twitter
    For Quick Alerts
    ALLOW NOTIFICATIONS  
    For Daily Alerts

    'RRR' ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯ ಚಿತ್ರೀಕರಣಕ್ಕೆ ರಾಜಮೌಳಿ ತೆಗೆದುಕೊಂಡ ದಿನಗಳೆಷ್ಟು? ಇಲ್ಲಿದೆ ಮಾಹಿತಿ

    By ಫಿಲ್ಮ್ ಡೆಸ್ಕ್
    |

    ದಕ್ಷಿಣ ಭಾರತದ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ.

    ಲಾಕ್ ಡೌನ್ ಬಳಿಕ ಹೈದರಾಬಾದ್ ನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡ ಸುಮಾರು ಎರಡು ತಿಂಗಳುಗಳ ಕಾಲ ಶೂಟಿಂಗ್ ಮಾಡಿ, ಇದೀಗ ಪುಣೆ ಕಡೆ ಹೊರಟಿದೆ. ಆರ್ ಆರ್ ಆರ್ ತಂಡ ಹೈದರಾಬಾದ್ ನಲ್ಲಿ ಸಿನಿಮಾದ ಪ್ರಮುಖ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿದಿದೆಯಂತೆ. 50 ದಿನಗಳಲ್ಲಿ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡಿ ಮುಗಿಸಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

    ಬಾಲಿವುಡ್ ಸ್ಟಾರ್ ನಟ ಆರ್‌ಆರ್‌ಆರ್ ಸಿನಿಮಾದಲ್ಲಿ?ಬಾಲಿವುಡ್ ಸ್ಟಾರ್ ನಟ ಆರ್‌ಆರ್‌ಆರ್ ಸಿನಿಮಾದಲ್ಲಿ?

    ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿರುವ ಆರ್ ಆರ್ ಆರ್ ತಂಡ ಇದೀಗ ಪುಣೆ ಕಡೆ ಪಯಣ ಬೆಳೆಸಿದೆಯಂತೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಪುಣೆ ಚಿತ್ರೀಕರಣ ಮಾಡಿ ಮುಗಿಸಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಪುಣೆ ಚಿತ್ರೀಕರಣ ಕೈಬಿಟ್ಟಿತ್ತು. ಇದೀಗ ಮತ್ತೆ ಪುಣೆ ಕಡೆ ಹೊರಟಿದೆ.

     SS Rajamoulis RRR movie team wraps up Major Action sequence in 50 days

    ಸದ್ಯದಲ್ಲೇ ನಟ ರಾಮ್ ಚರಣ್, ಜೂ.ಎನ್ ಟಿ ಆರ್ ಮತ್ತು ಅಲಿಯಾ ಭಟ್ ಪುಣೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಆರ್ ಆರ್ ಆರ್ ಸಿನಿಮಾದಿಂದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪಾತ್ರದ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    Recommended Video

    ಶಿವಣ್ಣನ ಮುಂದಿನ ಸಿನಿಮಾದ ಸ್ಟಂಟ್ ಮಾಸ್ಟರ್ ಇವರೇ...!! | Filmibeat Kannada

    ಭಾರತದ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಆರ್ ಆರ್ ಆರ್ 2021 ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಲಾಗಿತ್ತು. ಆದರೀಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಹೊಸ ಬಿಡುಗಡೆಯ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಆರ್ ಆರ್ ಆರ್ ತೆಲುಗು ಸೇರಿದಂತೆ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ.

    English summary
    SS Rajamouli's RRR movie team wraps up Major Action sequence in 50 days.
    Wednesday, December 2, 2020, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X