"RSS ಬಗ್ಗೆ ತಿಳಿದುಕೊಳ್ಳದಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಅನಿಸಿತು"

ನಿರ್ದೇಶಕ ರಾಜಮೌಳಿ ತಂದೆ, ನಿರ್ದೇಶಕ, ಕಥೆಗಾರ ವಿಜಯೇಂದ್ರ ಪ್ರಸಾದ್ ತಮ್ಮ ಅದ್ಭುತ ಕಥೆಗಳಿಂದ ಗಮನ ಸೆಳೆದಿದ್ದಾರೆ. ಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ಕಥೆ ಕೊಟ್ಟವರು ವಿಜಯೇಂದ್ರ ಪ್ರಸಾದ್. ಅಷ್ಟೇ ಅಲ್ಲ 'ಭಜರಂಗಿ ಭಾಯ್ಜಾನ್' ಸೇರಿದಂತೆ ಕನ್ನಡ ಸಿನಿಮಾಗಳಿಗೂ ಕಥೆ ಒದಗಿಸಿದ್ದಾರೆ. ಇತ್ತೀಚೆಗೆ ಆರ್‌ಎಸ್‌ಎಸ್ ಸಂಘಟನೆಯ ಕುರಿತು ಸಿನಿಮಾ ಮಾಡೋದಾಗಿ ಅವರು ಘೋಷಿಸಿದ್ದರು.

ಇದೇ ಸಿನಿಮಾ ಬಗ್ಗೆ ಮಾತನಾಡುತ್ತಾ ಇದೀಗ ವಿಜಯೇಂದ್ರ ಪ್ರಸಾದ್ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. "ಇಷ್ಟು ದಿನ ಆರ್‌ಎಸ್‌ ಎಸ್‌ ಬಗ್ಗೆ ತಿಳಿದುಕೊಳ್ಳದೇ ಇದ್ದಿದಕ್ಕೆ ನನ್ನನ್ನು ನಾನು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎನಿಸಿತು" ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ರೀತಿ ಅವರು ಹೇಳಲು ಕಾರಣ ಏನು? ಎನ್ನುವುದನ್ನು ನೋಡುವುದಾದರೆ ಇತ್ತೀಚೆಗೆ ನಾನು ಆರ್‌ಎಸ್‌ಎಸ್ ಕುರಿತು ಅಧ್ಯಯನ ಮಾಡಿದೆ ಎಂದು ಹೇಳಿದ್ದಾರೆ. 'ನೈಜಾಂ ವಿಮುಕ್ತ ಸ್ವಾತಂತ್ಯ್ರ ಅಮೃತ ಮಹೋತ್ಸವ' ಕಾರ್ಯಕ್ರಮದಲ್ಲಿ ಶುಕ್ರವಾರ ವಿಜಯೇಂದ್ರ ಪ್ರಸಾದ್ ಭಾಗಿ ಆಗಿದ್ದರು.

SS Rajamoulis Father Vijayendra Prasad Shocking comments on RSS Based Movie

ನೈಜಾಂ ವಿರುದ್ಧ ಹೋರಾಡಿದ ವೀರರು ಕುಮುರಂ ಭೀಮ್‌, ರಾಂಜಿ ಗೊಂಡ್‌, ಶಾಯಬುಲ್ಲಾಖಾನ್‌, ಜಮಲಾಪುರ ಕೇಶವರಾವ್‌, ಚಾಕಲಿ ಐಲಮ್ಮ ಅವರ ಹೋರಾಟವನ್ನು ಸ್ಮರಿಸುತ್ತಾ ಈ ಸಮಾರಂಭ ನಡೆಸಲಾಯಿತು. ಇದೇ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಮಾತನಾಡಿದ್ದಾರೆ. ಈ ವೇಳೆ ರಜಾಕಾರ್ಯರು ಕುರಿತು, ತೆಲಂಗಾಣ ಹೋರಾಟದ ಬಗ್ಗೆ ಅವರು ಮಾತನಾಡಿದರು. ರಾಜಕಾರ್ಯರ ಮೇಲೆ ಭಾರತದಲ್ಲಿ ಮಹಿಳೆಯರು, ಗ್ರಾಮೀಣ ಪ್ರದೇಶದ ಜನ ತಿರುಗಿ ಬಿದ್ದು ಹೋರಾಡದ ವಿಚಾರವನ್ನು ನಾನು ಸುದ್ದಾಳ ಹನ್ಮಂತು ಅವರಿಂದ ತಿಳಿದುಕೊಂಡೆ ಎಂದಿದ್ದಾರೆ.

