ರಾಜಮೌಳಿ ಮುಕುಟಕ್ಕೆ ಮತ್ತೊಂದು ಗರಿ: ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಜಕ್ಕಣ್ಣ

'ಬಾಹುಬಲಿ' ಸರಣಿ ಹಾಗೂ 'RRR' ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಿರ್ದೇಶಕ ರಾಜಮೌಳಿಗೆ ಮತ್ತೊಂದು ಗೌರವ ಸಿಕ್ಕಿದೆ. ತೆಲುಗು ಚಿತ್ರರರಂಗಕ್ಕೆ ಭಾರತೀಯ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಡುವುದರ ಜೊತೆ ಜೊತೆಗೆ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರತಿಷ್ಟಾತ್ಮಕವಾದ ಟೈಂ ಮ್ಯಾಗಜೀನ್ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಈ ಬಾರಿ ರಾಜಮೌಳಿ ಕೂಡ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಭಾರತದಿಂದ ಸ್ಥಾನ ಪಡೆದುಕೊಂಡ ಮೊದಲ ಫಿಲ್ಮ್ ಮೇಕರ್ ರಾಜಮೌಳಿ ಎನಿಸಿಕೊಂಡಿದ್ದಾರೆ. ಇದೇ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ. ಮಾರ್ಗದರ್ಶಕರ ಪಟ್ಟಿಯಲ್ಲಿ ನಿರ್ದೇಶಕರ ಪಟ್ಟಿಯಲ್ಲಿ ಜಕ್ಕಣ್ಣಗೆ ಸ್ಥಾನ ಪಡೆದಿದ್ದು, ಐಕಾನ್ಸ್‌ ಪಟ್ಟಿಯಲ್ಲಿ ಬಾಲಿವುಡ್ ಕಿಂಗ್‌ ಖಾನ್ ಇದ್ದಾರೆ. ರಾಜಮೌಳಿಗೆ ಸಿಕ್ಕ ಗೌರವಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬರ್ತಿದೆ.

SS Rajamouli has been named by TIME magazine as one among the 100 Most Influential People of 2023

'RRR' ಸಿನಿಮಾ ಹಾಲಿವುಡ್‌ನಲ್ಲೂ ಸದ್ದು ಮಾಡಿತ್ತು. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ದಿಗ್ಗಜರೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ರಾಜಮೌಳಿ ಪ್ರತಿಭೆಯನ್ನು ಕೊಂಡಾಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಪಡೆದಿತ್ತು. ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಗೌರವವೂ ಧಕ್ಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಧಕ್ಕಿತ್ತು. ಇದೆಲ್ಲವೂ ಅಂತರಾಷ್ಟ್ರೀಯಮಟ್ಟದಲ್ಲಿ ಮೌಳಿ ಹೆಸರು ಮಾರ್ದನಿಸುವಂತೆ ಮಾಡಿತ್ತು.

ರಾಜಮೌಳಿಗೆ ಈ ಗೌರವ ಧಕ್ಕಿರುವ ಬಗ್ಗೆ ನಟಿ ಆಲಿಯಾ ಭಟ್‌ಗೆ ಟೈಮ್ಸ್ ಮ್ಯಾಗಜೀನ್‌ನಲ್ಲಿ ಈ ಬರೆದಿದ್ದಾರೆ. "ನಾನು ರಾಜಮೌಳಿ ಅವರನ್ನು ಭೇಟಿ ಮಾಡುವ ಮುನ್ನ ಬಾಹುಬಲಿ- 2 ಸಿನಿಮಾ ನೋಡಿಕೊಂಡು ಹೋಗಿದ್ದೆ. ನಾನು ಸಿನಿಮಾ ನೋಡುತ್ತಿರುವಾಗಲೇ ನನಗೆ ಇಷ್ಟವಾಗಿತ್ತು. ಎಂತಹ ಕನಸು ನನಸಾಗುತ್ತಿದೆ. ಇಂತಹ ನಿರ್ದೇಶಕನ ನಿರ್ದೇಶನದಲ್ಲಿ ನಟಿಸುತ್ತೀನಾ ಎನಿಸಿತು, ನನ್ನ ಕನಸು ನನಸಾಯಿತು"

