ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ ರಾಜಮೌಳಿ
ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಸದ್ಯ 'ಆರ್.ಆರ್.ಆರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತವಾಗಿದೆ.
ಅಂದ್ಹಾಗೆ ಆರ್ ಆರ್ ಆರ್ ಸಿನಿಮಾವನ್ನು ಈ ಮೊದಲು ಇದೇ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಅದರಂತೆ, ಈ ವರ್ಷವೇ 'ಆರ್.ಆರ್.ಆರ್' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು ಅಂತ ಅಭಿಮಾನಿಗಳು, ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದರು.
ಆರ್.ಆರ್.ಆರ್' ಬಗ್ಗೆ ನಿರೀಕ್ಷೆ, ಕುತೂಹಲ ಡಬಲ್ ಆಗಿರುವ ಹೊತ್ತಲ್ಲೇ ಚಿತ್ರತಂಡ ಸಿನಿಮಾ ರಿಲೀಸ್ ಅನ್ನು ಮುಂದಿನ ವರ್ಷಕ್ಕೆ ಹಾಕಿ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಆದರೀಗ ಚಿತ್ರದಿಂದ ಮತ್ತೊಂದು ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, 'ಆರ್ ಆರ್ ಆರ್' ಸಿನಿಮಾ ರಿಲೀಸ್ ಮತ್ತೆ ಮುಂದೆ ಹೋಗಿದೆ. ಮುಂದೆ ಓದಿ..

ಮೂರನೆ ಬಾರಿ ರಿಲೀಸ್ ಡೇಟ್ ಬದಲಾವಣೆ
ರಾಜಮೌಳಿ ನಿರ್ದೇಶನದ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ತೇಜ ಅಭಿನಯದ 'ಆರ್.ಆರ್.ಆರ್' ಚಿತ್ರದ ಬಿಡುಗಡೆ ಮತ್ತೆ ಪೋಸ್ಟ್ ಪೋನ್ ಆಗಿದೆ. ಈ ವರ್ಷದ ಜುಲೈ 30 ರಿಂದ ಮುಂದಿನ ವರ್ಷ ಜನವರಿಗೆ ಶಿಫ್ಟ್ ಆಗಿದ್ದ 'ಆರ್ ಆರ್ ಆರ್' ರಿಲೀಸ್ ಈಗ ಮತ್ತೆ ಮುಂದಕ್ಕೆ ಹೋಗಿದೆ.

ಜನವರಿ 8ಕ್ಕೆ ರಿಲೀಸ್ ಆಗಬೇಕಿತ್ತು
ಇತ್ತೀಚಿಗೆ ಜುಲೈಯಿಂದ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ್ದ ಸಿನಿಮಾತಂಡ ಹೊಸ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿತ್ತು. ಮುಂದಿನ ವರ್ಷ 2021 ಜನವರಿ 8ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದರು.

ಕೊರೊನಾ ಎಫೆಕ್ಟ್: ಸಿನಿಮಾ ರಿಲೀಸ್ ಮುಂದಕ್ಕೆ
ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ನಿಂತುಹೋಗಿದೆ. ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಇನ್ನೂ ಬಾಕಿ ಇದೆ. ಒಂದುವೇಳೆ ಚಿತ್ರೀಕರಣ ಬೇಗ ಮುಗಿದರು ಪೋಸ್ಟ್ ಪ್ರಡೊಕ್ಷನ್ ಕೆಲಸಕ್ಕೆ ತುಂಬಾ ಸಮಯ ಬೇಕಾಗುತ್ತೆ. ಚಿತ್ರಕ್ಕೆ ವಿ ಎಫ್ ಎಕ್ಸ್ ಕೆಲಸ ತುಂಬಾ ಇದೆ. ಹಾಗಾಗಿ ಜನವರಿಗೆ ಅಂದುಕೊಂಡ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗುವುದು ಕಷ್ಟವೆಂದು ನಿರ್ಮಾಪಕ ದಾನಯ್ಯ ಸ್ಪಷ್ಟಪಡಿಸಿದ್ದಾರೆ.

ಪುಣೆ ಚಿತ್ರೀಕರಣ ಕ್ಯಾನ್ಸಲ್, ಹೈದರಾಬಾದ್ ನಲ್ಲಿಯೇ ಚಿತ್ರೀಕರಣ
ಆರ್ ಆರ್ ಆರ್ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಪುಣೆಯಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಕೊರೊನಾ ಹಾವಳಿಯ ಪರಿಣಾಮ ಬೇರೆ ರಾಜ್ಯದಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನು ಹೈದರಾಬಾದ್ ನಲ್ಲಿ ಮಾಡಲು ನಿರ್ಧರಿಸಿದೆ. ದೊಡ್ಡ ಮಟ್ಟದಲ್ಲಿ ಕಲಾವಿದರನ್ನು ಮತ್ತು ತಂತ್ರಜ್ಞರೊಂದಿಗೆ ಬೇರೆ ರಾಜ್ಯಕ್ಕೆ ಹೋಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದೆ.

ಹೊಸ ರಿಲೀಸ್ ಡೇಟ್ ಯಾವಾಗ?
400 ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾ 10 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ದೊಡ್ಡ ತಾರಾಬಳಗವಿರುವ ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈಗ ಮತ್ತೆ ಸಿನಿಮಾ ಮುಂದಕ್ಕೆ ಹೋಗಿರುವ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೆ ಇನ್ನೂ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.


Click it and Unblock the Notifications











