SSMB29: ಮುಂದಿನ ಸಿನಿಮಾ ಅಪ್‌ಡೇಟ್ ಕೇಳಿದ್ದಕ್ಕೆ ದೊಣ್ಣೆಯಿಂದ ಹೊಡೆಯಲು ಹೋದ ರಾಜಮೌಳಿ

ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುದ್ದಿಯಿಲ್ಲ. ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ನಟಿಸಬೇಕಿದೆ. 'RRR' ಬಳಿಕ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ. ಆದರೆ ಯಾವಾಗ ಶುರುವಾಗುತ್ತೆ? ಯಾವಾಗ ರಿಲೀಸ್? ಎನ್ನುವುದು ಗೊತ್ತಿಲ್ಲ.

'RRR' ಸಿನಿಮಾ ಬಂದೋಗಿ ಎರಡೂವರೆ ವರ್ಷ ಕಳೆದಿದೆ. ಆದರೂ ರಾಜಮೌಳಿ ಹೊಸ ಸಿನಿಮಾ ಅಪ್‌ಡೇಟ್ ಸಿಕ್ಕಿಲ್ಲ ಎನ್ನುವುದು ಅಭಿಮಾನಿಗಳಿ ಬೇಸರ ತಂದಿದೆ. ಆಗೊಮ್ಮೆ ಈಗೊಮ್ಮೆ ಜಕ್ಕಣ್ಣ ಈ ಬಗ್ಗೆ ಸಣ್ಣದಾಗಿ ಮಾತನಾಡಿದ್ದಾರೆ. ಆದರೆ ಯಾವಾಗ ಸೆಟ್ಟೇರುತ್ತದೆ ಎನ್ನುವುದು ಮಾತ್ರ ಗೊತ್ತಾಗಿಲ್ಲ. ಈ ಚಿತ್ರಕ್ಕೂ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ತಮ್ಮ ತಂಡದ ಜೊತೆ ಸೇರಿ ಚಿತ್ರಕಥೆ ಹೆಣೆಯುವುದರಲ್ಲಿ ಮೌಳಿ ಬ್ಯುಸಿಯಾಗಿದ್ದಾರೆ.

SS Rajamouli Funny Reaction when asked SSMB29 Update

ಮತ್ತೊಂದು ಕಡೆ ಮಹೇಶ್ ಬಾಬು ಚಿತ್ರದ ಪಾತ್ರಕ್ಕಾಗಿ ತಾಲೀಮು ಆರಂಭಿಸಿದ್ದಾರೆ. ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ SSMB29 ಚಿತ್ರದ ಧ್ಯಾನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಸಹ ಫಿಕ್ಸ್ ಆಗಿದೆ. ಇದು ಮಹೇಶ್ ಬಾಬು ನಟನೆಯ 29 ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಎಂದು ಕರೆಯಲಾಗುತ್ತಿದೆ. ದೇಶ ವಿದೇಶದಲ್ಲಿ ಚತ್ರದ ಕಥೆ ಸಾಗಲಿದ್ದು ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

ರಾಜಮೌಳಿ ಸಹೋದರ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಮಗ ಶ್ರೀಸಿಂಹ ಹೀರೊ ಆಗಿ 'ಮತ್ತು ವದಲರಾ'- 2 ಎನ್ನುವ ಸಿನಿಮಾ ತೆರೆಗೆ ಬರ್ತಿದೆ. ಈ ಚಿತ್ರದ ಪ್ರಚಾರಕ್ಕೆ ರಾಜಮೌಳಿ ಸಹ ಸಾಥ್ ಕೊಟ್ಟಿದ್ದಾರೆ. ಪ್ರಚಾರಕ್ಕಾಗಿ ಒಂದು ಫನ್ನಿ ವೀಡಿಯೋ ಮಾಡಿದ್ದಾರೆ. ಇದರಲ್ಲಿ ಪರೋಕ್ಷವಾಗಿ SSMB29 ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ ಎಂದು ಹೇಳಲಾಗಿದೆ.