"RRR ಸಿನಿಮಾ ಅವರು ನಿರ್ದೇಶನ ಮಾಡುವಾಗ ನನಗೆ ಮತ್ತೆ ಶಾಲೆಗೆ ಹೋದಂತೆ ಅನಿಸಿತು. ಪ್ರೇಕ್ಷಕರಿಗೆ ಏನು ಕೊಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಯಾವುದು ಚೆನ್ನಾಗಿರುತ್ತದೆ, ಯಾವುದನ್ನು ಜನ ಇಷ್ಟಪಡುತ್ತಾರೆ ಅನ್ನುವುದು ಅವರಿಗೆ ತಿಳಿದಿದೆ. ಕಥೆ ಹೇಳುವುದರಲ್ಲಿ ಅವರೊಬ್ಬ ಮಾಸ್ಟರ್. ಒಂದು ಕಥೆಯ ಸಾಮರ್ಥ್ಯ ಏನು? ಅದನ್ನು ಹೇಗೆ ಹೇಳಬೇಕು ಎನ್ನುವುದು ಚೆನ್ನಾಗಿ ಗೊತ್ತು. ಅದನ್ನು ಚೆನ್ನಾಗಿ ಪ್ರೀತಿಸುತ್ತಾರೆ. ಜೊತೆ ಅವರು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಾರೆ"

ಭಾರತ ವಿವಿಧ್ಯಮಯ ದೇಶ ಮತ್ತು ವಿವಿಧ ಅಭಿರುಚಿ, ಸಂಸ್ಕೃತಿ ಹೊಂದಿರುವ ಬೃಹತ್ ದೇಶ. ಅದನ್ನು ಚೆನ್ನಾಗಿ ಅವರು ಗ್ರಹಿಸುತ್ತಾರೆ, ತೆರೆಗೆ ತರುತ್ತಾರೆ. ಸಿನಿಮಾದಲ್ಲಿ ಎಲ್ಲರನ್ನು ಒಟ್ಟುಗೂಡಿಸುತ್ತಾರೆ."

"ಒಮ್ಮೆ ನಟನೆಯ ಬಗ್ಗೆ ಸಲಹೆ ಕೇಳಿದ್ದೆ. ಅವರು ಹೇಳಿದರು, "ನೀವು ಏನೇ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಿ. ಏಕೆಂದರೆ ಒಂದು ವೇಳೆ ಸಿನಿಮಾ ಗೆಲ್ಲದಿದ್ದರೂ ನೀವು ಏನು ಮಾಡುತ್ತಿದ್ದೀರಾ ಎನ್ನುವುದನ್ನು ನಿಮ್ಮ ಕಣ್ಣುಗಳಲ್ಲಿರುವ ಪ್ರೀತಿಯಲ್ಲಿ ನೋಡುತ್ತಿದ್ದಾರೆ" ಎಂದು ಸಲಹೆ ನೀಡಿದ್ದಾಗಿ ಆಲಿಯಾ ಭಟ್ ನೆನಪಿಸಿಕೊಂಡಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 'RRR' ನಂತರ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ರಾಜಮೌಳಿ ಮನಸ್ಸು ಮಾಡಿದ್ದಾರೆ.

22 ವರ್ಷಗಳ ಹಿಂದೆ 'ಸ್ಟ್ಯೂಡೆಂಟ್‌ ನಂಬರ್ 1' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದ ರಾಜಮೌಳಿ ಮುಂದೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರು. ಸಿನಿಮಾದಿಂದ ಸಿನಿಮಾಗೆ ತನ್ನ ಖ್ಯಾತಿಯನ್ನು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದರು. 'ಸಿಂಹಾದ್ರಿ', 'ಸೈ', 'ಛತ್ರಪತಿ', 'ವಿಕ್ರಮಾರ್ಕುಡು', 'ಯಮದೊಂಗ', 'ಮಗಧೀರ', 'ಈಗ', 'ಮರ್ಯಾದ ರಾಮಣ್ಣ', 'ಬಾಹುಬಲಿ' ಸರಣಿ, 'RRR' ಎಲ್ಲವೂ ಹಿಟ್ ಸಿನಿಮಾಗಳೇ.

More from Filmibeat

English summary
Rajamouli named world's 100 Most Influential People of 2023 list released by the popular magazine Time. Alia Bhatt Calls Rajamouli the master storyteller. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X