ಕೊನೆಗೂ 'ಕೆಜಿಎಫ್ 2' ಮುಟ್ಟದ 'RRR' ಅಂತಿಮ ಗಳಿಕೆ ಎಷ್ಟು?
ಎಸ್‌ಎಸ್ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'RRR' ರಿಲೀಸ್ ಆಗಿ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರ ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ಕಂಡಿದೆ.
ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ 'RRR' ಚಿತ್ರ ಬಿಡುಗಡೆಯಾಗಿದೆ. ಚಿತ್ರ ರಿಲೀಸ್‌ಗೂ ಮುನ್ನವೇ ಟಿಕೆಟ್ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ರಿಲೀಸ್ ಬಳಿಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು 'RRR'.
ಮಾರ್ಚ್‌ನಲ್ಲಿ ತೆರೆಕಂಡ RRR ಸಿನಿಮಾ ತನ್ನ ಆಟ ಮುಗಿಸಿದೆ. ಅಂದರೆ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಿದೆ. ಒಟಿಟಿಯಲ್ಲೂ ಸಿನಿಮಾ ಬಂದಿದ್ದು, ಥಿಯೇಟರ್‌ಗಳಿಂದ ಸಿನಿಮಾವನ್ನು ತೆಗೆಯಲಾಗಿದೆ. ಹಾಗಾಗಿ ಸದ್ಯ ಈ ಚಿತ್ರದ ಕ್ಲೋಸಿಂಗ್ ಕಲೆಕ್ಷನ್ ಬಗ್ಗೆ ವರದಿ ಹೊರ ಬಿದ್ದಿದೆ.

ಥಿಯೇಟರ್‌ನಲ್ಲಿ ಆಟ ನಿಲ್ಲಿಸಿದ 'RRR'!
ಮಾರ್ಚ್ 24ಕ್ಕೆ ಭರ್ಜರಿಯಾಗಿ ಪ್ಯಾನ್ ಇಂಡಿಯಾ RRR ರಿಲೀಸ್ ಆಯ್ತು. ಅಂದುಕೊಂಡ ಹಾಗೆ ಸಿನಿಮಾ ಜನರಿಂದ ಉತ್ತಮ ಪ್ರಶಂಸೆ ಪಡೆದುಕೊಳ್ಳುವುದರ ಜೊತೆಗೆ, ಹಿಟ್ ಲಿಸ್ಟ್ ಕೂಡ ಸೇರಿದೆ. ರಾಜಮೌಳಿ ಸಿನಿಮಾ ಎನ್ನುವುದರ ಜೊತೆಗೆ ಈ ಚಿತ್ರದಲ್ಲಿ ರ್ಆಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೆಸರುಗಳು ಮುಖ್ಯ ಆಕರ್ಷಣೆ ಆಗಿದ್ದವು. ಅಂತೆಯೇ ರಾಜಮೌಳಿ ಕೂಡ, ಇಬ್ಬರ ಪಾತ್ರವನ್ನು ಉತ್ತಮವಾಗಿ ರೂಪಿಸಿದ್ದರು.

RRR ಅಂತಿಮ ಗಳಿಕೆ 1139.27 ಕೋಟಿ!
RRR ಸಿನಿಮಾದ ಅಂತಿಮ ಗಳಿಕೆ ಎಷ್ಟು ಎನ್ನುವುದನ್ನು ಟ್ರೇಡ್ ವಿಶ್ಲೇಷಕರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. RRR ಒಟ್ಟಾರೆ ಅಂತಿಮ ಗಳಿಕೆ 1139.27 ಕೋಟಿ ಎಂದು ಹೇಳಲಾಗಿದೆ. ಈ ಮೂಲಕ RRR ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ಸದ್ಯ ಒಟಿಟಿಯಲ್ಲಿ ಈ ಚಿತ್ರವನ್ನು ಜನ ನೋಡುತ್ತಿದ್ದಾರೆ. ಒಟಿಟಿಯಲ್ಲಿ ಕೂಡ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

ಕೆಜಿಎಫ್ 2 ಗಳಿಕೆ ಮುರಿಯಲು ಸಾಧ್ಯವಾಗಿಲ್ಲ!
ಯಶ್ ಅಭಿನಯದ ಕೆಎಫ್ 2 ಸಿನಿಮಾ ರಿಲೀಸ್ ಆದ ಬಳಿಕಾ, RRR ಮಂಕಾಗಿ ಹೋಯ್ತು. ಈ ಚಿತ್ರದ ದಾಖಲೆಯನ್ನು ಕೆಜಿಎಫ್ 2 ನಿರಾಯಾಸವಾಗಿ ನುಂಗಿ ಹಾಕಿದೆ. ಬಾಲಿವುಡ್ ಬಾಕ್ಸಾಫಿಸ್‌ನಲ್ಲೂ ಕೂಡ RRR ಚಿತ್ರ ಹವಾ ಮಾಯ ಮಾಡಿದೆ ಕೆಜಿಎಫ್ 2. ಆದರೆ ಎರಡೂ ಸಿನಿಮಾಗಳು ಚಿತ್ರಮಂದಿರದಲ್ಲಿ ಇದ್ದ ಕಾರಣ RRR ಇನ್ನೊಂದಷ್ಟು ಗಳಿಕೆ ಕಾಣಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ 1139 ಕೋಟಿ ಗಳಿಕೆ ಕಂಡು ಸುಮ್ಮನಾಗಿದೆ. ಆದರೆ ಕೆಜಿಎಫ್ 2, 1221 ಕೋಟಿ ಗಳಿಸಿ ಇನ್ನೂ ಕೂಡ ಅದೇ ವೇಗದಲ್ಲಿ ಮುನ್ನುಗ್ಗುತ್ತಾ ಇದೆ.

ರಾಜಮೌಳಿ, ಪ್ರಶಾಂತ್ ನೀಲ್‌ಗೆ ಕಾಂಪಿಟೇಷನ್?
RRR ಮತ್ತು ಕೆಜಿಎಫ್ 2 ಸಿನಿಮಾದ ದಾಖಲೆಗಳು ಎಲ್ಲವನ್ನೂ ತಲೆಕೆಳಗಾಗುವಂತೆ ಮಾಡಿದೆ. ಬಾಹುಬಲಿ ಬಳಿಕ ರಾಜಮೌಳಿ ಸೌತ್ ಚಿತ್ರರಂಗದ ರಾಜ ಆಗಿದ್ದರು. ಆದರೆ ಈಗ ಪ್ರಶಂತ್ ನೀಲ್ ಅವರ ಸರಿ ಸಮನಾಗಿ ನಿಂತು ಬಿಟ್ಟಿದ್ದಾರೆ. ಹಾಗಾಗಿ ಮುಂದೆ ಬರುವ ಅವರ ಸಿನಿಮಾ ನಡುವೆ ಸ್ಪರ್ಧೆ ಹುಟ್ಟಿಕೊಳ್ಳುವುದು ಪಕ್ಕಾ.


Click it and Unblock the Notifications











