For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ 3' ಬಗ್ಗೆ ಮತ್ತೆ ಟಾಲಿವುಡ್‌ನಲ್ಲಿ ಚರ್ಚೆ: ರಾಜಮೌಳಿ ಕೊಟ್ಟ ಸುಳಿವು ಏನು?

  |

  ದಕ್ಷಿಣ ಭಾರತದ ಮೂವಿ ಮಾಂತ್ರಿಕ ರಾಜಮೌಳಿ ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. 'ಬಾಹುಬಲಿ' ಸಿನಿಮಾ ಬಳಿಕ ರಾಜಮೌಳಿ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಭಾರತದ ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ' ಸೀರಿಸ್ ಆ ಮಟ್ಟಿಗೆ ಸದ್ದು ಮಾಡಿತ್ತು.

  'ಬಾಹುಬಲಿ' ಬಳಿಕ ರಾಜಮೌಳಿ ನಿರ್ದೇಶಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ RRR. ಈ ಸಿನಿಮಾ ಕೂಡ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜಮೌಳಿಯನ್ನು ಹಾಲಿವುಡ್ ನಿರ್ದೇಶಕರೊಂದಿಗೆ ಗುರುತಿಸಲಾಗುತ್ತಿದೆ.

  'ಬಾಹುಬಲಿ 3' ಬಗ್ಗೆ ರಾಜಮೌಳಿ ಸುಳಿವು?

  ಅಮೆರಿಕದಲ್ಲಿ RRR ಸಿನಿಮಾ ಸಖತ್ ಸೌಂಡ್ ಮಾಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದ ಬಳಿಕ ವಿದೇಶದಲ್ಲಿ ಈ ಸಿನಿಮಾಗೆ ಮತ್ತಷ್ಟು ಫ್ಯಾನ್ ಫಾಲೋವಿಂಗ್ ಶುರುವಾಗಿದ್ದಾರೆ. ಇತ್ತೀಚೆಗೆ ರಾಜಮೌಳಿ ಈ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುತ್ತಿದ್ದು, ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ 'ಬಾಹುಬಲಿ 3' ಬಗ್ಗೆ ಸುಳಿವು ನೀಡಿದ್ದಾರೆ.

  ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕಾಂಬಿನೇಷನ್‌ಗೆ ಮರುಳಾಗಿದ್ದ ಪ್ರೇಕ್ಷಕರಿಗೆ ಮತ್ತೆ 'ಬಾಹುಬಲಿ' ನೋಡುವ ತವಕವಿದೆ. ಹೀಗಾಗಿ ರಾಜಮೌಳಿಗೆ 'ಬಾಹುಬಲಿ 3' ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇಲ್ಲಿವರೆಗೂ ಏನೂ ಹೇಳದ ರಾಜಮೌಳಿ ಈಗ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.

  'ಬಾಹುಬಲಿ 3'ಗೆ ಕ್ಲ್ಯೂ ಏನು?

  ಇತ್ತೀಚೆಗೆ ರಾಜಮೌಳಿ ನೀಡಿದ ಸಂದರ್ಶನದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರೋ 'ಬಾಹುಬಲಿ 3' ಸಿನಿಮಾ ಬರುತ್ತೆ ಎಂದು ಸುಳಿವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡುವಾಗ ರಾಜಮೌಳಿ 'ಬಾಹುಬಲಿ 3' ಸಿನಿಮಾ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿದ್ದಾಗಿ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  ಸಂದರ್ಶನದಲ್ಲಿ ರಾಜಮೌಳಿ 'ಬಾಹುಬಲಿ 2' ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತಾಡಿದ್ದಾರೆ. 'ಬಾಹುಬಲಿ 2' ಸಿನಿಮಾದಲ್ಲಿ ಮಾತ್ರ ಓಪನ್ ಎಂಡಿಂಗ್ ಇದೆ. 'ಬಾಹುಬಲಿ 2' ಕ್ಲೈಮ್ಯಾಕ್ಸ್‌ನಲ್ಲಿ ಬಾಲಕಿಯೊಬ್ಬಳು ಮಹೇಂದ್ರ ಬಾಹುಬಲಿ ಆಳ್ವಿಕೆ ಬಗ್ಗೆ ಪ್ರಶ್ನೆ ಮಾಡುತ್ತಾಳೆ ಅಲ್ಲಿಂದ ಸಿನಿಮಾ ಶುರುವಾಗುತ್ತೆ ಎನ್ನಲಾಗಿದೆ. ಇದೇ ಪಾರ್ಟ್ 3ಗೆ ರಹದಾರಿ ಎನ್ನಲಾಗಿದೆ.

  SS Rajamouli Hinted That Baahubali 3 Will Come In Future

  ಸದ್ಯ ರಾಜಮೌಳಿ RRR ಸಕ್ಸಸ್‌ನಲ್ಲಿ ಅಲೆದಾಡುತ್ತಿದ್ದಾರೆ. ಇದರೊಂದಿಗೆ ಮುಂದಿನ ಸಿನಿಮಾಗೂ ತಯಾರಿ ನಡೆಸಿದ್ದಾರೆ. ಈಗಾಗಲೇ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡೋದು ಬಹುತೇಕ ಖಚಿತ ಅನ್ನೋದು ಗೊತ್ತಾಗಿದೆ. ಸಿನಿಮಾ ಸೆಟ್ಟೇರೋವರೆಗೂ ಈ ಕ್ಯೂರಿಯಾಸಿಟಿ ಹಾಗೇ ಮುಂದುವರೆಯುತ್ತೆ.

  English summary
  SS Rajamouli Hinted That Baahubali 3 Will Come In Future, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X