SS Rajamoulis Father Vijayendra Prasad Shocking comments on RSS Based Movie

ರಾಜಕಾರ್ಯರ ದೌರ್ಜನ್ಯ ಪ್ರಸ್ತಾಪಿಸಿ ತೆಲಂಗಾಣ ವೀರರನ್ನು ವಿಜಯೇಂದ್ರ ಪ್ರಸಾದ್ ಕೊಂಡಾಡಿದರು. 'ಆರ್‌ಎಸ್‌ಎಸ್‌' ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. "ಇದಕ್ಕು ಮುನ್ನ ನನಗೆ ಆರ್ ಎಸ್‌ ಎಸ್ ಬಗ್ಗೆ ತಿಳಿದಿರಲಿಲ್ಲ. ಅಲ್ಲದೇ ದೇಶದಲ್ಲಿ ಬಹಳಷ್ಟು ಜನರಿಗೆ ಆರ್ ಎಸ್‌ ಎಸ್ ಕುರಿತು ಇರುವ ಅಭಿಪ್ರಾಯ ನನಗೂ ಇತ್ತು, ಗಾಂಧೀಜಿ ಹತ್ಯೆ ಮಾಡಿದವರಿಗೆ ಈ ಸಂಘಟನೆಯ ಸಂಪರ್ಕ ಇತ್ತು ಎಂದು ನಂಬಿದ್ದೆ. ಆದರೆ ಆರ್‌ ಎಸ್‌ ಎಸ್ ಬಗ್ಗೆ ಸಿನಿಮಾ ಮಾಡೋಣ ಎಂದಾಗ 5 ವರ್ಷಗಳ ಹಿಂದೆ ಮೋಹನ್ ಭಾಗವತ್‌ನ ಭೇಟಿ ಮಾಡಿದ ಬಳಿಕ ನಾನು ಸಾಕಷ್ಟು ವಿಚಾರಗಳ ಬಗ್ಗೆ ನನಗೆ ಅರಿವು ಮೂಡಿತು.

"ಇಷ್ಟು ವರ್ಷ ನಾನು ಈ ಸಂಘಟನೆ ಬಗ್ಗೆ ತಿಳಿದುಕೊಳ್ಳದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಎನಿಸಿತು" ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಅಷ್ಟೇ ಅಲ್ಲ ಈ ವಿಷಯದಲ್ಲಿ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲಿ ಆರ್‌ಎಸ್‌ಎಸ್‌ ಶ್ರೇಷ್ಟತೆಯ ಬಗ್ಗೆ ಭಾರತದ ಜನರಿಗೆ ಗೊತ್ತಾಗುವಂತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ವಿಜಯೇಂದ್ರ ಪ್ರಸಾದ್ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ. ಒಬ್ಬ ಖ್ಯಾತ ಕಥೆಗಾರ ಈ ರೀತಿ ಹೇಳಿರುವುದು ಅಚ್ಚರಿ ಮೂಡಿಸಿದೆ.

ಈ ಸಂಧರ್ಭದಲ್ಲಿ ವಿವಿಧ ಪ್ರದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಹೋಗುವಂತೆ, ಮನುಷ್ಯರ ಮಧ್ಯ, ಪ್ರದೇಶಗಳ ಮಧ್ಯದ ದೂರವನ್ನು ಕಡಿಮೆ ಮಾಡುವಂತ ಕಥೆಗಳನ್ನು ನಾನು ಬರೆಯುತ್ತೇನೆ. ಇಂಡಿಯಾ, ಪಾಕಿಸ್ಥಾನ ಮಧ್ಯ ಗ್ಯಾಪ್‌ ದೂರ ಮಾಡುವ ಪ್ರಯತ್ನದಲ್ಲಿ ಭಾಗವಾಗಿ 'ಭಜರಂಗಿ ಭಾಯ್‌ಜಾನ್‌' ಸಿನಿಮಾ ಕಥೆ ಬರೆದೆ ಎಂದು ವಿಜಯೇಂದ್ರಪ್ರಸಾದ್‌ ಹೇಳಿದ್ದಾರೆ.

More from Filmibeat

English summary
SS Rajamouli's Father Vijayendra Prasad Shocking comments on RSS Based Movie. He is currently working on a scripted film about the RSS. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X