ಮಾತ್ರ ಅಂತರಾಷ್ಟ್ರೀಯ ಪ್ರೇಕ್ಷಕರಿಗಾಗಿ' ಎಂದು ಉತ್ತರಿಸಿದ್ದಾರೆ ವಿಜಯೇಂದ್ರ.

  ಹಾಲಿವುಡ್‌ನ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಮುಗಿದಿದೆ

  ಹಾಲಿವುಡ್‌ನ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಮುಗಿದಿದೆ

  'ಹಾಲಿವುಡ್‌ನ ಪ್ರಖ್ಯಾತ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಈಗಾಗಲೇ ಮುಗಿದಿದೆ. ಸಿನಿಮಾದ ಕತೆ ಕಾರ್ಯ ಜಾರಿಯಲ್ಲಿದೆ. ನಾನೇ ಕತೆ ಬರೆಯುತ್ತಿದ್ದೇನೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್. ವಿಜಯೇಂದ್ರ ಹೇಳಿರುವಂತೆ ಸಿನಿಮಾದ ಕತೆ ಭಾರತದ ಪರಿಸರದ್ದೇ ಆಗಿರುತ್ತದೆ. ಆದರೆ ನಿರ್ಮಾಣ ಮಾತ್ರ ವಿಶ್ವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಐತಿಹಾಸಿಕ ಕತೆ ಆಧರಿಸಿದ ಸಿನಿಮಾ ಆಗಿರಲಿದ್ದು, ಭಾರತದ ನಟರೇ ಧ್ವನಿ ನೀಡುವ ದಟ್ಟ ಸಾಧ್ಯತೆ ಇದೆ.

  Chiru ಜೊತೆ ತೆಗೆಸಿಕೊಂಡ ಕೊನೆಯ ಫೋಟೋ ಇದು | Pannaga Bharana | Filmibeat Kannada
  ಆರ್‌ಆರ್‌ಆರ್‌ ನಂತರ ಮಹೇಶ್ ಬಾಬು ಜೊತೆಗೆ ಸಿನಿಮಾ

  ಆರ್‌ಆರ್‌ಆರ್‌ ನಂತರ ಮಹೇಶ್ ಬಾಬು ಜೊತೆಗೆ ಸಿನಿಮಾ

  ಪ್ರಸ್ತುತ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಕೆಲವು ದೃಶ್ಯಗಳು, ಹಾಡು ಹಾಗೂ ಪೋಸ್ಟ್ ಪ್ರೊಡಕ್ಷನ್‌ ಹಂತ ಬಾಕಿ ಇದೆ. ಈ ಸಿನಿಮಾದ ಬಳಿಕ ರಾಜಮೌಳಿ, ಮಹೇಶ್‌ ಬಾಬು ಜೊತೆಗೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದ ಬಳಿಕ ಹಾಲಿವುಡ್‌ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

  English summary
  Telugu movie maker SS Rajamouli directing a animated movie in collaboration with Hollywood movie production company for international audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X