SS Rajamouli Funny Reaction when asked SSMB29 Update

ಜಕ್ಕಣ್ಣ ತನ್ನ ತಂಡದ ಜೊತೆ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಅಲ್ಲಿಗೆ ಬರುವ ಶ್ರೀಸಿಂಹ ತಮ್ಮ ಸಿನಿಮಾ ಪ್ರಚಾರದ ಬಗ್ಗೆ ಬಂದು ಮಾತನಾಡುತ್ತಾರೆ. ಯಾಕೆ ಸದ್ದು ಮಾಡ್ತಿರಾ? ಎಂದು ರಾಜಮೌಳಿ ಪುತ್ರ ಕಾರ್ತಿಕೇಯ ಕೇಳುತ್ತಾರೆ. ಇನ್ನು ಪ್ರೀ ಪ್ರೊಡಕ್ಷನ್ ನಡೀತಿದೆ ಈಗಲೇ ಪ್ರಚಾರ ಯಾಕೆ? ಎನ್ನುತ್ತಾರೆ.

ಏನಿದು ಗಲಾಟೆ ಎಂದು ರಾಜಮೌಳಿ ಕೂಡ ಹೊರಎ ಎದ್ದು ಬರ್ತಾರೆ. ನಮ್ಮ ಸಿನಿಮಾ ಪ್ರಚಾರ ಮಾಡಿ ಎಂದು ಕೇಳಿದಾಗ ಕೇಳುತ್ತಾರೆ. ಆಗ ರಾಜಮೌಳಿ "ಸೆಪ್ಟೆಂಬರ್ 13ಕ್ಕೆ 'ಮತ್ತು ವದಲರಾ-2' ಸಿನಿಮಾ ರಿಲೀಸ್, ಎಲ್ಲರೂ ಚಿತ್ರಮಂದಿರಕ್ಕೆ ಬನ್ನಿ" ಎನ್ನುತ್ತಾರೆ. ಬಳಿಕ ಹೋಗುವುದಕ್ಕೆ ಮುನ್ನ SSMB ಅಪ್‌ಡೇಟ್ ಕೊಡಿ ಎಂದು ಕೇಳುತ್ತಾರೆ. ಆಗ ಇಲ್ಲೊಂದು ದೊಣ್ಣೆ ಇತ್ತು ಎಂದು ದೊಡ್ಡ ದೊಣ್ಣೆಯಿಂದ ರಾಜಮೌಳಿ ಹೊಡೆಯಲು ಮುಂದಾಗುತ್ತಾರೆ. ಸದ್ಯ ಈ ಫನ್ನಿ ವೀಡಿಯೋ ವೈರಲ್ ಆಗ್ತಿದೆ.

'ಮತ್ತು ವದಲರಾ-2' ಸಿನಿಮಾ ಪ್ರಚಾರದ ಜೊತೆಗೆ SSMB ಸಿನಿಮಾ ಬಗ್ಗೆಯೂ ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ನಡೆಯುತ್ತಿದೆ. ಸದ್ಯಕ್ಕೆ ಅಪ್‌ಡೇಟ್ ಎಲ್ಲಾ ಕೇಳಬೇಡಿ, ಕೋಪ ಬರುತ್ತದೆ ಎಂದು ತಮಾಷೆಯಾಗಿ ಹೇಳಿರುವುದು ಗೊತ್ತಾಗುತ್ತಿದೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ರಾಜಮೌಳಿ ಒಂದೊಂದು ಚಿತ್ರಕ್ಕೆ ಎರಡ್ಮೂರು ವರ್ಷ ವ್ಯಯಿಸುತ್ತಾರೆ. 'ಬಾಹುಬಲಿ' ಸರಣಿಗೆ 5 ವರ್ಷ ತೆಗೆದುಕೊಂಡಿದ್ದರು. SSMB29 ಸಿನಿಮಾ ಇನ್ನು ಅಧಿಕೃತವಾಗಿ ಘೋಷಣೆ ಆಗಿಲ್ಲ. ಸಿನಿಮಾ ಚಿತ್ರೀಕರಣ ಮುಗಿಸಿ ಯಾವಾಗ ತೆರೆಗೆ ತರುತ್ತಾರೋ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. SSMB29 ಮುಗಿಯುವರೆಗೂ ಮಹೇಶ್ ಬಾಬು ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವಂತೆಯೂ ಇಲ್ಲ ಎನ್ನುವಂತಾಗಿದೆ.

More from Filmibeat

English summary
Director SS Rajamouli Shares Update On His Next With Mahesh babu;
Read more about: telugu mahesh babu rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X