"ಆತನಿಗೆ ಮುಸುಕು ಹಾಕಿ ಹೊಡೆದವರಿಗೆ 10 ಸಾವಿರ ರೂಪಾಯಿ ಕೊಡ್ತೀನಿ"; ರಾಜಮೌಳಿ ಹೇಳಿಕೆ ವೈರಲ್
'RRR' ನಂತರ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಈ ಬಾರಿ ಮಹೇಶ್ ಬಾಬು ಜೊತೆ ಜಕ್ಕಣ್ಣ ಕೈ ಜೋಡಿಸಿದ್ದಾರೆ. ತೆರೆಮರೆಯಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಶೀಘ್ರದಲ್ಲೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. 15 ವರ್ಷಗಳಿಂದ ಇವರಿಬ್ಬರ ಕಾಂಬಿನೇಷನ್ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೂ ಆ ಸಿನಿಮಾ ಸೆಟ್ಟೇರುತ್ತಿದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಜೋಡಿಯ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿತ್ತು. ಇದು ಮಹೇಶ್ ಬಾಬು 29ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಎಂದೇ ಕರೆಯಲಾಗುತ್ತಿದೆ. ಚಿತ್ರದ ಬಗ್ಗೆ ದಿನಕ್ಕೊಂದು ಗುಸುಗುಸು ಕೇಳಿಬರ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿದೆ. ಸದ್ಯಕ್ಕೆ ಸಿನಿಮಾಗಳು ಕೆಲಸಗಳು ನಡೀತಿದೆ ಎಂದು ಮಾತ್ರ ಹೇಳುತ್ತಾ ಬರುತ್ತಿದೆ.

ತಮ್ಮ ಮುಂದಿನ ಸಿನಿಮಾ ಅಪ್‌ಡೇಟ್ ಕೇಳಿದ ನಿರ್ದೇಶಕನಿಗೆ ಮುಕುಸು ಹಾಕಿ ಹೊಡೆದರೆ 10 ಸಾವಿರ ರೂಪಾಯಿ ಕೊಡ್ತೀನಿ ಎಂದು ರಾಜಮೌಳಿ ಹೇಳಿದ್ದಾರೆ. ಬಹಿರಂಗ ವೇದಿಕೆಯಲ್ಲೇ ಈ ರೀತಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ತಮಾಷೆಯಾಗಿ ಜಕ್ಕಣ್ಣ ನೀಡಿರುವ ಈ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಆ ಮೂಲಕ ಸದ್ಯಕ್ಕೆ SSMB29 ಅಪ್‌ಡೇಟ್ ಕೇಳಬೇಡಿ, ಹೇಳಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ 'ಕೃಷ್ಣಮ್ಮ' ಎನ್ನುವ ತೆಲುಗು ಸಿನಿಮಾ ಟ್ರೈಲರ್ ಕಾರ್ಯಕ್ರಮ ನಡೀತು. ಆ ಕಾರ್ಯಕ್ರಮಕ್ಕೆ ನಿರ್ದೇಶಕರಾದ ರಾಜಮೌಳಿ, ಅನಿಲ್ ರಾವಿಪುಡಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದರು. ಮೊದಲಿಗೆ ಮಾತನಾಡಿದ ಅನಿಲ್ ರಾವಿಪುಡಿ "ರಾಜಮೌಳಿ ತಮ್ಮ ಸ್ಪೀಚ್‌ನಲ್ಲಿ SSMB29 ಸಿನಿಮಾ ಲಾಂಚ್ ಯಾವಾಗ? ಸಿನಿಮಾ ಯಾವ ಜಾನರ್ ಎಂದು ಹೇಳಬೇಕು? ಇದು ನನ್ನ ಬೇಡಿಕೆ" ಎಂದಿದ್ದಾರೆ.
ಬಳಿಕ ವೇದಿಕೆಯಲ್ಲಿ ಮಾತನಾಡಿದ ರಾಜಮೌಳಿ 'ಕೃಷ್ಣಮ್ಮ' ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮಾತಿನ ಕೊನೆಗೆ ಅನಿಲ್ ರಾವಿಪುಡಿ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾರಾದರೂ ಒಬ್ಬರು ವಿಡಿಯೋ ಮಾಡಿ ಮತ್ತೊಬ್ಬರು ಅನಿಲ್ ತಲೆ ಮೇಲಿ ಮುಸುಕು ಹಾಕಿ ಆತನಿಗೆ ಚೆನ್ನಾಗಿ ಹೊಡೆದರೆ 10 ಸಾವಿರ ಕೊಡ್ತೀನಿ" ಎಂದು ತಮಾಷೆ ಮಾಡಿದ್ದಾರೆ. ಬಳಿಕ ಮೈಕ್ ತೆಗೆದುಕೊಂಡು ಅನಿಲ್, 10 ಸಾವಿರ ಅಂದ್ರೆ ಜಾಸ್ತಿ ಆಯ್ತು. ನಿಜಕ್ಕೂ ಯಾರಾದರೂ ಹೊಡೆದುಬಿಡ್ತಾರೆ. ಬಹುಮಾನದ ಹಣ ಕಮ್ಮಿ ಮಾಡಿ ಎಂದಿದ್ದಾರೆ.
ಸದ್ಯ ರಾಜಮೌಳಿ ಹಾಗೂ ಅನಿಲ್ ರಾವಿಪುಡಿ ಮಾತನಾಡಿರುವ ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಅನಿಲ್ ರಾವಿಪುಡಿ ಕೂಡ ಸಾಕಷ್ಟು ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಪಟಾಸ್', 'F2', 'F3' ಹೀಗೆ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ತಮಗೂ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಬಗ್ಗೆ ಬಹಳ ಕಾತರ ಇರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
'ಗುಂಟೂರು ಖಾರಂ' ಬಳಿಕ ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ವರ್ಕೌಟ್ ಸಹ ಆರಂಭಿಸಿದ್ದಾರೆ. ಕೆ.ಎಲ್ ನಾರಾಯಣ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 15 ವರ್ಷಗಳ ಹಿಂದೆಯೇ ಮೌಳಿ- ಮಹೇಶ್ ನಿರ್ಮಾಪಕರಿಗೆ ಸಿನಿಮಾ ಮಾಡಿಕೊಡುವುದಾಗಿ ಮಾತುಕತೆ ಆಗಿತ್ತು. ಆದರೆ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಇಷ್ಟು ತಡವಾಯಿತು.
ಜಕ್ಕಣ್ಣ- ಮಹೇಶ್ ಚಿತ್ರಕ್ಕೆ ಬಂಡವಾಳ ಹೂಡಲು ಸಾಕಷ್ಟು ನಿರ್ಮಾಪಕರು ಕಾಯುತ್ತಿದ್ದಾರೆ. ಹಾಲಿವುಡ್ ಸ್ಟುಡಿಯೋಗಳು ಕೂಡ ಸಿದ್ಧವಾಗಿವೆ. ಆದರೆ ಅಂದು ಕೆ.ಎಲ್ ನಾರಾಯಣಗೆ ಮಾತು ನೀಡಿದಂತೆ ಇದೀಗ ಇಬ್ಬರು ಸಿನಿಮಾ ಮಾಡಲು ಮುಂದಾಗಿದ್ದಾರೆ.


Click it and Unblock the Notifications










